ಬಜೆಟ್ ಅಧಿವೇಶನ 2022: ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸಲಿರುವ ಪ್ರಧಾನಿ ನರೇಂದ್ರ ಮೋದಿ
ಸಂಸತ್ತಿನ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಆರಂಭ ದಿನ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉತ್ತರಿಸಲಿದ್ದಾರೆ.
Published: 07th February 2022 11:54 AM | Last Updated: 07th February 2022 01:48 PM | A+A A-

ಪಿಎಂ ನರೇಂದ್ರ ಮೋದಿ
ನವದೆಹಲಿ: ಸಂಸತ್ತಿನ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಆರಂಭ ದಿನ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉತ್ತರಿಸಲಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ಸುಮಾರು 12 ಗಂಟೆಗಳ ಕಾಲ ನಡೆಯಿತು. ಈ ಮಧ್ಯೆ, ಕಳೆದ ವಾರ ರಾಜ್ಯಸಭೆಯು ಬಜೆಟ್ ಅಧಿವೇಶನ ಚರ್ಚೆಯಲ್ಲಿ ಶೇಕಡಾ 100 ರಷ್ಟು ಫಲವನ್ನು ಸಾಧಿಸಿದೆ. ಮೇಲ್ಮನೆ ಕಲಾಪ ಮುಂದೂಡಿಕೆಯಾಗದೇ, ಯಾವುದೇ ಗದ್ದಲ, ಕೋಲಾಹಲ ನಡೆಯದೆ ಸದ್ಭಳಕೆಯಾಗಿದೆ.
ಸಂಸತ್ತಿನ 2022 ರ ಬಜೆಟ್ ಅಧಿವೇಶನವು ಕಳೆದ ಜನವರಿ 31 ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಪ್ರಾರಂಭವಾಯಿತು. ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯುತ್ತಿದ್ದು, ಎರಡನೇ ಭಾಗ ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ.
ಇದನ್ನೂ ಓದಿ: ಗಾನ ಕೋಗಿಲೆ ಲತಾ ಮಂಗೇಶ್ಕರ್'ಗೆ ರಾಜ್ಯಸಭೆಯಲ್ಲಿ ನಮನ: ಮೌನಾಚರಣೆ ಬಳಿಕ 1 ಗಂಟೆ ಕಲಾಪ ಮುಂದೂಡಿಕೆ
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕಳೆದ ಜನವರಿ 31ರಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ 48 ಶತಕೋಟಿ ಡಾಲರ್ ಹೂಡಿಕೆಯ ಒಳಹರಿವು ಭಾರತದ ಬೆಳವಣಿಗೆಯಲ್ಲಿ ಜಾಗತಿಕ ಹೂಡಿಕೆದಾರ ಸಮುದಾಯವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.
ದೇಶದ ಹೆಚ್ಚುತ್ತಿರುವ ರಫ್ತುಗಳ ಕುರಿತು ಭಾಷಣದಲ್ಲಿ ಪ್ರಸ್ತಾಪಿಸಿದ್ದ ರಾಷ್ಟ್ರಪತಿಗಳು, ''ಭಾರತದ ವಿದೇಶಿ ವಿನಿಮಯ ಮೀಸಲು ಇಂದು 630 ಶತಕೋಟಿ ಡಾಲರ್‌ಗಳನ್ನು ಮೀರಿದೆ. ನಮ್ಮ ರಫ್ತು ಕೂಡ ವೇಗವಾಗಿ ಬೆಳೆದಿದೆ, ಹಲವಾರು ಹಿಂದಿನ ದಾಖಲೆಗಳನ್ನು ಮುರಿದಿದೆ. ಕಳೆದ ವರ್ಷ 2021 ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ನಮ್ಮ ಸರಕು-ರಫ್ತು 300 ಶತಕೋಟಿ ಡಾಲರ್‌ಗಳಷ್ಟಿದೆ. ಅಂದರೆ 22 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ, ಇದು 2020ರ ಅವಧಿಗಿಂತ ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದಿದ್ದರು.