ಟೇಕ್-ಆಫ್ ವೇಳೆ ಮುಂಬೈ-ಭುಜ್ ಅಲಯನ್ಸ್ ಏರ್ ಎಂಜಿನ್ ಮೇಲ್ಭಾಗ ಕುಸಿತ: ತಪ್ಪಿದ ದುರಂತ
ಅಲಯನ್ಸ್ ಏರ್ನ ಎಟಿಆರ್ ವಿಮಾನವು ಮುಂಬೈನಿಂದ ಟೇಕ್-ಆಫ್ ಆದ ಕೂಡಲೇ ಎಂಜಿನ್ನ ಮೇಲಿನ ಕವರ್ ರನ್ವೇ ಮೇಲೆ ಬಿದ್ದಿದ್ದು ದೊಡ್ಡ ದುರಂತ ತಪ್ಪಿದೆ.
Published: 09th February 2022 03:06 PM | Last Updated: 09th February 2022 03:06 PM | A+A A-

ಮುಂಬೈ-ಭುಜ್ ವಿಮಾನ
ಮುಂಬೈ: ಅಲಯನ್ಸ್ ಏರ್ನ ಎಟಿಆರ್ ವಿಮಾನವು ಮುಂಬೈನಿಂದ ಟೇಕ್-ಆಫ್ ಆದ ಕೂಡಲೇ ಎಂಜಿನ್ನ ಮೇಲಿನ ಕವರ್ ರನ್ವೇ ಮೇಲೆ ಬಿದ್ದಿದ್ದು ದೊಡ್ಡ ದುರಂತ ತಪ್ಪಿದೆ.
ಆದರೆ ಸ್ವಲ್ಪ ಸಮಯದ ನಂತರ ವರದಿಯಾದಾಗ ವಿಮಾನವು ಒಡಿಶಾದ ಭುಜ್ನಲ್ಲಿ ತಕ್ಷಣವೇ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಎಂಜಿನ್ನ ಮೇಲಿನ ಕವರ್ ಹೇಗೆ ಬಿದ್ದಿದೆ ಎಂಬುದರ ಕುರಿತು ತನಿಖೆ ಪ್ರಾರಂಭಿಸಿದೆ.
ಅಲಯನ್ಸ್ ಏರ್ ಮುಂಬೈನಿಂದ ಒಡಿಶಾದ ಭುಜ್ಗೆ ಟೇಕ್ ಆಫ್ ಆಗಬೇಕಿತ್ತು. ಆದರೆ ವಿಮಾನದ ಇಂಜಿನ್ ಕವರ್ ರನ್ವೇ ಮೇಲೆ ಬಿದ್ದು ಎಂಜಿನ್ ಕವರ್ ಇಲ್ಲದೆ ಹಾರಿತು ಎಂದು ಮುಂಬೈ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಇದಲ್ಲದೆ ವಿಮಾನವು ಸುರಕ್ಷಿತವಾಗಿ ಭುಜ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ವಿಮಾನಯಾನ ಸಂಸ್ಥೆಗಳ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈನಿಂದ ಟೇಕ್ ಆಫ್ ಆದ ಕೂಡಲೇ ಮುಂಬೈ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ವಾಯುಯಾನ ತಜ್ಞ ಕ್ಯಾಪ್ಟನ್ ಅಮಿತ್ ಸಿಂಗ್ ಈ ಘಟನೆಗೆ ಕಳಪೆ ನಿರ್ವಹಣಾ ಕೆಲಸ ಕಾರಣ ಎಂದು ಹೇಳಿದ್ದಾರೆ.