ಕೋವಿಡ್ ಮೂರನೇ ಅಲೆಯಲ್ಲಿ ಕೇಸ್ ಗಳ ಸಂಖ್ಯೆ ಇಳಿಕೆ; ಸರಾಸರಿ 44 ವರ್ಷ ವಯಸ್ಸಿನವರು ಹೆಚ್ಚು ಸೋಂಕಿತರು: ಕೇಂದ್ರ ಸರ್ಕಾರ
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹಾಗೂ ಪಾಸಿಟಿವಿಟಿ ದರ ಇಳಿಕೆಯಾಗಿದ್ದು, ಕೇರಳ ಮತ್ತು ಮಿಜೋರಾಂನಲ್ಲಿ ಈಗಲೂ ಪ್ರಕರಣಗಳ ಸಂಖ್ಯೆ ಹಾಗೂ ಪಾಸಿಟಿವಿಟಿ ಪ್ರಮಾಣದಲ್ಲಿ ಹೆಚ್ಚಳ ದಾಖಲಾಗಿರುವುದಾಗಿ ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
Published: 03rd February 2022 06:20 PM | Last Updated: 03rd February 2022 07:07 PM | A+A A-

ಆರೋಗ್ಯ ಕಾರ್ಯಕರ್ತರೊಬ್ಬರು ವ್ಯಕ್ತಿಗೆ ಲಸಿಕೆ ನೀಡುತ್ತಿರುವ ಚಿತ್ರ
ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹಾಗೂ ಪಾಸಿಟಿವಿಟಿ ದರ ಇಳಿಕೆಯಾಗಿದ್ದು, ಕೇರಳ ಮತ್ತು ಮಿಜೋರಾಂನಲ್ಲಿ ಈಗಲೂ ಪ್ರಕರಣಗಳ ಸಂಖ್ಯೆ ಹಾಗೂ ಪಾಸಿಟಿವಿಟಿ ಪ್ರಮಾಣದಲ್ಲಿ ಹೆಚ್ಚಳ ದಾಖಲಾಗಿರುವುದಾಗಿ ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿದ್ದು, ಕೋವಿಡ್ ಸೋಂಕಿನ ಹರಡುವಿಕೆ ತಗ್ಗಿದೆ. 268 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 5ಕ್ಕಿಂತಲೂ ಕಡಿಮೆಯಿದೆ. ಕೋವಿಡ್ ಲಸಿಕೆ ಪ್ರಮಾಣ ಹೆಚ್ಚಳದಿಂದ ಕೋವಿಡ್-19 ಸಾವಿನ ಪ್ರಮಾಣದಲ್ಲಿ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ.
ಕೋವಿಡ್-19 ದೈನಂದಿನ ಸಕ್ರಿಯ ಪ್ರಕರಣಗಳು ಮತ್ತು ದೈನಂದಿನ ಪಾಸಿಟಿವಿಟಿ ಪ್ರಮಾಣದಲ್ಲಿ ಸತತವಾಗಿ ಇಳಿಕೆಯಾಗಿದ್ದು, ಸೋಂಕಿನ ಇಳಿಮುಖವನ್ನು ತೋರಿಸುತ್ತಿದೆ. ಕೋವಿಡ್ ಸೋಂಕಿತರಲ್ಲಿ ಸಾವು ಅಥವಾ ಸಂಕೀರ್ಣತೆ ಅವಕಾಶ ಇಲ್ಲದಂತಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಕೋವಿಡ್ ಲಸಿಕೆಯಲ್ಲಿ ವಂಚನೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರ, ಹಾದಿತಪ್ಪಿಸುವ ಯತ್ನ: ಕೇಂದ್ರ ಸರ್ಕಾರ
ಹಿಂದಿನ ಅಲೆಗಳಿಗೆ ಹೋಲಿಸಿದರೆ ಸರಾಸರಿ 44 ವರ್ಷ ವಯಸ್ಸಿನವರು ಈ ಬಾರಿ ಹೆಚ್ಚು ಸೋಂಕಿಗೆ ತುತ್ತಾಗಿದ್ದಾರೆ. ಈ ಅಲೆಯಲ್ಲಿ ಗಂಟಲು ಕೆರೆತ ಸಮಸ್ಯೆ ಹೆಚ್ಚಿನ ರೋಗಿಗಳಲ್ಲಿ ಕಂಡುಬಂದಿದೆ. ಈ ಬಾರಿ ಚಿಕಿತ್ಸೆಗಾಗಿ ಔಷಧ ಬಳಕೆ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
11 ರಾಜ್ಯಗಳಲ್ಲಿ ಶಾಲೆಗಳು ಪೂರ್ಣವಾಗಿ ಪುನರ್ ಆರಂಭವಾಗಿವೆ. 16 ರಾಜ್ಯಗಳಲ್ಲಿ ಪ್ರೌಢ ತರಗತಿಗಳು ಭಾಗಶ: ಆರಂಭವಾಗಿದ್ದರೆ, 9 ಜಿಲ್ಲೆಗಳಲ್ಲಿ ರದ್ದಾಗಿವೆ. ಶಾಲೆಗಳಲ್ಲಿ ಶೇಕಡಾ 95 ರಷ್ಟು ಬೋಧಕ- ಬೋಧಕೇತರ ಸಿಬ್ಬಂದಿ ಸಂಪೂರ್ಣವಾಗಿ ಲಸಿಕೆ ಪಡೆದಿದ್ದು, ಕೆಲ ರಾಜ್ಯಗಳು ಲಸಿಕೆ ನೀಡುವಿಕೆಯಲ್ಲಿ ಶೇಕಡಾ 100 ರಷ್ಟು ಗುರಿ ಸಾಧಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.