ನಿರ್ಭೀತಿಯಿಂದ ಉತ್ತರಿಸುವವರಿಗೆ ಮತ ನೀಡಿ: ಪಂಜಾಬ್ ಮತದಾರರಿಗೆ ರಾಹುಲ್ ಗಾಂಧಿ ಕರೆ
ಪಂಜಾಬ್ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಇಂದು ಏಕಹಂತದಲ್ಲಿ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದ ಜನತೆಗೆ ನಿಮಗೆ ಬೆಂಬಲ ನೀಡುವ ಮತ್ತು ನಿಮಗೆ ನಿರ್ಭೀತಿಯಿಂದ ಉತ್ತರ ನೀಡುವ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಕರೆ ನೀಡಿದ್ದಾರೆ.
Published: 20th February 2022 10:51 AM | Last Updated: 20th February 2022 10:51 AM | A+A A-

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಮತದಾರರು
ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಇಂದು ಏಕಹಂತದಲ್ಲಿ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದ ಜನತೆಗೆ ನಿಮಗೆ ಬೆಂಬಲ ನೀಡುವ ಮತ್ತು ನಿಮಗೆ ನಿರ್ಭೀತಿಯಿಂದ ಉತ್ತರ ನೀಡುವ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಕರೆ ನೀಡಿದ್ದಾರೆ.
ಇನ್ನು ಉತ್ತರ ಪ್ರದೇಶದ ಜನರು ಅಭಿವೃದ್ಧಿಗೆ ಮತ ಹಾಕಿ ಎಂದು ಕರೆ ನೀಡಿರುವ ಅವರು ಸದ್ಯದಲ್ಲಿಯೇ ಅಲ್ಲಿ ಹೊಸ ಸರ್ಕಾರ ಕಾಣಲಿದೆ ಎಂದು ಟ್ವೀಟ್ ಮಾಡಿದ್ದಾರೆ.
वोट उत्तर प्रदेश में पड़ेगा,
— Rahul Gandhi (@RahulGandhi) February 20, 2022
बदलाव देशभर में आएगा!
शांति और प्रगति के लिए वोट दें- नयी सरकार बनेगी तो नया भविष्य बनेगा।
ಜನರನ್ನು ಬೆಂಬಲಿಸುವ, ನಿರ್ಭೀತಿಯಿಂದ ಉತ್ತರಿಸುವವರಿಗೆ ನಿಮ್ಮ ಮತ ನೀಡಿ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಪಂಜಾಬ್ನ ಪ್ರಗತಿಪರ ಭವಿಷ್ಯಕ್ಕಾಗಿ ಮತ ಚಲಾಯಿಸಿ ಎಂದಿದ್ದಾರೆ.
ಯುಪಿ ಚುನಾವಣೆ ಕುರಿತು ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶದಲ್ಲಿ ಮತ ಚಲಾಯಿಸಲಾಗುವುದು, ಇಡೀ ದೇಶದಲ್ಲಿ ಬದಲಾವಣೆ ಬರಲಿದೆ. ಶಾಂತಿ ಮತ್ತು ಅಭಿವೃದ್ಧಿಗಾಗಿ ಮತ ಹಾಕಿ - ಹೊಸ ಸರ್ಕಾರ ರಚನೆಯೊಂದಿಗೆ ಹೊಸ ಭವಿಷ್ಯವನ್ನು ರೂಪಿಸಲಾಗುವುದು ಎಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಹೇಳಿದ್ದಾರೆ.