ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದ 'ವಾಂಟೆಂಡ್ ಉಗ್ರ' ಬಂಧನ
ಬಾಂಗ್ಲಾದೇಶದ ವಾಂಟೆಂಡ್ ಉಗ್ರನೊಬ್ಬನನ್ನು ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಉಗ್ರನನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Published: 07th February 2022 08:33 PM | Last Updated: 07th February 2022 08:33 PM | A+A A-

ಸಾಂದರ್ಭಿಕ ಚಿತ್ರ
ಕೊಲ್ಕತ್ತಾ: ಬಾಂಗ್ಲಾದೇಶದ ವಾಂಟೆಂಡ್ ಉಗ್ರನೊಬ್ಬನನ್ನು ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಉಗ್ರನನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ತಮಲ್ ಚೌಧರಿ ಎಂದು ತನನ್ನು ಪರಿಚಯಿಸಿಕೊಂಡಿದ್ದ ನೆರೆಯ ದೇಶದ ಉಗ್ರ ಸಂಘಟನೆಯ ಸದಸ್ಯ ನೂರ್ ನಬಿ ಮಾಕ್ಸನ್ , ನಕಲಿ ದಾಖಲೆಗಳನ್ನು ತೋರಿಸಿ ಮಧ್ಯಮ್ ಗ್ರಾಮ್ ಪ್ರದೇಶದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ ಎಂದು ಸಿಐಡಿ ಅಧಿಕಾರಿ ಹೇಳಿದ್ದಾರೆ.
ಬಾಂಗ್ಲಾದೇಶದ ಏಜೆನ್ಸಿಯೊಂದರಿಂದ ಪಡೆದ ಖಚಿತ ಮಾಹಿತಿ ಆಧಾರದ ಮೇರೆಗೆ ಪಶ್ಚಿಮ ಬಂಗಾಳದ ಸಿಐಡಿ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಲಾಗಿದೆ. ಬಂಧನದ ವೇಳೆ ನಗದು ಜೊತೆಗೆ ಜುಲೈ 15,2021 ರಿಂದ ಜುಲೈ 14, 2031ರವರೆಗೂ ಮಾನ್ಯತೆ ಹೊಂದಿರುವ ಪಾಸ್ ಪೋರ್ಟ್ ವೊಂದನ್ನು ವಶಕ್ಕೆ ಪಡೆಯಲಾಗಿದೆ. ಆತನ ವಿರುದ್ಧ ಕೆಲ ಕೊಲೆ, ಕಳವು ಸೇರಿದಂತೆ 17 ಕೇಸ್ ದಾಖಲಾಗಿರುವುದಾಗಿ ಅವರು ತಿಳಿಸಿದ್ದಾರೆ.