ಆಹಿರ್ ರೆಜಿಮೆಂಟ್ ಸೃಷ್ಟಿಸಿ, ಇಲ್ಲವೇ ಎಲ್ಲಾ ಜಾತಿ ಆಧಾರಿತ ರೆಜಿಮೆಂಟ್ ಗಳನ್ನೂ ರದ್ದುಗೊಳಿಸಿ: ಸಮಾಜವಾದಿ ಪಕ್ಷದ ಸಂಸದ
ಸರ್ಕಾರ ಸೇನೆಯಲ್ಲಿ ಆಹಿರ್ ರೆಜಿಮೆಂಟ್ ನ್ನು ಸೃಷ್ಟಿಸಲಿ ಇಲ್ಲವೇ ಈಗಿರುವ ಜಾತಿ ಆಧಾರಿತ ಎಲ್ಲಾ ರೆಜಿಮೆಂಟ್ ಗಳನ್ನೂ ರದ್ದುಗೊಳಿಸಲಿ ಎಂದು ಸಮಾಜವಾದಿ ಪಕ್ಷದ ಸಂಸದ ಚೌಧರಿ ಸುಖ್ ರಾಮ್ ಸಿಂಗ್ ಯಾದವ್ ಆಗ್ರಹಿಸಿದ್ದಾರೆ.
Published: 07th February 2022 08:03 PM | Last Updated: 07th February 2022 08:08 PM | A+A A-

ಭಾರತೀಯ ಸೇನೆ
ನವದೆಹಲಿ: ಸರ್ಕಾರ ಸೇನೆಯಲ್ಲಿ ಆಹಿರ್ ರೆಜಿಮೆಂಟ್ ನ್ನು ಸೃಷ್ಟಿಸಲಿ ಇಲ್ಲವೇ ಈಗಿರುವ ಜಾತಿ ಆಧಾರಿತ ಎಲ್ಲಾ ರೆಜಿಮೆಂಟ್ ಗಳನ್ನೂ ರದ್ದುಗೊಳಿಸಲಿ ಎಂದು ಸಮಾಜವಾದಿ ಪಕ್ಷದ ಸಂಸದ ಚೌಧರಿ ಸುಖ್ ರಾಮ್ ಸಿಂಗ್ ಯಾದವ್ ಆಗ್ರಹಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಮಾತನಾಡಿರುವ ಸಂಸದ ಚೌಧರಿ ಸುಖ್ ರಾಮ್ ಸಿಂಗ್ ಯಾದವ್, ಅದು ಪಾಕಿಸ್ತಾನವೇ ಇರಲಿ ಚೀನಾವೇ ಇರಲಿ ಅವುಗಳೊಂದಿಗಿನ ಯುದ್ಧದಲ್ಲಿ ಯಾದವರ ಶೌರ್ಯದ ಹಲವಾರು ಕಥೆಗಳಿವೆ.
ಜಾಟ್ ರೆಜಿಮೆಂಟ್, ರಜಪೂತ್ ರೆಜಿಮೆಂಟ್, ಸಿಖ್ ರೆಜಿಮೆಂಟ್ ಗಳು ಇನ್ನೂ ಮುಂತಾದ ರೆಜಿಮೆಂಟ್ ಗಳಿರುವಾಹ ಆಹಿರ್ ರೆಜಿಮೆಂಟ್ ನ್ನು ಯಾಕೆ ಸೃಷ್ಟಿಸಿಲ್ಲ ಎಂಬ ಅಂಶ ಆಗಾಗ್ಗೆ ಚರ್ಚೆಗೊಳಗಾಗುತ್ತಿರುತ್ತದೆ.
ಯಾದವ ಸಮುದಾಯಕ್ಕೆ ಹಲವಾರು ಶೌರ್ಯ ಪ್ರಶಸ್ತಿಗಳು ದೊರೆತಿದೆ. ಬೇರೆಯ ರೆಜಿಮೆಂಟ್ ಗಳಿದ್ದಂತೆಯೇ ಆಹಿರ್ ರೆಜಿಮೆಂಟ್ ನ್ನು ಸೃಷ್ಟಿಸಿ. ಅಥವಾ ಜಾತಿ ಆಧಾರಿತ ರೆಜಿಮೆಂಟ್ ಗಳನ್ನೇ ರದ್ದುಗೊಳಿಸಿ ಎಂದು ಯಾದವ್ ಆಗ್ರಹಿಸಿದ್ದಾರೆ.
ಸರ್ಕಾರ ಜಾತಿ ಆಧಾರಿತ ಜನಗಣತಿ ನಡೆಸಬೇಕು ಪ್ರಮುಖವಾಗಿ ಹಿಂದುಳಿದ ಜಾತಿಗಳ ಜನಗಣತಿ ನಡೆಸಬೇಕೆಂದು ಯಾದವ್ ಒತ್ತಾಯಿಸಿದ್ದಾರೆ. ಸಿಪಿಐ ಸಂಸದ ಬಿನೋಯ್ ಬಿಸ್ವಮ್ ಈ ನಿರ್ಣಯವನ್ನು ವಿರೋಧಿಸಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಪಾತ್ರ ಏನಿತ್ತು ಎಂದು ಪ್ರಶ್ನಿಸಿದ್ದಾರೆ.