ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಐಐಎಸ್ ಸಿಗೆ 'ಮೈಂಡ್‌ಟ್ರೀ'ಯಿಂದ 425 ಕೋಟಿ ರೂ. ದೇಣಿಗೆ
ಪರೋಪಕಾರಿ ದಂಪತಿಗಳಾದ ಸುಸ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ಹಾಗೂ ರಾಧಾ ಮತ್ತು ಎನ್‌ಎಸ್ ಪಾರ್ಥಸಾರಥಿ ಅವರು ಒಟ್ಟಾಗಿ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ವೈದ್ಯಕೀಯ...
Published: 14th February 2022 07:57 PM | Last Updated: 14th February 2022 07:57 PM | A+A A-

ಒಪ್ಪಂದಕ್ಕೆ ಸಹಿ
ಭುವನೇಶ್ವರ: ಪರೋಪಕಾರಿ ದಂಪತಿಗಳಾದ ಸುಸ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ಹಾಗೂ ರಾಧಾ ಮತ್ತು ಎನ್‌ಎಸ್ ಪಾರ್ಥಸಾರಥಿ ಅವರು ಒಟ್ಟಾಗಿ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಾಲೆ ಮತ್ತು 800 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಗೆ 425 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಸ್ನಾತಕೋತ್ತರ ವೈದ್ಯಕೀಯ ಶಾಲೆ ಮತ್ತು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು IISc ಸ್ವೀಕರಿಸಿದ ಏಕೈಕ ಅತಿದೊಡ್ಡ ಖಾಸಗಿ ದೇಣಿಗೆಯಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: 'ಅಂಶಿ ಘಾಟ್' ಪುನಃ ತೆರೆಯಲು ಬೆಂಗಳೂರಿನ ಐಐಎಸ್ ಸಿ ಸಹಾಯ ಕೋರಿದ ಉತ್ತರ ಕನ್ನಡ ಜಿಲ್ಲಾಡಳಿತ
ಸುಸ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ಹಾಗೂ ರಾಧಾ ಮತ್ತು ಎನ್‌ಎಸ್ ಪಾರ್ಥಸಾರಥಿ ಅವರು 'ಮೈಂಡ್‌ಟ್ರೀಯ ಸಹ ಸಂಸ್ಥಾಪಕರಾಗಿದ್ದಾರೆ. ಬೃಹತ್ ದೇಣಿಗೆ ನೀಡಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ ಎಂದು ಹೆಸರಿಡಲು ನಿರ್ಧರಿಸಲಾಗಿದೆ.
ಸುಸ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ದಂಪತಿಯೊಂದಿಗಿನ ಪಾಲುದಾರಿಕೆ ಒಪ್ಪಂದಕ್ಕೆ ಐಐಎಸ್ ಸಿ ಸಹಿ ಹಾಕಿದೆ. ಅಹಮದಾಬಾದ್ ಮೂಲದ ವಾಸ್ತುಶಿಲ್ಪಿ ಆರ್ಚಿ ಮೆಡೆಸ್ ಆಸ್ಪತ್ರೆಯ ಕಟ್ಟಡವನ್ನು ವಿನ್ಯಾಸಗೊಳಿಸಿದ್ದಾರೆ.
ಈ ವೈದ್ಯಕೀಯ ಸಂಸ್ಥೆಯನ್ನು ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ ಎಂದು ಹೆಸರಿಸಲಾಗುವುದು. ಈ ಸಂಸ್ಥೆ ಹೊಸ ತಳಿಯ ವೈದ್ಯ-ವಿಜ್ಞಾನಿಗಳನ್ನು ಸೃಷ್ಟಿಸುವ ಉದ್ದೇಶದಿಂದ ಸಮಗ್ರ ಡ್ಯುಯಲ್ ಡಿಗ್ರಿ ಎಂಡಿ-ಪಿಎಚ್‌ಡಿ ಕಾರ್ಯಕ್ರಮವನ್ನು ನೀಡಿಲಿದೆ. ಅವರು ಹೊಸ ಚಿಕಿತ್ಸೆ ಮತ್ತು ಆರೋಗ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಕ್ಲಿನಿಕಲ್ ಸಂಶೋಧನೆಯಲ್ಲಿ ವೃತ್ತಿಜೀವನ ಮುಂದುವರಿಸುತ್ತಾರೆ ಎಂದು ಸಂಸ್ಥೆ ತಿಳಿಸಿದೆ.