ಉತ್ತರಾಖಂಡ್ ಚುನಾವಣೆ: ನಾನು ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಕಾಂಗ್ರೆಸ್ ನಲ್ಲಿ ಯಾರ ಆಕ್ಷೇಪವಿರಲ್ಲ- ರಾವತ್
ಉತ್ತರಾಖಂಡ್ ನಲ್ಲಿ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರಿಸಿದರೆ ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಕೂಡಾ ಆಕ್ಷೇಪಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಶನಿವಾರ ಹೇಳಿದ್ದಾರೆ.
Published: 13th February 2022 08:06 PM | Last Updated: 13th February 2022 08:06 PM | A+A A-

ಹರೀಶ್ ರಾವತ್
ಡಾರ್ಜಿಲಿಂಗ್: ಉತ್ತರಾಖಂಡ್ ನಲ್ಲಿ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರಿಸಿದರೆ ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಕೂಡಾ ಆಕ್ಷೇಪಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಶನಿವಾರ ಹೇಳಿದ್ದಾರೆ. ತಮ್ಮ ನಾಯಕತ್ವದಲ್ಲಿಯೇ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ತನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಪಂಜಾಬ್ ನಂತೆ ವಿವಾಹವಾಗುವುದಿಲ್ಲ, ಕಾರ್ಯತಂತ್ರದ ವಿಚಾರವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ನಾನು ಹೋರಾಟದ ರಾಜಕಾರಣ ಮಾಡುತ್ತೇನೆ. ಆದರೆ, ಅಧಿಕಾರಕ್ಕಾಗಿ ಅಲ್ಲ, ಚುನಾವಣಾ ಪ್ರಚಾರ ತಮ್ಮ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಪಕ್ಷ ನನಗೆ ಹೇಳಿದೆ. ಚುನಾವಣೆಯಲ್ಲಿ ಗೆಲಲ್ಲು ನಾವು ಹೋರಾಟ ನಡೆಸುತ್ತೇವೆ, ನನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರಿಸಿದರೆ ಪಕ್ಷದಲ್ಲಿ ಯಾರೂ ಕೂಡಾ ತಕರಾರು ತೆಗೆಯುವುದಿಲ್ಲ, ನನ್ನ ಹೆಸರಿಗೆ ಯಾವುದೇ ಸದಸ್ಯರು ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸಲ್ಲ ಎಂದು ಅವರು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಕಾಂಗ್ರೆಸ್ ಕಾರ್ಯತಂತ್ರದ ಭಾಗವಲ್ಲ, ಈ ಬಾರಿ ಶೇಕಡಾ 40 ರಷ್ಟು ಜನರು ನನನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಿದ್ದಾರೆ ಎಂದು ಹರೀಶ್ ರಾವತ್ ಹೇಳಿದರು.