'ಬ್ರಾಹ್ಮಣ ಎಂಬುದು ಒಂದು ಜಾತಿಯಲ್ಲ, ಜೀವನ ನಡೆಸುವ ಒಂದು ಶ್ರೇಷ್ಠ ವಿಧಾನ'
ಬ್ರಾಹ್ಮಣ ಎಂಬುದು ಒಂದು ಜಾತಿಯಲ್ಲ. ಜೀವನ ನಡೆಸುವ ಒಂದು ಶ್ರೇಷ್ಠ ವಿಧಾನ ಎಂದು ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.
Published: 07th February 2022 11:08 AM | Last Updated: 07th February 2022 11:08 AM | A+A A-

ದಿನೇಶ್ ಶರ್ಮಾ
ನೊಯ್ಡಾ: ಬ್ರಾಹ್ಮಣ ಎಂಬುದು ಒಂದು ಜಾತಿಯಲ್ಲ. ಜೀವನ ನಡೆಸುವ ಒಂದು ಶ್ರೇಷ್ಠ ವಿಧಾನ ಎಂದು ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.
ಗೌತಮ ಬುದ್ಧನಗರದ ಜೇವರ್ನಲ್ಲಿ ಬಿಜೆಪಿ ಅಭ್ಯರ್ಥಿ ಧೀರೇಂದ್ರ ಸಿಂಗ್ ಪರ ಚುನಾವಣಾ ಪ್ರಚಾರ ಸಭೆ ನಡೆಸಿದ ದಿನೇಶ್ ಶರ್ಮಾ, ಅಷ್ಟೇ ಅಲ್ಲ, ನಮ್ಮ ಬಿಜೆಪಿ ಪಕ್ಷ ಯಾವುದೇ ತಾರತಮ್ಯವಿಲ್ಲದೆಎಲ್ಲರಿಗಾಗಿ ಕೆಲಸ ಮಾಡುತ್ತಿದೆ ಎಂದೂ ತಿಳಿಸಿದ್ದಾರೆ.
ಪ್ರತಿಪಕ್ಷಗಳು ಜಾತಿವಾದಿಗಳಂತೆ ವರ್ತಿಸುತ್ತಿವೆ ಎಂದು ಆರೋಪಿಸಿದರು. ನಾನು ವಿಧಾನಸಭೆ ಚುನಾವಣೆ ಪೂರ್ವ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಆದರೆ ನಾನು ಹೋದ ಬಹುತೇಕ ಕಡೆ, ಬ್ರಾಹ್ಮಣವಾದ ಮತ್ತು ಜಾತಿವಾದದ ಬಗ್ಗೆ ಪಕ್ಷದ ನಿಲುವು ಏನೆಂದು ಪ್ರಶ್ನೆ ಕೇಳಲಾಗುತ್ತಿದೆ .
"ಯಾರೋ ಬ್ರಾಹ್ಮಣರ ಬಗ್ಗೆ ನನ್ನ ಆಲೋಚನೆಗಳು ಏನು ಎಂದು ಕೇಳಿದರು, ಬಿಜೆಪಿಗೆ 'ಸಬ್ಕಾ ಸಾಥ್, ಸಬ್ಕಾ ವಿಕಾಸ' ಬೇಕು ಎಂದು ನಾನು ಹೇಳಿದೆ. ಬ್ರಾಹ್ಮಣ, ಗುಜ್ಜರ್ ಅಥವಾ ಜಾಟ್ ಮಾತ್ರವಲ್ಲ ಪ್ರತಿಯೊಂದು ಜಾತಿಗೂ ಅದರ ಮಹತ್ವವಿದೆ ಮತ್ತು ಅದಕ್ಕಾಗಿಯೇ ನಾವು ಇಲ್ಲಿ ಎಲ್ಲಾ ಜಾತಿಗಳನ್ನು ಬೆಂಬಲಿಸುತ್ತೇವೆ ಶರ್ಮಾ ಹೇಳಿದರು.