ಇಸ್ರೋದ 2022ರ ಮೊದಲ ಉಡಾವಣೆ ಯಶಸ್ವಿ: 3 ಉಪಗ್ರಹಗಳನ್ನು ಹೊತ್ತು ಸಾಗಿದ PSLV-C52
ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (Indian Space & Research Organisation - ISRO ) ಇಂದು ಮುಂಜಾನೆ ಯಶಸ್ವಿಯಾಗಿ 2022ರ ಮೊದಲ ಉಡಾವಣೆ ಮಾಡಿದ್ದು, 3 ಉಪಗ್ರಹಗಳನ್ನು ಹೊತ್ತ PSLV-C52 ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.
Published: 14th February 2022 09:09 AM | Last Updated: 14th February 2022 09:09 AM | A+A A-

PSLV-C52 ಉಡಾವಣೆ
ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (Indian Space & Research Organisation - ISRO) ಇಂದು ಮುಂಜಾನೆ ಯಶಸ್ವಿಯಾಗಿ 2022ರ ಮೊದಲ ಉಡಾವಣೆ ಮಾಡಿದ್ದು, 3 ಉಪಗ್ರಹಗಳನ್ನು ಹೊತ್ತ PSLV-C52 ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.
India’s Polar Satellite Launch Vehicle PSLV-C52 injected Earth Observation Satellite EOS-04, into an intended sun synchronous polar orbit of 529 km altitude at 06:17 hours IST on February 14, 2022 from Satish Dhawan Space Centre, SHAR, Sriharikota. https://t.co/BisacQP8Qf
— ISRO (@isro) February 14, 2022
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಎಸ್‌ಎಆರ್ ನಿಂದ ಬೆಳಿಗ್ಗೆ5.59 ಕ್ಕೆ ಉಡಾವಣೆ ನಡೆಸಲಾಯಿತು. PSLV-C52 ರಾಕೆಟ್ (ಪೋಲಾರ್ ಉಪಗ್ರಹ ಉಡಾವಣಾ ವಾಹನ)ನಲ್ಲಿ ಭೂ ವೀಕ್ಷಣಾ ಉಪಗ್ರಹವನ್ನು (Earth Observation Satellite - EOS-04) ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದರೊಂದಿಗೆ ಇತರ ಎರಡು ರೈಡ್ ಶೇರ್ ಉಪಗ್ರಹಗಳನ್ನು ಕೂಡ ಪಿಎಸ್ ಎಲ್ ವಿ-ಸಿ52 ಕಕ್ಷೆಗೆ ಸಾಗಿಸಿತು.
ಗ್ರಹದಿಂದ ಸುಮಾರು 529 ಕಿಲೋಮೀಟರ್ ಎತ್ತರದಲ್ಲಿರುವ ಸನ್-ಸಿಂಕ್ರೋನಸ್ ಕಕ್ಷೆಯಲ್ಲಿ ಇಒಎಸ್-04 ಅನ್ನು ನಿಯೋಜಿಸಲು ಶ್ರೀಹರಿಕೋಟಾದ ಎಸ್‌ಎಆರ್ ನಿಂದ ಬೆಳಿಗ್ಗೆ5.59 ಕ್ಕೆ ಉಡಾವಣೆ ನಡೆಸಲಾಯಿತು. ನಾಲ್ಕು ಹಂತದ ರಾಕೆಟ್ ವಿದ್ಯಾರ್ಥಿ ಉಪಗ್ರಹ ಇನ್ ಸ್ಪೈರ್ ಸ್ಯಾಟ್ ಮತ್ತು ಇನ್ ಸ್ಯಾಟ್-2ಡಿಟಿ ಎಂದು ಕರೆಯಲ್ಪಡುವ ಬಾಹ್ಯಾಕಾಶ ನೌಕೆಯೊಂದಿಗೆ ಮೇಲಕ್ಕೆತ್ತಲ್ಪಟ್ಟಿತು. ಇದು ಭವಿಷ್ಯದಲ್ಲಿ ಭಾರತ-ಭೂತಾನ್ ಜಂಟಿ ಕಾರ್ಯಾಚರಣೆಯ ಪೂರ್ವಗಾಮಿಯಾಗಿದೆ ಎಂದು ಹೇಳಲಾಗಿದೆ.
#PSLVC52 lifts off from Sriharikota with EOS-04 and two small satellites which includes one student satellite (INSPIREsat-1) & a technology demonstrator satellite INS-2TD
— All India Radio News (@airnewsalerts) February 14, 2022
EOS-04 is a Radar Imaging Satellite designed to provide high quality images under all weather conditions pic.twitter.com/NyHHgbrR5h
ಭೂ ವೀಕ್ಷಣಾ ಉಪಗ್ರಹ-04 ಅನ್ನು ರಾಡಾರ್ ಇಮೇಜಿಂಗ್ ಉಪಗ್ರಹ (ರಿಸ್ಯಾಟ್) ಎಂದೂ ಕರೆಯಲಾಗುತ್ತದೆ. ಇದನ್ನು ಕೃಷಿ, ಅರಣ್ಯ ಮತ್ತು ನೆಡುತೋಪುಗಳು, ಪ್ರವಾಹ ಮ್ಯಾಪಿಂಗ್, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನದಂತಹ ಅನ್ವಯಗಳಿಗೆ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ರಿಸೋರ್ಸಸ್ ಸ್ಯಾಟ್, ಕಾರ್ಟೋಸ್ಯಾಟ್ ಮತ್ತು ರಿಸ್ಯಾಟ್-2ಬಿ ಸರಣಿಗಳು ಮಾಡಿದ ಅವಲೋಕನಗಳನ್ನು ಪೂರ್ಣಗೊಳಿಸುವ ಸಿ-ಬ್ಯಾಂಡ್ ನಲ್ಲಿ ಬಾಹ್ಯಾಕಾಶ ನೌಕೆಯು ವೀಕ್ಷಣಾ ದತ್ತಾಂಶವನ್ನು ಸಂಗ್ರಹಿಸುತ್ತದೆ. ಉಪಗ್ರಹವು ಒಂದು ದಶಕದ ಕಾರ್ಯಾಚರಣೆ ಜೀವಿತಾವಧಿಯನ್ನು ಹೊಂದಿದೆ ಎಂದು ಹೇಳಲಾಗಿದೆ.