5 ರಿಂದ 15 ವರ್ಷದವರಿಗೆ ಕೋವಿಡ್ ಲಸಿಕೆ ಬಗ್ಗೆ ತಜ್ಞರ ಶಿಫಾರಸಿನ ಮೇಲೆ ನಿರ್ಧಾರ: ಕೇಂದ್ರ ಸಚಿವ ಮಾಂಡವಿಯಾ
ಕೇಂದ್ರ ಸರ್ಕಾರ 5 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕೆಯ ನೀಡುವ ಬಗ್ಗೆ ತಜ್ಞರ ತಂಡದ ಶಿಫಾರಸು ಸ್ವೀಕರಿಸಿದ ತಕ್ಷಣ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ...
Published: 12th February 2022 06:38 PM | Last Updated: 12th February 2022 06:38 PM | A+A A-

ಸಾಂದರ್ಭಿಕ ಚಿತ್ರ
ಗಾಂಧಿನಗರ: ಕೇಂದ್ರ ಸರ್ಕಾರ 5 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕೆಯ ನೀಡುವ ಬಗ್ಗೆ ತಜ್ಞರ ತಂಡದ ಶಿಫಾರಸು ಸ್ವೀಕರಿಸಿದ ತಕ್ಷಣ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಶನಿವಾರ ಹೇಳಿದ್ದಾರೆ.
5 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಸರ್ಕಾರದ ನಿರ್ಧಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಂಡವಿಯಾ ಅವರು, ಈ ವರ್ಗದ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ತಜ್ಞರು ಇದುವರೆಗೂ ಯಾವುದೇ ಶಿಫಾರಸು ಮಾಡಿಲ್ಲ ಎಂದರು.
ಇದನ್ನು ಓದಿ: ಕೋವಿಡ್-19: ರಾಜ್ಯದಲ್ಲಿ ಆಸ್ಪತ್ರೆ ದಾಖಲು ಪ್ರಮಾಣ ಶೇ.50ರಷ್ಟು ಇಳಿಕೆ
ಕೋವಿಡ್ ವಿರುದ್ದದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಿಗೆ, ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡುವಂತೆ ತಜ್ಞರು ಮಾಡಿದ್ದ ಶಿಫಾರಸನ್ನು ಒಂದು ವಾರದೊಳಗೆ ಅನುಷ್ಠಾನಗೊಳಿಸಲಾಗಿತ್ತು. ಅದೇ ರೀತಿ, 5–15 ವರ್ಷದವರಿಗೆ ಸಂಬಂಧಿಸಿದ ಶಿಫಾರಸನ್ನೂ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಸದ್ಯ ಲಸಿಕೆಯ ಸಮಸ್ಯೆಯೇ ಇಲ್ಲ. ಅಗತ್ಯದಷ್ಟು ಡೋಸ್ಗಳ ಸಂಗ್ರಹ ಇದೆ. 5 ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ನಾವು ಖಂಡಿತವಾಗಿಯೂ ತಜ್ಞರ ಶಿಫಾರಸನ್ನು ಅನುಸರಿಸುತ್ತೇವೆ ಎಂದು ಮಾಂಡವಿಯಾ ಅವರು ಹೇಳಿದ್ದಾರೆ.
ಕಳೆದ ವರ್ಷ ಜುಲೈ–ಆಗಸ್ಟ್ನಲ್ಲಿ ಸೆರೊ ಸರ್ವೆ(ರಕ್ತದ್ರವದ ಮಾದರಿ ಬಳಸಿ ನಡೆಸಿರುವ ಸಮೀಕ್ಷೆ) ನಡೆಸಲಾಗಿತ್ತು. ದೇಶದಲ್ಲಿ ಶೇ. 67ರಷ್ಟು ಮಕ್ಕಳಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿರುವುದು ಈ ಸರ್ವೆಯಲ್ಲಿ ಕಂಡುಬಂದಿದೆ. ಈ ಮಕ್ಕಳೆಲ್ಲಾ ಲಕ್ಷಣ ರಹಿತರಾಗಿಯೇ ಇದ್ದರು ಎಂದು ಅವರು ತಿಳಿಸಿದರು.