ಭಯಾನಕ ವಿಡಿಯೋ: ಕೂದಲೆಳೆ ಅಂತರದಲ್ಲಿ ರೈಲು ಢಿಕ್ಕಿಯಿಂದ ಬೈಕ್ ಸವಾರರು ಪಾರು, ಬೈಕ್ ಗಳು ಪುಡಿ-ಪುಡಿ
ಇಬ್ಬರು ಬೈಕ್ ಸವಾರರು ರೈಲು ಢಿಕ್ಕಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿ ವಿಡಿಯೋ ವ್ಯಾಪಕ ವೈರಲ್ ಆಗಿದೆ.
Published: 15th February 2022 02:22 PM | Last Updated: 15th February 2022 03:12 PM | A+A A-

ಬೈಕ್ ರೈಲು ಅಪಘಾತ
ಮುಂಬೈ: ಇಬ್ಬರು ಬೈಕ್ ಸವಾರರು ರೈಲು ಢಿಕ್ಕಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿ ವಿಡಿಯೋ ವ್ಯಾಪಕ ವೈರಲ್ ಆಗಿದೆ.
ಮುಂಬೈನ ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದ್ದು, ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿವೆಯಾದರೂ ಬೈಕ್ ಸವಾರರು ಮಾತ್ರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಈ ವಿಡಿಯೋದಲ್ಲಿರುವ ಸಮಯದ ಪ್ರಕಾರ ಇದು ಫೆಬ್ರವರಿ 12 ರಂದು ಸಂಜೆ 6:18 ರ ಸುಮಾರಿಗೆ ನಡೆದಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಈ ಭಯಾನಕ ಘಟನೆ ಮುಂಬೈನಲ್ಲಿ ನಡೆದಿದೆ.
Smithereens 2022... bike and trainhttps://t.co/alAgCtMBz5 pic.twitter.com/jBwFDeGGYA
— Rajendra B. Aklekar (@rajtoday) February 14, 2022
ಜನರು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ರೈಲ್ವೆ ಹಳಿಗಳ ಬಳಿ ಅಪಘಾತಗಳು ಭಾರತದಲ್ಲಿ ಸಾಮಾನ್ಯ ಘಟನೆಯಾಗಿದೆ. ಅಂತಹದೇ ಘಟನೆ ಇದಾಗಿದ್ದು, ಬೈಕರ್‌ನ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ.
ರೈಲ್ವೆ ಗೇಟ್‌ಗಳಿಲ್ಲದ ರೈಲ್ವೆ ಕ್ರಾಸಿಂಗ್ ಇದಾಗಿದ್ದು, ಮುನ್ನೆಚರಿಕೆ ಇದ್ದರೂ ಈತ ರೈಲ್ವೆ ಛೇದಕವನ್ನು ದಾಟಲು ಪ್ರಯತ್ನಿಸಿ ಸಾವಿಗೆ ಆಹ್ವಾನ ನೀಡಿದ್ದ. ಆದರೆ ಈತನ ಅದೃಷ್ಟ ಚೆನ್ನಾಗಿತ್ತೇನೋ ಬದುಕುಳಿದಿದ್ದಾನೆ.
ವೀಡಿಯೊದಲ್ಲಿ, ಸವಾರನು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಅವಸರ ಅವಸರವಾಗಿ ರೈಲ್ವೆ ಹಳಿ ದಾಟುತ್ತಿರುವುದನ್ನು ಕಾಣಬಹುದು. ಆದರೆ, ಬೈಕ್‌ನ ಟೈರ್ ಟ್ರ್ಯಾಕ್‌ನಲ್ಲಿ ಸಿಲುಕಿಕೊಂಡಿದೆ.
ಕೂಡಲೇ ಈತ ಬೈಕ್ ಬಿಟ್ಟು ಹಿಂದೆ ಸರಿದಿದ್ದು, ಇದೇ ಕ್ಷಣಕ್ಕೆ ವೇಗವಾದ ರೈಲೊಂದು ಆ ಟ್ರ್ಯಾಕ್‌ನಲ್ಲಿ ಪಾಸಾಗಿದೆ. ಪರಿಣಾಮ ಬೈಕ್ ನಾಲ್ಕು ಭಾಗಗಳಾಗಿ ದೂರ ಹೋಗಿ ಬಿದ್ದಿದೆ.