ಉತ್ತರಾಖಂಡ್ ನಲ್ಲಿ ಹವಾಮಾನ ವೈಪರಿತ್ಯ; ಪ್ರಧಾನಿ ಮೋದಿ ಅವರ ವರ್ಚ್ಯುಯಲ್ ರ್ಯಾಲಿ ರದ್ದು
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಾಖಂಡ್ ನಲ್ಲಿ ಫೆ.04 ರಂದು ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚ್ಯುಯಲ್ ರ್ಯಾಲಿ ಹವಾಮಾನ ವೈಪರಿತ್ಯದ ಕಾರಣ ರದ್ದುಗೊಂಡಿದೆ.
Published: 04th February 2022 11:59 AM | Last Updated: 04th February 2022 01:28 PM | A+A A-

ಪ್ರಧಾನಿ ಮೋದಿ
ಡೆಹ್ರಾಡೂನ್: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಾಖಂಡ್ ನಲ್ಲಿ ಫೆ.04 ರಂದು ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚ್ಯುಯಲ್ ರ್ಯಾಲಿ ಹವಾಮಾನ ವೈಪರಿತ್ಯದ ಕಾರಣ ರದ್ದುಗೊಂಡಿದೆ.
ರ್ಯಾಲಿ ರದ್ದುಗೊಳಿಸುವ ನಿರ್ಧಾರವನ್ನು ಸಂಘಟನೆಯ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದ್ದು, ಶೀಘ್ರವೇ ಹೊಸ ದಿನಾಂಕವನ್ನು ಘೋಷಿಸಲಾಗುವುದು ಎಂದು ಪಕ್ಷದ ಮಾಧ್ಯಮ ವಿಭಾಗದ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಅಲ್ಮೋರಾ ಸಂಸತ್ ಕ್ಷೇತ್ರದ 14 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚ್ಯುಯಲ್ ರ್ಯಾಲಿ ನಡೆಸಬೇಕಿತ್ತು.
ಫೆ.14 ರಂದು ಉತ್ತರಾಖಂಡ್ ವಿಧಾನಸಭಾ ಚುನಾವಣೆ ನಡೆಯಲಿದೆ.