ಫೆಬ್ರವರಿ 14ರಂದು ಪಿಎಸ್‍ಎಲ್‍ವಿ-ಸಿ 52 ಉಡಾವಣೆಗೆ ಸಿದ್ದತೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟ ರಾಕೆಟ್ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಇದೇ 14ರಂದು ಬೆಳಗ್ಗೆ 5.59ಕ್ಕೆ ಪಿಎಸ್ ಎಲ್ ವಿ-ಸಿ52 ರಾಕೆಟ್ ಉಡಾವಣೆ ಮಾಡಲು ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ.
Published: 10th February 2022 10:19 AM | Last Updated: 10th February 2022 01:15 PM | A+A A-

ಸಂಗ್ರಹ ಚಿತ್ರ
ಸುಳ್ಳೂರುಪೇಟೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟ ರಾಕೆಟ್ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಇದೇ 14ರಂದು ಬೆಳಗ್ಗೆ 5.59ಕ್ಕೆ ಪಿಎಸ್ ಎಲ್ ವಿ-ಸಿ52 ರಾಕೆಟ್ ಉಡಾವಣೆ ಮಾಡಲು ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ.
ಈ ನಿಟ್ಟಿನಲ್ಲಿ 25.30 ಗಂಟೆಯ ಮೊದಲು ಅಂದರೆ ಇದೇ 13ರ ಬೆಳಗ್ಗೆ 4.29ಕ್ಕೆ ಕೌಂಟ್ ಡೌನ್ ಪ್ರಕ್ರಿಯೆ ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇಸ್ರೊ ಬುಧವಾರ ಪ್ರಕಟಿಸಿದೆ.
ಉಡಾವಣೆಯ ಅಂಗವಾಗಿ, ಕೇಂದ್ರದಲ್ಲಿ ಎರಡನೇ ಉಡಾವಣಾ ಪ್ಯಾಡ್‌ನಲ್ಲಿ ವಾಹನದ ಜೋಡಣೆಯ ನಾಲ್ಕು ದಿಕ್ಕುಗಳ ರಾಕೆಟ್ ಸಂಪರ್ಕವನ್ನು ಪೂರ್ಣಗೊಳಿಸಿತು ಮತ್ತು ಅದನ್ನು ವ್ಯಾಬ್ ನಿಂದ ಹೂಬ್ಲಿಕಲ್ ಟವರ್‌ಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಬುಧವಾರ ಬೆಳಿಗ್ಗೆ ಯಶಸ್ವಿಯಾಗಿ ನಡೆಸಿದರು.
ಇದನ್ನೂ ಓದಿ: ಚಂದ್ರಯಾನ-3 ಕ್ಕೆ ಇಸ್ರೋ ಸಕಲ ಸನ್ನದ್ಧ; ಆಗಸ್ಟ್ ನಲ್ಲಿ ಉಡಾವಣೆಗೆ ಯೋಜನೆ
ರಾಕೆಟ್ ಅನ್ನು ಉಡಾವಣಾ ಕೇಂದ್ರಕ್ಕೆ ಜೋಡಿಸಿ ನಾಲ್ಕು ದಿನಗಳ ಕಾಲ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಉಡಾವಣೆಯು 1,710 ಕೆಜಿ ರಾಡಾರ್ ಇಮೇಜಿಂಗ್ ಉಪಗ್ರಹ (EOS – 04) ಉಪಗ್ರಹ ಮತ್ತು ಇತರ ಎರಡು ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ. ಭಾರತೀಯ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಸಂಸ್ಥೆ (IIST) ಭಾರತ ಮತ್ತು ಭೂತಾನ್ ಜಂಟಿಯಾಗಿ ಅಭಿವೃದ್ಧಿಪಡಿಸಿದ INS-2B ಉಪಗ್ರಹವಾದ InspireSat-1 ಅನ್ನು ಸಹ ಉಡಾವಣೆ ಮಾಡಲಿದೆ.
ಇದು ಮುಖ್ಯವಾಗಿ ಭೂಮಿಯಿಂದ 529 ಕಿಮೀ ಎತ್ತರದಲ್ಲಿರುವ ಸೂರ್ಯನ ಸಿಂಕ್ರೊನಸ್ ಕಕ್ಷೆಗೆ ರಾಡಾರ್ ಇಮೇಜಿಂಗ್ ಉಪಗ್ರಹವನ್ನು ಕಳಿಸಲಾಗುತ್ತದೆ. ಈ ಉಪಗ್ರಹ ಉಡಾವಣೆಯು ಹವಾಮಾನ ಸಂಶೋಧನೆ, ಕೃಷಿ, ಅರಣ್ಯ, ಪ್ರವಾಹ ಮತ್ತು ವಿಪತ್ತು ಸಂಶೋಧನೆಗೆ ಉಪಯುಕ್ತವಾಗಿದೆ. ಇದೇ ತಿಂಗಳ 12ರಂದು ಮಿಷನ್ ರೆಡಿನೆಸ್ ಪರಿಶೀಲನೆ ನಡೆಯಲಿದೆ.