ಐಟಿ ದಾಳಿ ಬೆನ್ನಲ್ಲೇ ಸಿಬಿಐನಿಂದ ಎನ್‌ಎಸ್‌ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ವಿಚಾರಣೆ; ದೇಶ ತೊರೆಯದಂತೆ ಲುಕೌಟ್ ಪ್ರಕ್ರಿಯೆ ಜಾರಿ!
ಸೆಬಿ ಮತ್ತು ಆದಾಯ ತೆರಿಗೆ ಇಲಾಖೆ ದಾಳಿ ಬೆನ್ನಲ್ಲೇ ಎನ್‌ಎಸ್‌ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಅವರಿಗೆ ಇದೀಗ ಸಿಬಿಐ ಆಘಾತ ನೀಡಿದ್ದು, ಅವರು ದೇಶ ತೊರೆಯದಂತೆ ಲುಕೌಟ್ ಪ್ರಕ್ರಿಯೆ ಆರಂಭಿಸಿದೆ.
Published: 18th February 2022 04:13 PM | Last Updated: 18th February 2022 05:44 PM | A+A A-

ಎನ್ ಎಸ್ ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ
ಮುಂಬೈ: ಸೆಬಿ ಮತ್ತು ಆದಾಯ ತೆರಿಗೆ ಇಲಾಖೆ ದಾಳಿ ಬೆನ್ನಲ್ಲೇ ಎನ್‌ಎಸ್‌ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಅವರಿಗೆ ಇದೀಗ ಸಿಬಿಐ ಆಘಾತ ನೀಡಿದ್ದು, ಅವರು ದೇಶ ತೊರೆಯದಂತೆ ಲುಕೌಟ್ ಪ್ರಕ್ರಿಯೆ ಆರಂಭಿಸಿದೆ.
ಶುಕ್ರವಾರ ಅವರ ನಿವಾಸದಲ್ಲಿ ಹೊಸದಾಗಿ ಹೊರಹೊಮ್ಮಿದ ಸಂಗತಿಗಳ ನಡುವೆಯೇ ಇದೀಗ ಸಿಬಿಐ ಕೂಡ ಚಿತ್ರಾ ರಾಮಕೃಷ್ಣ ಅವರನ್ನು ವಿಚಾರಣೆ ನಡೆಸಲು ಪ್ರಕ್ರಿಯೆ ಆರಂಭಿಸಿದೆ. ಇದರ ಮೊದಲ ಭಾಗವಾಗಿ ಸಿಬಿಐ ಚಿತ್ರಾ ರಾಮಕೃಷ್ಣ ಅವರ ವಿರುದ್ಧ ಲುಕೌಟ್ ಪ್ರಕ್ರಿಯೆ ಆರಂಭಿಸಿದೆ.
ಇದನ್ನೂ ಓದಿ: ಎನ್‌ಎಸ್‌ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ನಿವಾಸದ ಮೇಲೆ ಐಟಿ ದಾಳಿ!
ಮೂಲಗಳ ಪ್ರಕಾರ, ಚಿತ್ರಾ ರಾಮಕೃಷ್ಣ, ರವಿ ನಾರಾಯಣ್, ರಾಮಕೃಷ್ಣ ಅವರ ಪೂರ್ವಾಧಿಕಾರಿ ಮತ್ತು ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು MDಯ ಸಲಹೆಗಾರ ಆನಂದ್ ಸುಬ್ರಮಣಿಯನ್ ವಿರುದ್ಧ ಸಿಬಿಐ ಲುಕ್ಔಟ್ ಸುತ್ತೋಲೆ (LOC) ಜಾರಿ ಮಾಡಿದೆ. ಕಾನೂನು ಏಜೆನ್ಸಿಗಳಿಗೆ ಬೇಕಾದವರು ದೇಶವನ್ನು ತೊರೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು LOC ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಅಂತೆಯೇ ಇದೇ ಪ್ರಕರಣದ ಮುಂದುವರೆದ ಭಾಗವಾಗಿ ಚಿತ್ರಾ ರಾಮಕೃಷ್ಣ ಮತ್ತು ದೆಹಲಿ ಮೂಲದ OPG ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಮತ್ತು ಪ್ರವರ್ತಕ ಸಂಜಯ್ ಗುಪ್ತಾ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿದೆ, ಆ ಮೂಲಕ ಎನ್‌ಎಸ್‌ಇಯಲ್ಲಿ ಕೆಲವು ದಲ್ಲಾಳಿಗಳಿಗೆ ಆದ್ಯತೆಯ ಪ್ರವೇಶವನ್ನು ನೀಡಲಾಯಿತು, ಈ ಮೂಲಕ ಅವರು ಮಾಹಿತಿಯನ್ನು ಪಡೆಯುವುದರಿಂದ ಲಾಭ ಪಡೆದರು ಎಂಬ ಆರೋಪಕ್ಕೆ ಪುಷ್ಟಿ ಬಂದಂತಾಗಿದೆ.
ಇದನ್ನೂ ಓದಿ: ರಹಸ್ಯ ಮಾಹಿತಿ ಹಂಚಿಕೊಂಡ ಆರೋಪ: ನಿಗೂಢ ಬಾಬಾ ಮತ್ತು ಎನ್ ಎಸ್ ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ವಿರುದ್ಧ ತನಿಖೆ ಸಾಧ್ಯತೆ
ಸೆಬಿ ಮತ್ತು ಎನ್‌ಎಸ್‌ಇಯ ಅಪರಿಚಿತ ಅಧಿಕಾರಿಗಳು ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಸಿಬಿಐ ತನಿಖೆ ನಡೆಸುತ್ತಿದೆ. ಖಾಸಗಿ ಕಂಪನಿಯ ಮಾಲೀಕರು ಮತ್ತು ಪ್ರವರ್ತಕರು ಎನ್‌ಎಸ್‌ಇಯ ಅಪರಿಚಿತ ಅಧಿಕಾರಿಗಳೊಂದಿಗೆ ಪಿತೂರಿ ನಡೆಸಿ ಎನ್‌ಎಸ್‌ಇಯ ಸರ್ವರ್ ಆರ್ಕಿಟೆಕ್ಚರ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 2010-2012ರ ಅವಧಿಯಲ್ಲಿನ ಸೌಲಭ್ಯವು ಸ್ಟಾಕ್ ಎಕ್ಸ್‌ಚೇಂಜ್‌ನ ಎಕ್ಸ್‌ಚೇಂಜ್ ಸರ್ವರ್‌ಗೆ ಮೊದಲು ಲಾಗಿನ್ ಆಗಲು ಅನುವು ಮಾಡಿಕೊಟ್ಟಿತು, ಇದು ಮಾರುಕಟ್ಟೆಯಲ್ಲಿ ಯಾವುದೇ ಇತರ ಬ್ರೋಕರ್‌ಗಳ ಮೊದಲು ಡೇಟಾವನ್ನು ಪಡೆಯಲು ಸಹಾಯ ಮಾಡಿತು ಎಂದು ಸಿಬಿಐ ತಮ್ಮ ಎಫ್‌ಐಆರ್‌ನಲ್ಲಿ ಆರೋಪಿಸಿದೆ.
ಆದಾಯ ತೆರಿಗೆ ಅಧಿಕಾರಿಗಳು ಶಂಕಿತ ವಂಚನೆಗಾಗಿ ಚಿತ್ರಾ ರಾಮಕೃಷ್ಣ ಮತ್ತು ಅವರ ಮಾಜಿ ಸಲಹೆಗಾರ ಆನಂದ್ ಸುಬ್ರಮಣಿಯನ್ ಅವರಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿಗಳ ಮೇಲೆ ಗುರುವಾರ ಶೋಧ ಆರಂಭಿಸಿದ್ದರು. ಶುಕ್ರವಾರವೂ ಈ ಶೋಧ ಮುಂದುವರಿದಿದೆ.