ನಿರುದ್ಯೋಗ ಭತ್ಯೆ, ಉಚಿತ ವಿದ್ಯುತ್: ಉತ್ತರಾಖಂಡ ಚುನಾವಣೆಗೆ 11 ಅಂಶಗಳ ಅಜೆಂಡಾ ನೀಡಿದ ಕೇಜ್ರಿವಾಲ್
ಉತ್ತರಾಖಂಡದಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಅಧಿಕಾರಕ್ಕೆ ನಿರುದ್ಯೋಗ ಭತ್ಯೆ, ಉಚಿತಿ ವಿದ್ಯುತ್ ಸೇರಿದಂತೆ 11 ಅಂಶಗಳ ಕಾರ್ಯಸೂಚಿಯನ್ನು ವಿವರಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು...
Published: 07th February 2022 06:28 PM | Last Updated: 07th February 2022 06:28 PM | A+A A-

ಅರವಿಂದ್ ಕೇಜ್ರಿವಾಲ್
ಹರಿದ್ವಾರ: ಉತ್ತರಾಖಂಡದಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಅಧಿಕಾರಕ್ಕೆ ನಿರುದ್ಯೋಗ ಭತ್ಯೆ, ಉಚಿತಿ ವಿದ್ಯುತ್ ಸೇರಿದಂತೆ 11 ಅಂಶಗಳ ಕಾರ್ಯಸೂಚಿಯನ್ನು ವಿವರಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಎಲ್ಲರಿಗೂ ಉಚಿತ ಗುಣಮಟ್ಟದ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ನಿರುದ್ಯೋಗ ಭತ್ಯೆ ಹಾಗೂ ಉಚಿತ ವಿದ್ಯುತ್ ನೀಡುವುದಾಗಿ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಭರವಸೆ ನೀಡಿದ್ದಾರೆ.
ಇದನ್ನು ಓದಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಉತ್ತರಾಖಂಡ ರಾಯಭಾರಿ
ಉತ್ತರಾಖಂಡದಲ್ಲಿ ಸತತ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ರಾಜ್ಯವನ್ನು "ಲೂಟಿ" ಮಾಡುತ್ತಿವೆ ಎಂದು ಆರೋಪಿಸಿದ ಅವರು, ತಮ್ಮ ಆಮ್ ಆದ್ಮಿ ಪಕ್ಷ(ಎಎಪಿ) ಮಾತ್ರ ಜನರಿಗೆ "ಪ್ರಾಮಾಣಿಕ ಪರ್ಯಾಯ" ವನ್ನು ಒದಗಿಸಬಲ್ಲದು ಎಂದಿದ್ದಾರೆ.
ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಕಣದಲ್ಲಿರುವ ಗುಡ್ಡಗಾಡು ರಾಜ್ಯ ಉತ್ತರಾಖಂಡವನ್ನು ಹಿಂದೂಗಳ ಅಂತರರಾಷ್ಟ್ರೀಯ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡುವುದಾಗಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಇಂದು ಹರಿದ್ವಾರದಲ್ಲಿ ತಮ್ಮ ಪಕ್ಷದ ಪರ ಪ್ರಚಾರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಸಿಎಂ, ರಾಜ್ಯದ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು.
ನಾವು ಉತ್ತರಾಖಂಡವನ್ನು ಅಂತರಾಷ್ಟ್ರೀಯ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡುತ್ತೇವೆ. ಇದು ಪ್ರವಾಸೋದ್ಯಮವನ್ನು ವ್ಯಾಪಕವಾಗಿ ವರ್ಧಿಸುತ್ತದೆ, ಇದರಿಂದ ಸಾವಿರಾರು ಯುವಕರಿಗೆ ಉದ್ಯೋಗ ದೊರಕುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಉತ್ತರಾಖಂಡದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯು ಐತಿಹಾಸಿಕವಾಗಿದೆ ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸಲು ಪ್ರಾಮಾಣಿಕ ಸರ್ಕಾರವನ್ನು ಆಯ್ಕೆ ಮಾಡಲು ಮತದಾರರಿಗೆ ಅವಕಾಶವಿದೆ ಎಂದು ದೆಹಲಿ ಸಿಎಂ ಹೇಳಿದರು.
“ಇದೊಂದು ಐತಿಹಾಸಿಕ ಚುನಾವಣೆಯಾಗಿದ್ದು, ಇದರಲ್ಲಿ ಪ್ರಮುಖ ಬದಲಾವಣೆ ಸಾಧ್ಯ. ಉತ್ತರಾಖಂಡದಲ್ಲಿ ಮೊದಲ ಬಾರಿಗೆ ಪ್ರಾಮಾಣಿಕ ಸರ್ಕಾರ ರಚನೆಯಾದರೆ ಭ್ರಷ್ಟಾಚಾರವನ್ನು ಕೊನೆಗಾಣಿಸಬಹುದು ಎಂದು ಅರವಿಂದ್ ಕೇಜ್ರಿವಾಲ್ ಹರಿದ್ವಾರದಲ್ಲಿ ಹೇಳಿದ್ದಾರೆ.