ಎನ್‌ಎಸ್‌ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ನಿವಾಸದ ಮೇಲೆ ಐಟಿ ದಾಳಿ!
ಎನ್‌ಎಸ್‌ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Published: 17th February 2022 12:53 PM | Last Updated: 17th February 2022 02:41 PM | A+A A-

ಎನ್ ಎಸ್ ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ
ನವದೆಹಲಿ: ಎನ್‌ಎಸ್‌ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮುಂಬೈ ಮತ್ತು ಚೆನ್ನೈನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇತ್ತೀಚಿನ ಸೆಬಿ ಆದೇಶದ ನಂತರ ಚಿತ್ರಾ ರಾಮಕೃಷ್ಣ ಅವರು ಸುದ್ದಿಯಲ್ಲಿದ್ದು, ಅವರು ಹಿಮಾಲಯ ಶ್ರೇಣಿಗಳಲ್ಲಿ ವಾಸಿಸುವ ಯೋಗಿಯೊಬ್ಬರು, ಆನಂದ್ ಸುಬ್ರಮಣಿಯನ್ ಅವರನ್ನು ಎಕ್ಸ್‌ಚೇಂಜ್‌ನ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ (ಎಂಡಿ) ಸಲಹೆಗಾರರಾಗಿ ನೇಮಕ ಮಾಡಿದ್ದರು. ಆಲ್ಲದೆ ಅನಾಮದೇಯ ಯೋಗಿ ಬಾಬಾಗೆ ಇ-ಮೇಲ್ ಮೂಲಕ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: ನಿಗೂಢ ಬಾಬಾ ಜೊತೆ ರಹಸ್ಯ ಮಾಹಿತಿ ಹಂಚಿಕೊಂಡ ಆರೋಪ: ಎನ್ ಎಸ್ ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ವಿರುದ್ಧ ತನಿಖೆ ಸಾಧ್ಯತೆ
ಚಿತ್ರಾ ರಾಮಕೃಷ್ಣ ಅವರು ಏಪ್ರಿಲ್, 2013 ರಿಂದ ಡಿಸೆಂಬರ್, 2016 ರವರೆಗೆ NSE ನ MD ಮತ್ತು CEO ಆಗಿದ್ದರು. ಚಿತ್ರಾ ರಾಮಕೃಷ್ಟ ಮತ್ತು ಇತರರ ವಿರುದ್ಧ ತೆರಿಗೆ ವಂಚನೆ ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳ ಮೇರೆಗೆ ಅಧಿಕಾರಿಗಳು ಈ ಶೋಧನೆ ನಡೆಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಎನ್‌ಎಸ್‌ಇಯ ಹಣಕಾಸು ಮತ್ತು ವ್ಯವಹಾರ ಯೋಜನೆಗಳು, ಡಿವಿಡೆಂಡ್ ಸನ್ನಿವೇಶ ಮತ್ತು ಹಣಕಾಸು ಫಲಿತಾಂಶಗಳು ಸೇರಿದಂತೆ ಕೆಲವು ಆಂತರಿಕ ಗೌಪ್ಯ ಮಾಹಿತಿಯನ್ನು ರಾಮಕೃಷ್ಣ ಅವರು ಯೋಗಿಯೊಂದಿಗೆ ಹಂಚಿಕೊಂಡಿದ್ದಾರೆ. ಎಕ್ಸ್‌ಚೇಂಜ್‌ನ ಉದ್ಯೋಗಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನಗಳ ಬಗ್ಗೆ ಅವರನ್ನು ಸಮಾಲೋಚಿಸಿದ್ದಾರೆ ಎಂದು ಹೇಳಲಾಗಿದೆ.
3 ಕೋಟಿ ರೂ ದಂಡ ವಿಧಿಸಿದ್ದ ಸೆಬಿ
ಇನ್ನು ಅಪರಿಚಿತ ಮೂರನೇ ವ್ಯಕ್ತಿಯ ಆಂತರಿಕ ವಿನಿಮಯದ ಮಾಹಿತಿಯನ್ನು ರವಾನಿಸಿದಾಗ ಅವರು ಅಕ್ರಮ ಲಾಭ ಗಳಿಸಿದ್ದಾರೆ ಎಂಬ ಆರೋಪದ ಮೇಲೆ ತೆರಿಗೆ ಇಲಾಖೆ ಶೋಧ ನಡೆಸುತ್ತಿದೆ ಎಂದು ಈ ವ್ಯಕ್ತಿ ತಿಳಿಸಿದ್ದಾರೆ. ಈ ಶೋಧವು ಫೆಬ್ರವರಿ 11 ರಂದು ಜಾರಿಗೊಳಿಸಲಾದ ಸೆಬಿ ಆದೇಶದ ಹಿನ್ನೆಲೆಯಲ್ಲಿ ಬಂದಿದೆ. ಅಲ್ಲಿ ನಿಯಂತ್ರಕವು ಎನ್ಎಸ್ಇನ ಮಾಜಿ ಮುಖ್ಯ ಕಾರ್ಯನಿರ್ವಾಹಕರಾದ ಚಿತ್ರಾ ರಾಮಕೃಷ್ಣ ಅವರ ಆಡಳಿತ ಮತ್ತು ನೈತಿಕ ನಡವಳಿಕೆಯಲ್ಲಿ ಗಂಭೀರ ಲೋಪಗಳನ್ನು ಕಂಡುಹಿಡಿದಿದೆ.
ಸೆಬಿ ತನ್ನ ಆದೇಶದಲ್ಲಿ ರಾಮಕೃಷ್ಣ ಅವರು ಅಪರಿಚಿತ ಮೂರನೇ ವ್ಯಕ್ತಿಯೊಂದಿಗೆ ವಿನಿಮಯಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದನ್ನು ಪತ್ತೆ ಹಚ್ಚಿದ್ದು ಚಿತ್ರಾ ಅವರಿಗೆ 3 ಕೋಟಿ ರೂ ದಂಡ ವಿಧಿಸಿದೆ. ಎನ್‌ಎಸ್‌ಇಯ ಹಣಕಾಸು ಮತ್ತು ವ್ಯಾಪಾರ ಯೋಜನೆಗಳ ಹಂಚಿಕೆಯು ಊಹಿಸಲೂ ಸಾಧ್ಯವಾಗದ ಕಾರ್ಯವಾಗಿದೆ. ಅದು ಷೇರು ವಿನಿಮಯದ ಅಡಿಪಾಯವನ್ನು ಅಲುಗಾಡಿಸಬಹುದು ಎಂದು ನಿಯಂತ್ರಕರ ಆದೇಶವು ಹೇಳಿದೆ. ನಿಯಂತ್ರಕ ನಿಯಮಗಳ ಉಲ್ಲಂಘನೆಯಲ್ಲಿ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯಿಂದ (ಎನ್‌ಆರ್‌ಸಿ) ಅದನ್ನು ತೆರವುಗೊಳಿಸದೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಆನಂದ್ ಸುಬ್ರಮಣಿಯನ್ ಅವರನ್ನು ನೇಮಿಸಿರುವುದು ಮತ್ತೊಂದು ಗಂಭೀರ ಲೋಪವಾಗಿದೆ.
ಸೆಬಿ ಆದೇಶದ ಪ್ರಕಾರ, ಇದು ರಾಮಕೃಷ್ಣ ಮತ್ತು ಸುಬ್ರಮಣಿಯನ್ ಮತ್ತು ಅಪರಿಚಿತ ಗುರುಗಳನ್ನು ಒಳಗೊಂಡ “ಹಣ ಮಾಡುವ ಯೋಜನೆಯ ಸ್ಪಷ್ಟವಾದ ಪಿತೂರಿ” ಆಗಿತ್ತು. ರಾಮಕೃಷ್ಣ ವಿರುದ್ಧ ಇದು ಎರಡನೇ ಆದಾಯ ತೆರಿಗೆ ತನಿಖೆಯಾಗಿದೆ. ಕೊ-ಲೊಕೇಷನ್ ಹಗರಣ ಎಂದು ಕರೆಯಲ್ಪಡುವ ಪ್ರಕರಣದಲ್ಲಿ ಈ ಹಿಂದೆ ನವೆಂಬರ್ 2017 ರಲ್ಲಿ ದಾಳಿ ನಡೆದಿತ್ತು.