ಉತ್ತರ ಪ್ರದೇಶ: ಪ್ರಿಯಾಂಕಾ ಗಾಂಧಿಯ 'ರೋಡ್ ಶೋ' ವಿರುದ್ಧ ಕೇಸ್ ದಾಖಲು
ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಕಾಂಗ್ರೆಸ್ ಮುಖಂಡ ರಿಜ್ವನ್ ಖುರೇಷಿ ಮನೆ ಮನೆ ಪ್ರಚಾರ ಸಂದರ್ಭ ರೋಡ್ ಶೋ ರೀತಿಯ ಪರಿಸ್ಥಿತಿವೇರ್ಪಟ್ಟ ನಂತರ ಪೊಲೀಸರು ಕೇಸ್ ದಾಖಲಿಸಿದ್ದಾರೆ.
Published: 11th February 2022 09:57 AM | Last Updated: 11th February 2022 12:55 PM | A+A A-

ಪ್ರಿಯಾಂಕಾ ಗಾಂಧಿಯ ರೋಡ್ ಶೋ ಚಿತ್ರ
ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಕಾಂಗ್ರೆಸ್ ಮುಖಂಡ ರಿಜ್ವನ್ ಖುರೇಷಿ ಮನೆ ಮನೆ ಪ್ರಚಾರ ಸಂದರ್ಭ ರೋಡ್ ಶೋ ರೀತಿಯ ಪರಿಸ್ಥಿತಿವೇರ್ಪಟ್ಟ ನಂತರ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಮೊರಾದಾಬಾದ್ ಕಾಂಗ್ರೆಸ್ ಅಭ್ಯರ್ಥಿ ಖುರೇಷಿ ಗುರುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಮನೆ ಮನೆ ಪ್ರಚಾರ ನಡೆಸಿದರು. ಆದಾಗ್ಯೂ, ಪೊಲೀಸರು, ಈ ಪ್ರಚಾರ ರೋಡ್ ಶೋ ನಂತಿತ್ತು ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರಿಜ್ವನ್ ಮನೆ ಮನೆ ಪ್ರಚಾರಕ್ಕೆ ಅನುಮತಿ ಪಡೆದಿದ್ದರು ಆದರೆ, ಜನರು ಕಾರಿನ ಮೇಲೆ ಪ್ರಿಯಾಂಕಾ ಜೊತೆಗೆ ಇರುವುದರೊಂದಿಗೆ ಅದು ರೋಡ್ ಶೋ ನಂತೆ ಕಾಣಿಸುತಿತ್ತು. ಸೆಕ್ಟರ್ ಮ್ಯಾಜಿಸ್ಟ್ರೇಟ್ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ ಪಿ ಅಖಿಲೇಶ್ ಬಡೋರಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಪ್ರಿಯಾಂಕಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು
ರಾಜ್ಯದಲ್ಲಿ ಪ್ರಚಾರ ನಡೆಸಿದ ಬಿಜೆಪಿ ಮುಖಂಡರ ಮೇಲೆ ಎಫ್ ಐಆರ್ ಏಕೆ ದಾಖಲಿಸಿಲ್ಲ ಎಂದು ರಿಜ್ವನ್ ಪ್ರಶ್ನಿಸಿದ್ದಾರೆ. ಮೀರತ್ ನಲ್ಲಿ ಅಮಿತ್ ಶಾ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಕೆಲ ದಿನ ಹಿಂದೆ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಅವರ ವಿರುದ್ಧ ಎಫ್ ಐಆರ್ ಏಕೆ ದಾಖಲಿಸಿಲ್ಲ, ಮನೆ ಮನೆ ಪ್ರಚಾರದ ವೇಳೆ ಜನರು ಅಪಾರ ಪ್ರೀತಿ ತೋರಿಸಿದರೆ ಅದು ನಮ್ಮ ತಪ್ಪಲ್ಲ. ಬಿಜೆಪಿಗೆ ಭಯವಾಗಿದೆ. ಆದ ಕಾರಣ ಈ ರೀತಿಯ ರಾಜಕಾರಣ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.