ಅರುಣಾಚಲ: 12 ದಿನಗಳ ನಂತರ ಅಪಹರಿಸಿದ್ದ ಇಬ್ಬರು ಕಟ್ಟಡ ಕಾರ್ಮಿಕರನ್ನು ಬಿಡುಗಡೆ ಮಾಡಿದ ಉಗ್ರರು
ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ಜಿಲ್ಲೆಯಿಂದ ಅಸ್ಸಾಂ ಮತ್ತು ಬಿಹಾರದ ಇಬ್ಬರು ಕಟ್ಟಡ ಕಾರ್ಮಿಕರನ್ನು ಅಪಹರಿಸಿದ್ದ ಶಂಕತಿ ಉಗ್ರರು, 12 ದಿನಗಳ ನಂತರ ಅವರನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ.
Published: 13th February 2022 04:07 PM | Last Updated: 13th February 2022 04:07 PM | A+A A-

ಪೊಲೀಸರ ಜತೆ ಬಿಡುಗಡೆಯಾದ ಕಾರ್ಮಿಕರು
ಗುವಾಹಟಿ: ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ಜಿಲ್ಲೆಯಿಂದ ಅಸ್ಸಾಂ ಮತ್ತು ಬಿಹಾರದ ಇಬ್ಬರು ಕಟ್ಟಡ ಕಾರ್ಮಿಕರನ್ನು ಅಪಹರಿಸಿದ್ದ ಶಂಕತಿ ಉಗ್ರರು, 12 ದಿನಗಳ ನಂತರ ಅವರನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ.
NSCN-Kಯ ಯುಂಗ್ ಆಂಗ್ ಬಣದ ಶಂಕಿತ ಉಗ್ರರು ಅಪಹರಿಸಿದ್ದ ಇಬ್ಬರು ಕಟ್ಟಡ ಕಾರ್ಮಿಕರನ್ನು ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಲಾಂಗ್ಡಿಂಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ ಲೆಗೊ ಅವರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಇದನ್ನು ಓದಿ: ಹಿಜಾಬ್ ವಿವಾದದ ನಡುವೆ, ಅರುಣಾಚಲದಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪು ಧರಿಸಿ ಶಾಲೆಗೆ ಬರಲು ಅವಕಾಶ
"ಸತತ ಪ್ರಯತ್ನಗಳ" ನಂತರ ಪೊಲೀಸರು ಇಬ್ಬರನ್ನು "ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಹರಿಮೋಹನ್ ಮೀನಾ ಅವರು ಹೇಳಿದ್ದಾರೆ.
ಇಬ್ಬರು ಕಾರ್ಮಿಕರು ಆರೋಗ್ಯವಾಗಿದ್ದಾರೆ ಮತ್ತು ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನವರಿ 31 ರ ರಾತ್ರಿ, ಐದಾರು ಉಗ್ರಗಾಮಿಗಳ ಗುಂಪು ಕಾರ್ಮಿಕರ ಶಿಬಿರದಿಂದ ಮೂವರನ್ನು ಅಪಹರಿಸಿ ನೆರೆಯ ನಾಗಾಲ್ಯಾಂಡ್ ಕಡೆಗೆ ಕರೆದೊಯ್ದಿತ್ತು. ಮರುದಿನ ಒಬ್ಬ ಕಾರ್ಮಿಕನನ್ನು ಬಿಡುಗಡೆ ಮಾಡಿದ್ದರು. ಆದರೆ ಇನ್ನಿಬ್ಬರು ಕಾರ್ಮಿಕರಾದ ಅಸ್ಸಾಂನ ಹಿರೇನ್ ಕೋಂಚ್ ಮತ್ತು ಬಿಹಾರದ ರಾಮಶಿಸ್ ಮಹತೋ ಅವರನ್ನು ಉಗ್ರರ ವಶದಲ್ಲಿರಿಸಿಕೊಂಡಿದ್ದರು.