ಹಿಜಾಬ್ ಅನ್ನು ಮುಸ್ಲಿಂ ಮಹಿಳೆಯರಿಗೆ ಬಲವಂತವಾಗಿ ಹಾಕಿಸಲಾಗುತ್ತದೆ: ಯೋಗಿ ಆದಿತ್ಯನಾಥ್
ಹಿಜಾಬ್ ಅನ್ನು ಮುಸ್ಲಿಂ ಮಹಿಳೆಯರಿಗೆ ಬಲವಂತವಾಗಿ ಹಾಕಿಸಲಾಗುತ್ತದೆ. ಹಿಜಾಬ್ ಧರಿಸುವಿಕೆಯನ್ನು ಮಹಿಳೆಯರ ಆಯ್ಕೆಗೆ ಬಿಡುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
Published: 17th February 2022 12:54 PM | Last Updated: 17th February 2022 01:30 PM | A+A A-

ಯೋಗಿ ಆದಿತ್ಯನಾಥ್
ಲಕ್ನೋ: ಹಿಜಾಬ್ ಅನ್ನು ಮುಸ್ಲಿಂ ಮಹಿಳೆಯರಿಗೆ ಬಲವಂತವಾಗಿ ಹಾಕಿಸಲಾಗುತ್ತದೆ. ಹಿಜಾಬ್ ಧರಿಸುವಿಕೆಯನ್ನು ಮಹಿಳೆಯರ ಆಯ್ಕೆಗೆ ಬಿಡುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಹಿಜಾಬ್ ಧರಿಸುವಿಕೆಯನ್ನು ಮಹಿಳೆಯರು ನಿರ್ಧರಿಸುವಂತಿಲ್ಲ. ಮಹಿಳೆಯರು ಎಂದಾದರೂ ತ್ರಿವಳಿ ತಲಾಖ್ ದುಷ್ಕೃತ್ಯವನ್ನು ಮಹಿಳೆಯರು ಸ್ವತಃ ಒಪ್ಪಿಕೊಂಡಿದ್ದಾರೆಯೇ? ಆ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಕೇಳಿ ಎಂದು ಹೇಳಿದರು.
“ನಾನು ಅವರ ಕಣ್ಣೀರನ್ನು ನೋಡಿದ್ದೇನೆ. ಅವರು ತಲಾಖ್ ಬಗ್ಗೆ ಮಾತನಾಡುವಾಗ, ಅವರ ಸಂಬಂಧಿಕರು ಕಣ್ಣೀರು ಸುರಿಸುತ್ತಿದ್ದರು. ತ್ರಿವಳಿ ತಲಾಖ್ ರದ್ದುಪಡಿಸಿದ್ದಕ್ಕಾಗಿ ಜೌನ್ ಪುರದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು ಎಂದರು.
ಇದನ್ನೂ ಓದಿ: 'ಹಿಂದೂ ಸಮಾಜದಲ್ಲಿ ಹಿಜಾಬ್ ಧರಿಸುವ ಅಗತ್ಯವಿಲ್ಲ, ಮನೆಗಳಲ್ಲಿ ಸುರಕ್ಷಿತವಾಗಿಲ್ಲದವರು ಧರಿಸುತ್ತಾರೆ': ಬಿಜೆಪಿ ಸಂಸದೆ ಸಾದ್ವಿ ಪ್ರಗ್ಯಾ
ವೈಯಕ್ತಿಕ ಉಡುಪು ವ್ಯಕ್ತಿಯ ಆಯ್ಕೆಗೆ ಸೀಮಿತವಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. “ನಾನು ಯಾವುದೇ ಅಧಿಕಾರಿಯ ಮೇಲೆ ನನ್ನ ಸಾರ್ಟೋರಿಯಲ್ ಆಯ್ಕೆಯನ್ನು ಒತ್ತಾಯಿಸಲಿಲ್ಲ. ನನ್ನ ಕಛೇರಿಯಲ್ಲಿರುವ ಎಲ್ಲರಿಗೂ ಭಾಗುವಾ [ಕೇಸರಿ] ಧರಿಸಲು ನಾನು ಕೇಳಬಹುದೇ? ನಾನು ಇದನ್ನು ನನ್ನ ಪಕ್ಷದ ಎಲ್ಲರಿಗೂ ಹೇಳಬಹುದೇ? ನನಗೆ ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇರಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.