ಮುಂಬೈನಲ್ಲಿ ವಿಚ್ಛೇದನಕ್ಕೆ ಟ್ರಾಫಿಕ್ ಜಾಮ್ ಕಾರಣ ಎಂದ ಮಾಜಿ ಸಿಎಂ ಪತ್ನಿ; ಬೆಂಗಳೂರಿಗರು ಇದನ್ನು ಓದಬೇಡಿ ಎಂದ ಪ್ರಿಯಾಂಕಾ
ಮುಂಬೈನಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಶನಿವಾರ ಹೇಳಿದ್ದಾರೆ.
Published: 05th February 2022 08:26 PM | Last Updated: 05th February 2022 08:26 PM | A+A A-

ಅಮೃತಾ ಫಡ್ನವಿಸ್
ಮುಂಬೈ: ಮುಂಬೈನಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಶನಿವಾರ ಹೇಳಿದ್ದಾರೆ.
ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಗಳು ಟ್ರಾಫಿಕ್ ಜಾಮ್‌ನಿಂದ ನಡೆಯುತ್ತಿವೆ. ಪ್ರತಿನಿತ್ಯ ರಸ್ತೆಗುಂಡಿಗಳು ಮತ್ತು ಟ್ರಾಫಿಕ್ ಜಾಮ್‌ಗಳನ್ನು ನೋಡುತ್ತಿರುವ ನಾನು ಒಬ್ಬ ಸಾಮಾನ್ಯ ನಾಗರಿಕಳಾಗಿ ಇದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ.
ಮುಂಬೈನಲ್ಲಿ ಟ್ರಾಫಿಕ್ ಜಾಮ್ ನಿಂದ ಎಷ್ಟು ವಿಚ್ಛೇದನಗಳು ನಡೆಯುತ್ತಿವೆ ಗೊತ್ತಾ? ಶೇ.3ರಷ್ಟು ವಿಚ್ಛೇದನಗಳು ಸಂಚಾರ ದಟ್ಟಣೆ ಕಾರಣದಿಂದ ಆಗುತ್ತಿವೆ. ಟ್ರಾಫಿಕ್ ಸಮಸ್ಯೆಗಳಿಂದಾಗಿ ಜನರು ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಅಮೃತಾ ಹೇಳಿದ್ದಾರೆ.
ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಅವರು ಅಮೃತಾ ಫಡ್ನವಿಸ್ ಅವರ ಹೇಳಿಕೆ ಆಶ್ಚರ್ಯಕರ ಮತ್ತು “ಬಿಜೆಪಿಗೆ ಸಂಬಂಧಿಸಿದ ಜನರು ಮಾತ್ರ ಈ ರೀತಿಯ ಕಾಮೆಂಟ್ ಮಾಡಲು ಸಾಧ್ಯ. ಇಂತಹ ಕಾಮೆಂಟ್ ಗಳಿಂದ ಜನರು ಬೇಸತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಅಮೃತಾ ಫಡ್ನವಿಸ್ ಅವರ ಹೆಸರನ್ನು ಹೆಸರಿಸದೆ, ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, “ಈ ದಿನದ ಅತ್ಯುತ್ತಮ ತರ್ಕ ಪ್ರಶಸ್ತಿಯು ರಸ್ತೆಗಳಲ್ಲಿ ಟ್ರಾಫಿಕ್‌ನಿಂದಾಗಿ ಶೇ.3 ರಷ್ಟು ವಿಚ್ಛೇದನವಾಗುತ್ತಿದೆ ಎಂದು ಹೇಳಿಕೊಳ್ಳುವ ಮಹಿಳೆಗೆ ಸಲ್ಲುತ್ತದೆ. ದಯವಿಟ್ಟು ವಿರಾಮವನ್ನು ತೆಗೆದುಕೊಳ್ಳಿ. ಬೆಂಗಳೂರು ಕುಟುಂಬಗಳು ದಯವಿಟ್ಟು ಇದನ್ನು ಓದಬೇಡಿ, ನಿಮ್ಮ ವೈವಾಹಿಕ ಜೀವನಕ್ಕೆ ಮಾರಕವಾಗಬಹುದು ಎಂದಿದ್ದಾರೆ.