
ಸಂಸತ್ತು
ನವದೆಹಲಿ: ರಾಜ್ಯಸಭೆ, ಲೋಕಸಭೆಗಳ ಕಲಾಪಗಳ ನೇರ ಪ್ರಸಾರ ನೀಡುವ ಸಂಸದ್ ಟಿವಿಯ ಯೂಟ್ಯೂಬ್ ಚಾನಲ್ ನ್ನು ಯೂಟ್ಯೂಬ್ ತೆಗೆದುಹಾಕಿತ್ತು.
ಕಮ್ಯುನಿಟಿ ಗೈಡ್ ಲೈನ್ಸ್ ನ್ನು ಉಲ್ಲಂಘಿಸಿದ್ದ ಕಾರಣಕ್ಕಾಗಿ ಯೂಟ್ಯೂಬ್ ಚಾನಲ್ ನ್ನು ರದ್ದುಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಕೆಲವು ಕಿಡಿಗೇಡಿಗಳು ಸಂಸದ್ ಟಿವಿಯ ಯೂಟ್ಯೂಬ್ ಚಾನಲ್ ನಲ್ಲಿ ಚಾನಲ್ ನ ಹೆಸರನ್ನು ಎಥೆರಿಯಮ್ (ಕ್ರಿಪ್ಟೋ ಕರೆನ್ಸಿ) ಗೆ ಬದಲಾಯಿಸಿದ್ದರು.
"ಭದ್ರತಾ ಲೋಪವನ್ನು ಶಾಶ್ವತವಾಗಿ ಬಗೆಹರಿಸುತ್ತೇವೆ ಹಾಗೂ ವೇದಿಕೆಯಲ್ಲಿನ ಚಾನಲ್ ನ್ನು ಸಾಧ್ಯವಾದಷ್ಟೂ ಶೀಘ್ರವೇ ಮರುಸ್ಥಾಪಿಸುತ್ತೇವೆ" ಎಂದು ಯೂಟ್ಯೂಬ್ ಹೇಳಿದೆ. ಸಂಸದ್ ಟಿವಿಯ ಸಾಮಾಜಿಕ ಜಾಲತಾಣ ತಂಡ ತಕ್ಷಣವೇ ಕಾರ್ಯಪ್ರವೃತ್ತವಾಗಿ ಚಾನಲ್ ನ್ನು ಬೆಳಿಗ್ಗೆ 3.45 ರ ವೇಳೆಗೆ ಮರುಸ್ಥಾಪನೆಗೊಂಡಿತ್ತು.
ಭಾರತದಲ್ಲಿ ಸೈಬರ್ ಭದ್ರತಾ ಘಟನೆಗಳ ಬಗ್ಗೆ ಸ್ಪಂದಿಸುವ ಭಾರತ ಕಂಪ್ಯೂಟರ್ ತುರ್ತು ಸ್ಪಂದನೆ (ಸಿಇಆರ್ ಟಿ-ಐನ್) ತಂಡ ಸಂಸದ್ ಟಿವಿಯ ಚಾನಲ್ ನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿರುವುದನ್ನು ವರದಿ ಮಾಡಿದೆ.