ಹಿಜಾಬ್ ವಿವಾದ: ಕೋಮು ಆಧಾರದಲ್ಲಿ ಜನರನ್ನು ವಿಭಜಿಸಲು ಕೆಲ ಮತಾಂಧರ ಯತ್ನ- ಫಾರೂಖ್ ಅಬ್ದುಲ್ಲಾ
ಹಿಜಾಬ್ ವಿವಾದ ನಡುವೆ ಕೋಮು ಆಧಾರದಲ್ಲಿ ದೇಶದಲ್ಲಿನ ಜನರನ್ನು ವಿಭಜಿಸಲು ಕೆಲ ಮತಾಂಧರು ಪ್ರಯತ್ನಿಸುತ್ತಿರುವುದಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಭಾನುವಾರ ಹೇಳಿದ್ದಾರೆ.
Published: 13th February 2022 08:32 PM | Last Updated: 13th February 2022 08:33 PM | A+A A-

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ
ಪುಲ್ವಾಮಾ: ಹಿಜಾಬ್ ವಿವಾದ ನಡುವೆ ಕೋಮು ಆಧಾರದಲ್ಲಿ ದೇಶದಲ್ಲಿನ ಜನರನ್ನು ವಿಭಜಿಸಲು ಕೆಲ ಮತಾಂಧರು ಪ್ರಯತ್ನಿಸುತ್ತಿರುವುದಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಭಾನುವಾರ ಹೇಳಿದ್ದಾರೆ.
ಪ್ರತಿಯೊಬ್ಬರು ತಮಗೆ ಸರಿಎನಿಸಿದ ಉಡುಪು ಧರಿಸಲು ಹಕ್ಕು ಹೊಂದಿದ್ದಾರೆ. ತಮ್ಮ ಧಾರ್ಮಿಕ ನಂಬಿಕೆಯನ್ನು ಅನುಸರಿಸಲು ಮುಕ್ತ ಸ್ವಾತಂತ್ರ್ಯ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಧಾರ್ಮಿಕ ಭಾವನೆ ಮತ್ತು ಸಂವಿಧಾನವನ್ನು ಗೌರವಿಸಿ ಎಂದ ಜಮ್ಮು, ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್
ದೇಶ ಎಲ್ಲರಿಗೂ ಸಮಾನವಾಗಿದೆ. ಏನನ್ನು ತಿನ್ನಲು, ದೇಶದ ಏಕತೆಗೆ ಅಪಾಯ ತರುವಂತಹದ್ದನ್ನು ಬಿಟ್ಟು ಉಳಿದ ಯಾವುದೇ ಉಡುಪು ಧರಿಸುವ ಹಕ್ಕಿದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಧರ್ಮವಿದೆ ಎಂದು ಫಾರೂಖ್ ಅಬ್ದುಲ್ಲಾ ಸುದ್ದಿಗಾರರಿಗೆ ಹೇಳಿದರು.
ಚುನಾವಣೆಯಲ್ಲಿ ಗೆಲಲ್ಲು ಕೆಲ ಮತಾಂಧರು ಕೋಮು ಆಧಾರದಲ್ಲಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ದೇವರ ಇಚ್ಚೆ, ಇದು ಒಂದು ದಿನ ಅಂತ್ಯವಾಗಲಿದೆ. ಪಾಕಿಸ್ತಾನ ಮತ್ತು ಭಾರತ ನಡುವಣ ಸ್ನೇಹತ್ವ ಬೆಳೆದರೆ ಹಗೆತನ ಕೊನೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.