ಮಧ್ಯ ಪ್ರದೇಶದ ಶಾಲೆಗಳಲ್ಲಿ ಹಿಜಾಬ್ ನಿಷೇಧಕ್ಕೆ ಬಿಜೆಪಿ ಸರ್ಕಾರ ನಿರ್ಧಾರ
ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ ಇದನ್ನು ನಿಷೇಧಿಸಲು ಸಿದ್ಧತೆ ನಡೆಯುತ್ತಿದೆ.
Published: 08th February 2022 03:36 PM | Last Updated: 08th February 2022 03:36 PM | A+A A-

ಸಾಂದರ್ಭಿಕ ಚಿತ್ರ
ಭೋಪಾಲ್: ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ ಇದನ್ನು ನಿಷೇಧಿಸಲು ಸಿದ್ಧತೆ ನಡೆಯುತ್ತಿದೆ.
ಹಿಜಾಬ್ ಶಾಲಾ ಸಮವಸ್ತ್ರ ಸಂಹಿತೆಯ ಭಾಗವಲ್ಲ ಎಂದು ಮಧ್ಯಪ್ರದೇಶದ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಇದನ್ನು ಓದಿ: ಹಿಜಾಬ್ ವಿವಾದ: ಸಂವಿಧಾನ ಹೇಳಿದಂತೆ ನಡೆಯುತ್ತೇವೆ- ಹೈಕೋರ್ಟ್
ಯಾರಾದರೂ ಹಿಜಾಬ್ ಧರಿಸಿ ಶಾಲೆಗೆ ಬಂದರೆ ಅವರನ್ನು ನಿಷೇಧಿಸಲಾಗುವುದು. ಸಂಪ್ರದಾಯವನ್ನು ಪಾಲಿಸುವ ಜನರು ತಮ್ಮ ಮನೆ ತನಕ ಅದನ್ನು ಅನುಸರಿಸಬೇಕು ಎಂಬುದು ಭಾರತದ ನಂಬಿಕೆಯಾಗಿದೆ. ಶಾಲೆಗಳಲ್ಲಿ ಅನ್ವಯವಾಗುವ ಏಕರೂಪ ಸಂಹಿತೆಯನ್ನು ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ಅವರು ತಿಳಿಸಿದ್ದಾರೆ.