
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಂಗಳವಾರ ಎರಡನೇ ಬಾರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವುದರಿಂದ ಮನೆಯಲ್ಲಿ ಪ್ರತ್ಯೇಕವಾಗಿರುವುದಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.
ಇದನ್ನು ಓದಿ: ಹಿಜಾಬ್ ನಿಷೇಧದ ಪ್ರಸ್ತಾವನೆ ಇಲ್ಲ: ವಸ್ತ್ರ ಸಂಹಿತೆ ಕುರಿತ ಹೇಳಿಕೆಯಿಂದ ಮಧ್ಯಪ್ರದೇಶ ಸರ್ಕಾರ, ಸಚಿವರ ಯು-ಟರ್ನ್
ನಾನು RTPCR #COVID19 ಪರೀಕ್ಷೆಗೆ ಒಳಪಟ್ಟೆ. ಅದರಲ್ಲಿ ನನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ನನಗೆ ಸಾಮಾನ್ಯ ರೋಗ ಲಕ್ಷಣಗಳಿವೆ. ಕೋವಿಡ್ -19 ಮಾರ್ಗಸೂಚಿಗಳ ಅನುಸಾರ ನಾನು ಮನೆಯಲ್ಲೇ ಐಸೋಲೇಟ್ ಆಗಿದ್ದೇನೆ ಎಂದು ಮಧ್ಯಪ್ರದೇಶ ಸಿಎಂ ಟ್ವೀಟ್ ಮಾಡಿದ್ದಾರೆ.
ನಾನು ಮುಂದಿನ ಎಲ್ಲಾ ಕೆಲಸಗಳನ್ನು ವರ್ಚುವಲ್ ಮೂಲಕ ಮಾಡುತ್ತೇನೆ. ನಾಳೆ ಸಂತ ಶಿರೋಮಣಿ ರವಿದಾಸ್ ಜಯಂತಿಯ ಕಾರ್ಯಕ್ರಮದಲ್ಲಿ ನಾನು ವರ್ಚುವಲ್ ಮೂಲಕ ಭಾಗಿಯಾಗುತ್ತೇನೆ ಎಂದು ಅವರು ಹೇಳಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಹಿಂದೆ 2020ರಲ್ಲೂ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಮತ್ತು ಕೆಲವು ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗಿದ್ದರು.