ಪಾಕಿಸ್ತಾನದ ಡ್ರೋನ್ ಮೇಲೆ ಬಿಎಸ್ ಎಫ್ ದಾಳಿ: ಡ್ರಗ್ಸ್, ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನ ವಿಫಲ
ಪಂಜಾಬ್ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ಮೂಲಕ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡಲು ಬಯಸಿದ್ದ ಪಾಕಿಸ್ತಾನದ ಪ್ರಯತ್ನವನ್ನು ಬಿಎಸ್ ಎಫ್ ವಿಫಲಗೊಳಿಸಿದೆ.
Published: 09th February 2022 02:23 PM | Last Updated: 09th February 2022 02:32 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಪಂಜಾಬ್ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ಮೂಲಕ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡಲು ಬಯಸಿದ್ದ ಪಾಕಿಸ್ತಾನದ ಪ್ರಯತ್ನವನ್ನು ಬಿಎಸ್ ಎಫ್ ವಿಫಲಗೊಳಿಸಿದೆ.
ನಿನ್ನೆ ತಡರಾತ್ರಿ ಪಂಜಾಬ್ನ ಅಮೃತಸರದ ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ಕಾಣಿಸಿಕೊಂಡಿದೆ. ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ಡ್ರೋನ್ಗೆ ಗುಂಡು ಹಾರಿಸಿದ ನಂತರ ಅದು ಪಾಕಿಸ್ತಾನದ ಕಡೆಗೆ ತೆರಳಿದೆ.
ಮಂಗಳವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ಬರುವ ಡ್ರೋನ್ನ ಶಬ್ದ ಕೇಳಿದ ನಂತರ ಸೇನಾ ಪಡೆ ಸಿಬ್ಬಂದಿ ಡ್ರೋನ್ನತ್ತ ಗುಂಡು ಹಾರಿಸಿದವು ಎಂದು ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರಾಮ ಘಗ್ಗರ್ ಮತ್ತು ಸಿಂಗೊಕೆ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ಹಳದಿ ಬಣ್ಣದ ಎರಡು ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಡ್ರೋನ್ನಿಂದಲೇ ಆ ಪ್ಯಾಕೆಟ್ಗಳನ್ನು ಬೀಳಿಸಿರುವ ಶಂಕೆ ಇದೆ ಎಂದು ಅವರು ಹೇಳಿದ್ದಾರೆ. ಕೆಳಗೆ ಬಿದ್ದಿದ್ದ ಪ್ಯಾಕೆಟ್ನಲ್ಲಿ ಪಿಸ್ತೂಲ್ ಸುತ್ತಿಕೊಂಡಿರುವುದು ಕಂಡುಬಂದಿದ್ದು, ಗಡಿಯ ಬೇಲಿಯಿಂದ ಸುಮಾರು 2.7 ಕಿಮೀ ದೂರದಲ್ಲಿ ಈ ವಸ್ತು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಜೆಇಎಂ ಉಗ್ರರ ಅಡಗುತಾಣಗಳ ಮೇಲೆ ದಾಳಿ, 11 ಭಯೋತ್ಪಾದಕ ಸಹಚರರ ಬಂಧನ
ಭಾರತಕ್ಕೆ ಸ್ಫೋಟಕಗಳು, ಶಸ್ತ್ರಾಸ್ತ್ರಗಳು, ನಗದು ಮತ್ತು ಮಾದಕವಸ್ತುಗಳನ್ನು ಕಳುಹಿಸಲು ಗಡಿಯಾಚೆಗಿನ ಭಯೋತ್ಪಾದಕ ಸಂಘಟನೆಗಳು ಡ್ರೋನ್ಗಳನ್ನು ನಿಯಮಿತವಾಗಿ ಬಳಸುತ್ತವೆ. ಭದ್ರತಾ ಪಡೆಗಳು ಹೆಚ್ಚು ಜಾಗರೂಕರಾಗಿದ್ದಾರೆ. ಆಗಾ ಭಾರತದ ಗಡಿಗಳಲ್ಲಿ ಡ್ರೋನ್ ವಿರೋಧಿ ಚಟುವಟಿಕೆಗಳು ನಡೆಯುತ್ತಲೇ ಇವೆ.