ನಟಿ ಅಪಹರಣ ಪ್ರಕರಣದ ತನಿಖಾಧಿಕಾರಿ ಕೊಲೆ ಯತ್ನ ಕೇಸ್: ಮಲಯಾಳಂ ನಟ ದಿಲೀಪ್ ಗೆ ನಿರೀಕ್ಷಣಾ ಜಾಮೀನು
2017 ರ ನಟ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಿಖಾಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ನಟ ದಿಲೀಪ್ ಮತ್ತು ಇತರ ಆರೋಪಿಗಳಿಗೆ ಕೇರಳ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Published: 07th February 2022 11:31 AM | Last Updated: 07th February 2022 01:47 PM | A+A A-

ದಿಲೀಪ್
ಕೊಚ್ಚಿ: 2017 ರ ನಟ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಿಖಾಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ನಟ ದಿಲೀಪ್ ಮತ್ತು ಇತರ ಆರೋಪಿಗಳಿಗೆ ಕೇರಳ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರೋಪಿ ಸಹೋದರ ಅನೂಪ್, ಟಿಎನ್ ಸೂರಜ್, ಬೈಜು ಬಿಆರ್, ಕೃಷ್ಣಪ್ರಸಾದ್ ಆರ್ ಮತ್ತು ಶರತ್ ಅವರಿಗೂ ಜಾಮೀನು ದೊರೆತಿದೆ. ಆರೋಪಿಗಳ ಕಸ್ಟಡಿ ವಿಚಾರಣೆ ಅಗತ್ಯ ಎಂಬ ಅಪರಾಧ ವಿಭಾಗದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ತನಿಖೆಗೆ ಸಹಕರಿಸದಿರುವ ಬಗ್ಗೆ ಪ್ರಾಸಿಕ್ಯೂಷನ್‌ನ ಆತಂಕಗಳನ್ನು ಜಾಮೀನು ಅರ್ಜಿಯಲ್ಲಿ ಷರತ್ತುಗಳ ಮೂಲಕ ತಿಳಿಸಬಹುದು ಎಂದು ನ್ಯಾಯಮೂರ್ತಿ ಗೋಪಿನಾಥ್ ಪಿ ಸ್ಪಷ್ಟಪಡಿಸಿದ್ದಾರೆ. ಷರತ್ತುಗಳನ್ನು ಉಲ್ಲಂಘಿಸಿದರೆ, ಪ್ರಾಸಿಕ್ಯೂಷನ್ ಆರೋಪಿಯನ್ನು ಬಂಧಿಸಲು ಕೋರಿ ನ್ಯಾಯಾಲಯವನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ತನಿಖಾಧಿಕಾರಿಯನ್ನೇ ಕೊಲ್ಲಲು ನಟ ದಿಲೀಪ್ ಸಂಚು ರೂಪಿಸಿದ್ದರು: ಕೋರ್ಟ್ ಗೆ ವರದಿ ಸಲ್ಲಿಸಿದ ಕ್ರೈಂ ಬ್ರಾಂಚ್
ಚಿತ್ರ ನಿರ್ಮಾಪಕ ಪಿ ಬಾಲಚಂದ್ರಕುಮಾರ್ ಅವರ ಹೇಳಿಕೆ ಮತ್ತು ಆರೋಪಿಗಳೊಂದಿಗೆ ನಡೆಸಿದ ಸಂಭಾಷಣೆಯ ಆಡಿಯೊ ಕ್ಲಿಪ್ಪಿಂಗ್‌ಗಳು ತನಿಖೆಗೆ ಸಹಾಯ ಮಾಡಿವೆ. ಕ್ರಿಮಿನಲ್ ಪಿತೂರಿಯ ಅಪರಾಧವನ್ನು ಅರ್ಜಿದಾರರು ಎಸಗಿದ್ದಾರೆ ಎಂದು ಹೇಳಲು ಹೇಳಿಕೆಯೇ ಸಾಕು. ಆದರೆ ನ್ಯಾಯಾಲಯ ಅದನ್ನು ಅಂಗೀಕರಿಸಲಿಲ್ಲ.
ಹೊಸ ಪ್ರಕರಣವನ್ನು ದಾಖಲಿಸಿರುವುದು ಅವರ ವಿರುದ್ಧ ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸುವ ಪ್ರಯತ್ನದ ಭಾಗವಾಗಿದೆ ಎಂದು ದಿಲೀಪ್ ಪರ ವಕೀಲರಾದ ಬಿ ರಮಣಿ ಪಿಳ್ಳೆ ಆರೋಪಿಸಿದ್ದಾರೆ.
2017 ರ ಪ್ರಕರಣದಲ್ಲಿ ಪುರಾವೆಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ದಿಲೀಪ್ ಅವರನ್ನು ಮತ್ತೊಂದು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದು, ಒಂದರ ಹಿಂದೆ ಒಂದರಂತೆ ಪ್ರಕರಣಗಳನ್ನು ಸೇರಿಸಿ ಮಾಧ್ಯಮಗಳು ದಿಲೀಪ್ ವಿರುದ್ಧ ತಿರುಗಿ ಬೀಳುವಂತೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.