ಭಾರತ ರತ್ನ, 'ಮಾಧುರ್ಯ ರಾಣಿ', 'ಗಾನಕೋಗಿಲೆ' ಲತಾ ಮಂಗೇಶ್ಕರ್ ಹುಟ್ಟು-ಬಾಲ್ಯ, ವೃತ್ತಿ-ಪ್ರಶಸ್ತಿ-ಸನ್ಮಾನಗಳು

ಭಾರತ ಸಂಗೀತ ಲೋಕದ ದಂತಕಥೆ ಗಾಯಕಿ(Nightingale) ಲತಾ ಮಂಗೇಶ್ಕರ್(Lata Mangeshkar) ಅವರು ಸಾವಿರಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಗೌರವಾನ್ವಿತ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ಮಧುರವಾದ ಮತ್ತು ಆಕರ್ಷಕವಾದ ಧ್ವನಿಯೇ ಅವರ ಜನಪ್ರಿಯತೆಗೆ ಕಾರಣ.

Published: 06th February 2022 12:28 PM  |   Last Updated: 06th February 2022 12:32 PM   |  A+A-


Lata Mangeshkar(File photo)

ಲತಾ ಮಂಗೇಶ್ಕರ್(ಸಂಗ್ರಹ ಚಿತ್ರ)

Online Desk

ಭಾರತ ಸಂಗೀತ ಲೋಕದ ದಂತಕಥೆ ಗಾಯಕಿ(Nightingale) ಲತಾ ಮಂಗೇಶ್ಕರ್(Lata Mangeshkar) ಅವರು ಸಾವಿರಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಗೌರವಾನ್ವಿತ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ಮಧುರವಾದ ಮತ್ತು ಆಕರ್ಷಕವಾದ ಧ್ವನಿಯೇ ಅವರ ಜನಪ್ರಿಯತೆಗೆ ಕಾರಣ.

13 ನೇ ವಯಸ್ಸಿನ ಬಾಲಕಿಯಾಗಿದ್ದಾಗ ಲತಾ ಮಂಗೇಶ್ಕರ್ ಅವರು 1942ರಲ್ಲಿ ಹಾಡಲು ಪ್ರಾರಂಭಿಸಿದರು. ಭಾರತೀಯ ಭಾಷೆಗಳಲ್ಲಿ 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. 2001 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಪಡೆದರು.

ಹುಟ್ಟು, ಬಾಲ್ಯ: ಲತಾ ಮಂಗೇಶ್ಕರ್ ಅವರು 28 ಸೆಪ್ಟೆಂಬರ್ 1929 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು. ಐದು ಮಂದಿ ಒಡಹುಟ್ಟಿದವರಲ್ಲಿ ಹಿರಿಯರು. ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ತಾಯಿ ಸೇವಂತಿ ಮಂಗೇಶ್ಕರ್. ಅವರ ತಂದೆ ಪ್ರಸಿದ್ಧ ಮರಾಠಿ ರಂಗಭೂಮಿ ಕಲಾವಿದ. ಮಾಸ್ಟರ್ ದೀನಾನಾಥ್ ಎಂದು ಕರೆಯಲ್ಪಡುತ್ತಿದ್ದರು.

13 ನೇ ವಯಸ್ಸಿನಲ್ಲಿ ವಸಂತ ಜೋಗ್ಲೇಕರ್ ಅವರ ಮರಾಠಿ ಚಲನಚಿತ್ರ 'ಕಿತಿ ಹಸಾಲ್‌' ಗಾಗಿ ಹಾಡಲು ಆರಂಭಿಸಿದರು. ಲತಾ ಮಂಗೇಶ್ಕರ್  ಮೂಲ ಹೆಸರು "ಹೇಮಾ". ತಂದೆ ದೀನನಾಥ್ ತಮ್ಮ ಭಾವಬಂಧನ್ ಎಂಬ ನಾಟಕದಲ್ಲಿನ ಲತಾ ಎಂಬ ಪಾತ್ರಧಾರಿಯ ಹೆಸರನ್ನು ಮಗಳಿಗೆ ಇಟ್ಟರು. ಇವರ ಒಡಹುಟ್ಟಿದವರ ಹೆಸರುಗಳು ಮೀನಾ, ಆಶಾ, ಉಷಾ ಮತ್ತು ಹೃದಯನಾಥ್. ಎಲ್ಲರೂ ನಿಪುಣ ಗಾಯಕರು ಮತ್ತು ಸಂಗೀತಗಾರರು.

ತನ್ನ ಮೊದಲ ಸಂಗೀತ ಪಾಠವನ್ನು ತಂದೆಯಿಂದಲೇ ಪಡೆದಿದ್ದರು. ಐದು ವರ್ಷದವಳಿದ್ದಾಗ, ತಂದೆಯ ಸಂಗೀತ ಪ್ರಧಾನ ನಾಟಕಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದರಂತೆ ಲತಾ. 

ಆರು ದಶಕಗಳಿಗೂ ಹೆಚ್ಚು ಕಾಲದ ಅವರ ವೃತ್ತಿಜೀವನದಲ್ಲಿ, ಬಾಲಿವುಡ್ ನಟಿಯರ ನೃತ್ಯಕ್ಕೆ ತನ್ನದೇ ಧ್ವನಿ ನೀಡಿ ನಟಿಯರ ಅಭಿನಯದಲ್ಲಿಯೂ ಹಾಸುಹೊಕ್ಕಿದ್ದರು. ಅವರು ಭಾರತೀಯ ಚಲನಚಿತ್ರ ಸಂಗೀತದ ಮೇಲೆ ಅಭೂತಪೂರ್ವ ಪ್ರಭಾವವನ್ನು ಹೊಂದಿದ್ದರು ಎಂಬುದರಲ್ಲಿ ಸಂದೇಹವಿಲ್ಲ. 

1940-50ರ ದಶಕದಲ್ಲಿ ಲತಾ ವೃತ್ತಿಜೀವನ: ಲತಾ ಮಂಗೇಶ್ಕರ್ ಅವರಿಗೆ 13 ವರ್ಷ ವಯಸ್ಸಾಗಿದ್ದಾಗ, ಅವರ ತಂದೆ 1942ರಲ್ಲಿ ಹೃದಯಾಘಾತದಿಂದ ನಿಧನರಾದರು, ಮಾಸ್ಟರ್ ವಿನಾಯಕ್ ಅಥವಾ ವಿನಾಯಕ್ ದಾಮೋದರ್ ಕರ್ನಾಟಕಿ ಎಂಬ ಹೆಸರಿನ ನವಯುಗ್ ಚಿತ್ರಪಟ ಚಲನಚಿತ್ರ ಕಂಪನಿಯ ಮಾಲೀಕರು ಅವರನ್ನು ನೋಡಿಕೊಂಡರು. ಅವರು ಮಂಗೇಶ್ಕರ್ ಕುಟುಂಬದ ಆಪ್ತರಾಗಿದ್ದರು. ಗಾಯಕಿ ಮತ್ತು ನಟಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಲು ಅವರು ಲತಾಗೆ ಸಹಾಯ ಮಾಡಿದರು.
ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಕುಟುಂಬದ ಹಿರಿಯ ಮಗಳಾಗಿ ಲತಾರ ಮೇಲೆ ಖಂಡಿತವಾಗಿಯೂ ಜವಾಬ್ದಾರಿಗಳಿದ್ದವು. 

1948ರಲ್ಲಿ, ವಿನಾಯಕ್ ನಿಧನರಾದರು. ಸಂಗೀತ ನಿರ್ದೇಶಕ ಗುಲಾಮ್ ಹೈದರ್ ಅವರು ಗಾಯಕಿಯಾಗಿ ಮಾರ್ಗದರ್ಶನ ನೀಡಿದರು. ಅವರು ನಿರ್ಮಾಪಕ ಶಶಧರ್ ಮುಖರ್ಜಿ ಅವರಿಗೆ ಲತಾ ಅವರನ್ನು ಪರಿಚಯಿಸಿದರು. ಅಂದಾಜ್ (1949) ನಲ್ಲಿ "ಉತಯೇ ಜಾ ಉಂಕೆ ಸಿತಂ" ಎಂಬ ಹಿಟ್ ಗೀತೆಯನ್ನು ಹಾಡಿದ್ದರು. ಮುಂದೆ ಬಾಲಿವುಡ್ ನಲ್ಲಿ ನರ್ಗೀಸ್ ಮತ್ತು ವಹೀದಾ ರೆಹಮಾನ್‌ನಿಂದ ಹಿಡಿದು ಮಾಧುರಿ ದೀಕ್ಷಿತ್ ಮತ್ತು ಪ್ರೀತಿ ಜಿಂಟಾವರೆಗೆ ಹಿಂದಿ ಚಿತ್ರರಂಗದ ಪ್ರತಿ ಪೀಳಿಗೆಯನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಪ್ರಮುಖ ನಾಯಕಿಗೆ ತಮ್ಮ ಸಂಗೀತದ ಧ್ವನಿಯನ್ನು ನೀಡಿದರು.

ಫಿಲ್ಮ್ ಫೇರ್ ಪ್ರಶಸ್ತಿ: ಮಧುಮತಿ (1958) ನಿಂದ ಸಲೀಲ್ ಚೌಧರಿ ಅವರ ಸಂಯೋಜನೆಯ "ಆಜಾ ರೇ ಪರದೇಸಿ" ಗಾಗಿ ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. ಬಾಗಿ (1953), ರೈಲ್ವೇ ಪ್ಲಾಟ್‌ಫಾರ್ಮ್ (1955), ಪಾಕೆಟ್‌ಮಾರ್ (1956), ಮಿ. ಲಂಬು (1956), ದೇಖ್ ಕಬೀರಾ ರೋಯಾ (1957), ಅದಾಲತ್ (1958), ಜೈಲರ್ (1958), ಮೊಹರ್ (1959), ಮತ್ತು ಚಾಚಾ ಜಿಂದಾಬಾದ್ (1959) ಗೀತೆಗಳಿಗೆ ಹಾಡಿದರು.

1961 ರಲ್ಲಿ ಲತಾ ಮಂಗೇಶ್ಕರ್ ಅವರು ಬರ್ಮನ್ ಅವರ ಸಹಾಯಕ ಜೈದೇವ್ ಅವರ "ಅಲ್ಲಾ ತೇರೋ ನಾಮ್" ಮತ್ತು "ಪ್ರಭು ತೇರೋ ನಾಮ್" ಎಂಬ ಎರಡು ಜನಪ್ರಿಯ ಭಜನೆಗಳನ್ನು ರೆಕಾರ್ಡ್ ಮಾಡಿದರು. ಹೇಮಂತ್ ಕುಮಾರ್ ಸಂಯೋಜಿಸಿದ ಬೀಸ್ ಸಾಲ್ ಬಾದ್‌ನ "ಕಹಿನ್ ದೀಪ್ ಜಲೇ ಕಹಿನ್ ದಿಲ್" ಹಾಡಿಗೆ 1962 ರಲ್ಲಿ ಅವರಿಗೆ ಎರಡನೇ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ನೀಡಲಾಯಿತು.

ಏ ಮೇರೆ ವತನ್ ಕೆ ಲೋಗೋ: ಜನವರಿ 1963ರಲ್ಲಿ ನಡೆದ ಭಾರತ-ಚೀನಾ ಯುದ್ಧದ ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್ ಅವರು ದೇಶಭಕ್ತಿಯ ಗೀತೆಯನ್ನು ಹಾಡಿದರು. ಆಗ ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರ ಸಮ್ಮುಖದಲ್ಲಿ "ಏ ಮೇರೆ ವತನ್ ಕೆ ಲೋಗೋ" ಹಾಡಿದ್ದರು. ಈ ಹಾಡು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಕಣ್ಣೀರು ತರಿಸಿತು. ಈ ಹಾಡನ್ನು ಸಿ.ರಾಮಚಂದ್ರ ಅವರು ರಚಿಸಿದ್ದು, ಕವಿ ಪ್ರದೀಪ್ ಬರೆದಿದ್ದಾರೆ.

ಪರಿಚಯ ಚಿತ್ರದ "ಬೀಟಿ ನಾ ಬಿಟೈ" ಹಾಡಿಗಾಗಿ ಅವರು 1973 ರಲ್ಲಿ ಮೊದಲ ಬಾರಿಗೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. ಇದನ್ನು ಆರ್.ಡಿ ಬರ್ಮನ್ ಸಂಯೋಜಿಸಿ, ಗುಲ್ಜಾರ್ ಬರೆದಿದ್ದಾರೆ.

2010ರಲ್ಲಿ ಲತಾ ಮಂಗೇಶ್ಕರ್ ವೃತ್ತಿ: 12 ಏಪ್ರಿಲ್ 2011 ರಂದು Sarhadein: Music Beyond Boundaries ಎಂಬ ಆಲ್ಬಂ ಅನ್ನು ಬಿಡುಗಡೆ ಮಾಡಿದರು. ಇದು ಮಂಗೇಶ್ಕರ್ ಮತ್ತು ಮೆಹದಿ ಹಸನ್ ಅವರ ಡ್ಯುಯೆಟ್ ತೇರಾ ಮಿಲ್ನಾ ಬಹುತ್ ಅಚಾ ಲಗೇ ಅನ್ನು ಒಳಗೊಂಡಿದೆ. ಅವರು ಬೆವಫಾ (2005) ಗಾಗಿ ಸಂಯೋಜಕ ನದೀಮ್-ಶ್ರವಣ್ "ಕೈಸೆ ಪಿಯಾ ಸೆ" ಗಾಗಿ ಹಾಡನ್ನು ರೆಕಾರ್ಡ್ ಮಾಡಿದ್ದಾರೆ. ಶಮೀರ್ ಟಂಡನ್ ಅವರು ಸತ್ರಾಂಗೀ ಪ್ಯಾರಾಚೂಟ್ (2011) ಚಿತ್ರಕ್ಕಾಗಿ ಅವರ "ತೇರೆ ಹಸ್ನೆ ಸಾಯಿ ಮುಜೆಕೊ" ಹಾಡನ್ನು ರೆಕಾರ್ಡ್ ಮಾಡಿದ್ದಾರೆ.

ತನ್ನ ಸ್ವಂತ ಸ್ಟುಡಿಯೋದಲ್ಲಿ ಹಾಡನ್ನು ರೆಕಾರ್ಡ್ ಮಾಡಿದ್ದಾರೆ. ಡುನ್ನೋ Y2-ಲೈಫ್ ಈಸ್ ಎ ಮೊಮೆಂಟ್ (2015) ಗಾಗಿ "ಜೀನಾ ಕ್ಯಾ ಹೈ, ಜಾನಾ ಮೈನೆ", 28 ನವೆಂಬರ್ 2012 ರಂದು ಭಜನ್‌ಗಳ ಆಲ್ಬಂನೊಂದಿಗೆ ತಮ್ಮದೇ ಆದ ಸಂಗೀತ ಲೇಬಲ್ 'LM ಮ್ಯೂಸಿಕ್' ಅನ್ನು ಪ್ರಾರಂಭಿಸಿದರು. ಅವರು 2014 ರಲ್ಲಿ ಬೆಂಗಾಲಿ ಆಲ್ಬಮ್ ಅನ್ನು ರೆಕಾರ್ಡ್ ಮಾಡಿದರು. ಅವರು 2019 ರಲ್ಲಿ ಮಯೂರೇಶ್ ಪೈ ಅವರು ಸಂಯೋಜಿಸಿದ "ಸೌಗಂಧ್ ಮುಜೆ ಈಸ್ ಮಿಟ್ಟಿ ಕಿ" ಹಾಡನ್ನು ಬಿಡುಗಡೆ ಮಾಡಿದರು. ಇದು ಭಾರತೀಯ ಸೇನೆ ಮತ್ತು ರಾಷ್ಟ್ರಕ್ಕೆ ನೀಡಿದ ಗೌರವವಾಗಿದೆ.

ಹಿನ್ನೆಲೆ ಗಾಯಕಿ, ಸಂಗೀತ ನಿರ್ದೇಶಕಿ, ನಿರ್ಮಾಪಕಿ
ಅವರು ನಾಲ್ಕು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ: 1953 - ಮರಾಠಿಯಲ್ಲಿ ವಾದಲ್, 1953 - ಹಿಂದಿಯಲ್ಲಿ ಝಾಂಜರ್ ಮತ್ತು, ಸಿ. ರಾಮಚಂದ್ರ ಅವರೊಂದಿಗೆ ಸಹ-ನಿರ್ಮಾಣ, 1955 - ಹಿಂದಿಯಲ್ಲಿ ಕಾಂಚನ್ ಗಂಗಾ, 1990ರಲ್ಲಿ ಹಿಂದಿಯಲ್ಲಿ ಲೇಕಿನ್ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಪ್ರಶಸ್ತಿ, ಸನ್ಮಾನಗಳು:

2009 - ANR ರಾಷ್ಟ್ರೀಯ ಪ್ರಶಸ್ತಿ,

2007 - ಲೀಜನ್ ಆಫ್ ಆನರ್,

2001 - ಭಾರತ ರತ್ನ

1999 - ಪದ್ಮವಿಭೂಷಣ

1999 - ಜೀವಮಾನದ ಸಾಧನೆಗಳಿಗಾಗಿ ಝೀ ಸಿನಿ ಪ್ರಶಸ್ತಿ

1999 - NTR ರಾಷ್ಟ್ರೀಯ ಪ್ರಶಸ್ತಿ

1997 - ಮಹಾರಾಷ್ಟ್ರ ಭೂಷಣ ಪ್ರಶಸ್ತಿ

1989 - ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

1972, 1974, ಮತ್ತು 1990 - ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

15 ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು

1959, 1963, 1966, ಮತ್ತು 1970 - ನಾಲ್ಕು ಫಿಲ್ಮ್‌ಫೇರ್ ಅತ್ಯುತ್ತಮ ಮಹಿಳಾ  ಪ್ರಶಸ್ತಿಗಳು.

1993 - ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ

1994 ಮತ್ತು 2004 - ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಗಳು

1984 - ಮಧ್ಯಪ್ರದೇಶದ ರಾಜ್ಯ ಸರ್ಕಾರವು ಲತಾ ಮಂಗೇಶ್ಕರ್ ಅವರ ಲತಾ ಮಂಗೇಶ್ಕರ್ ಪ್ರಶಸ್ತಿಯನ್ನು ಸ್ಥಾಪಿಸಿತು

1992 - ಮಹಾರಾಷ್ಟ್ರ ರಾಜ್ಯ ಸರ್ಕಾರವು ಲತಾ ಮಂಗೇಶ್ಕರ್ ಪ್ರಶಸ್ತಿಯನ್ನು ಸಹ ಸ್ಥಾಪಿಸಿತು

1969 - ಪದ್ಮಭೂಷಣ

2009 - ಫ್ರಾನ್ಸ್‌ನ ಅತ್ಯುನ್ನತ ಆದೇಶವಾದ ಫ್ರೆಂಚ್ ಲೀಜನ್ ಆಫ್ ಆನರ್‌ನ ಅಧಿಕಾರಿ ಎಂಬ ಬಿರುದನ್ನು ಆಕೆಗೆ ನೀಡಲಾಯಿತು.

2012 - ಔಟ್ಲುಕ್ ಇಂಡಿಯಾದ ಶ್ರೇಷ್ಠ ಭಾರತೀಯರ ಸಮೀಕ್ಷೆಯಲ್ಲಿ ಅವರು 10 ನೇ ಸ್ಥಾನವನ್ನು ಪಡೆದರು.
ಅವರು ಸಂಗೀತ ನಾಟಕ ಅಕಾಡೆಮಿ (1989), ಇಂದಿರಾ ಕಲಾ ಸಂಗೀತ ವಿಶ್ವವಿದ್ಯಾಲಯ, ಖೈರಾಘರ್ ಮತ್ತು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.


Stay up to date on all the latest ದೇಶ news
Poll
Kharge-tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp