ಶೀನಾ ಬೋರಾ ಹತ್ಯೆ ಪ್ರಕರಣ: ಮಹಾರಾಷ್ಟ್ರ ಸರ್ಕಾರ, ಸಿಬಿಐಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಜಾಮೀನು ಅರ್ಜಿಯ ಕುರಿತು ಶುಕ್ರವಾರ ಸುಪ್ರೀಂ ಕೋರ್ಟ್ ಸಿಬಿಐ ಮತ್ತು ಮಹಾರಾಷ್ಟ್ರ ಸರಕಾರದಿಂದ ಪ್ರತಿಕ್ರಿಯೆ ಕೇಳಿದೆ.
Published: 18th February 2022 04:18 PM | Last Updated: 18th February 2022 07:38 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಜಾಮೀನು ಅರ್ಜಿಯ ಕುರಿತು ಶುಕ್ರವಾರ ಸುಪ್ರೀಂ ಕೋರ್ಟ್ ಸಿಬಿಐ ಮತ್ತು ಮಹಾರಾಷ್ಟ್ರ ಸರಕಾರದಿಂದ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಪಿಎಸ್ ನರಸಿಂಹ ಅವರ ಪೀಠವು ಬಾಂಬೆ ಹೈಕೋರ್ಟ್ ನವೆಂಬರ್ 16, 2021ರಂದು ನೀಡಿದ್ದ ಮುಖರ್ಜಿ ಅವರ ಜಾಮೀನು ಆದೇಶವನ್ನು ಪ್ರಶ್ನಿಸಿ ಸಿಬಿಐ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. “ನೋಟೀಸ್ ನೀಡಲಾಗಿದೆ. ಎರಡು ವಾರಗಳಲ್ಲಿ ಹಿಂತಿರುಗಿಸಬಹುದು” ಎಂದು ಪೀಠ ಹೇಳಿದೆ.
2015ರ ಆಗಸ್ಟ್‌ನಲ್ಲಿ ಬಂಧನಕ್ಕೊಳಗಾಗಿ ಮುಂಬೈನ ಬೈಕುಲ್ಲಾ ಮಹಿಳಾ ಕಾರಾಗೃಹದಲ್ಲಿರುವ ಮುಖರ್ಜಿ ಅವರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು. ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯವು ಹಲವು ಸಂದರ್ಭಗಳಲ್ಲಿ ಜಾಮೀನು ನಿರಾಕರಿಸಿತ್ತು.
ಇದನ್ನೂ ಓದಿ: ಶೀನಾ ಬೋರಾ ಇನ್ನೂ ಜೀವಂತ, ಕಾಶ್ಮೀರದಲ್ಲಿದ್ದಾಳೆ; ಸಿಬಿಐ ಗೆ ಇಂದ್ರಾಣಿ ಪತ್ರ
ಮಗಳು ಶೀನಾ ಬೋರಾಳನ್ನು ಕೊಂದ ಆರೋಪದಲ್ಲಿ ಮುಖರ್ಜಿ ವಿಚಾರಣೆ ಎದುರಿಸುತ್ತಿದ್ದಾರೆ. ಬೋರಾ (24) ಅವರನ್ನು 2012 ರ ಏಪ್ರಿಲ್‌ನಲ್ಲಿ ಮುಖರ್ಜಿ, ಆಕೆಯ ಆಗಿನ ಚಾಲಕ ಶ್ಯಾಮ್ವರ್ ರೈ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಅವರು ಕಾರಿನಲ್ಲಿ ಕತ್ತು ಹಿಸುಕಿ ಕೊಂದಿದ್ದರು. ಪಕ್ಕದ ರಾಯಗಡ ಜಿಲ್ಲೆಯ ಕಾಡಿನಲ್ಲಿ ಶವವನ್ನು ಸುಟ್ಟು ಹಾಕಲಾಗಿದೆ. ಮಾಜಿ ಮಾಧ್ಯಮ ಬ್ಯಾರನ್ ಪೀಟರ್ ಮುಖರ್ಜಿಯವರನ್ನೂ ಪಿತೂರಿಯ ಭಾಗವೆಂಬ ಆರೋಪ ಹಿನ್ನೆಲೆ ಬಂಧಿಸಲಾಯಿತು.
ಫೆಬ್ರವರಿ 2020ರಲ್ಲಿ ಅವರಿಗೆ ಹೈಕೋರ್ಟ್ ಜಾಮೀನು ನೀಡಿತು. ಇಂದ್ರಾಣಿ ಮುಖರ್ಜಿಯವರೊಂದಿಗಿನ ಅವರ ವಿವಾಹವು ಸೆರೆವಾಸದ ಅವಧಿಯಲ್ಲಿ ಕೊನೆಗೊಂಡಿತು.