ಎಲ್ ಇಟಿ ಉಗ್ರ ಗುಂಪಿಗೆ 'ರಹಸ್ಯ ದಾಖಲೆಗಳ ಸೋರಿಕೆ' ಐಪಿಎಸ್ ಅಧಿಕಾರಿ ಬಂಧಿಸಿದ ಎನ್ ಐಎ
ನಿಷೇಧಿತ ಲಷ್ಕರ್ ಇ- ತೊಯ್ಬಾ ಸಂಘಟನೆಯ ಉಗ್ರರಿಗೆ ರಹಸ್ಯ ದಾಖಲೆಗಳ ಸೋರಿಕೆ ಆರೋಪದ ಮೇರೆಗೆ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿ ಅವರನ್ನು ಶುಕ್ರವಾರ ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ ಎಂದು ಅದರ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
Published: 18th February 2022 08:08 PM | Last Updated: 18th February 2022 08:08 PM | A+A A-

ಎನ್ ಐಎ ಸಾಂದರ್ಭಿಕ ಚಿತ್ರ
ನವದೆಹಲಿ: ನಿಷೇಧಿತ ಲಷ್ಕರ್ ಇ- ತೊಯ್ಬಾ ಸಂಘಟನೆಯ ಉಗ್ರರಿಗೆ ರಹಸ್ಯ ದಾಖಲೆಗಳ ಸೋರಿಕೆ ಆರೋಪದ ಮೇರೆಗೆ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿ ಅವರನ್ನು ಶುಕ್ರವಾರ ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ ಎಂದು ಅದರ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
2011ರಲ್ಲಿ ಐಪಿಎಸ್ ಆಗಿ ಮುಂಬಡ್ತಿ ಪಡೆದಿದ್ದ ನೇಗಿ ಅವರನ್ನು ಕಳೆದ ವರ್ಷ ನವೆಂಬರ್ 6 ರಂದು ಎನ್ ಐಎ ದಾಖಲಿಸಿದ್ದ ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಯೋಜಿಸಲು ನಿಷೇಧಿತ ಲಸ್ಕರ್-ಎ-ತೊಯ್ಬಾದ ಉಗ್ರ ಸಂಘಟನೆಯ ಜಾಲವನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ ಕೇಸ್ ಇದಾಗಿದೆ. ಈ ಪ್ರಕರಣದಲ್ಲಿ ಎನ್ಐಎ ಈ ಹಿಂದೆ ಆರು ಮಂದಿಯನ್ನು ಬಂಧಿಸಿತ್ತು.
ತನಿಖೆಯ ಸಮಯದಲ್ಲಿ, ಶಿಮ್ಲಾದಲ್ಲಿ ನಿಯೋಜಿಸಲಾದ ಎಡಿ ನೇಗಿ, ಐಪಿಎಸ್, ಎಸ್ಪಿ ಪಾತ್ರವನ್ನು ಪರಿಶೀಲಿಸಲಾಗಿತ್ತು. ಅಲ್ಲದೇ ಅವರ ಮನೆಗಳನ್ನು ಶೋಧಿಸಲಾಗಿತ್ತು. ರಹಸ್ಯ ದಾಖಲೆಗಳನ್ನು ಎಡಿ ನೇಗಿ ಎಲ್ ಇಟಿ ಕೇಸ್ ಗೆ ಸಂಬಂಧಿಸಿದ ಇನ್ನೊಬ್ಬ ಆರೋಪಿಗೆ ಸೋರಿಕೆ ಮಾಡಿರುವುದು ಕಂಡುಬಂದಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.