
ಮೇಕಾಪಟಿ ಗೌತಮ್ ರೆಡ್ಡಿ
ವಿಜಯವಾಡ: ಆಂಧ್ರ ಪ್ರದೇಶ ಸರ್ಕಾರದ ಕೈಗಾರಿಕ ಸಚಿವ ಮೇಕಪತಿ ಗೌತಮರೆಡ್ಡಿ (50) ಸೋಮವಾರ ನಿಧನರಾಗಿದ್ದಾರೆ.
ಗೌತಮ್ ರೆಡ್ಡಿ ನೆಲ್ಲೂರು ಜಿಲ್ಲೆಯಿಂದ ಎರಡನೇ ಬಾರಿ ಶಾಸಕರಾಗಿದ್ದ ಅವರು, ಒಂದು ವಾರದ ಹಿಂದಷ್ಟೇ ದುಬೈ ಎಕ್ಸ್ಪೋದಲ್ಲಿ ಪಾಲ್ಗೊಂಡು ವಿವಿಧ ಕಂಪನಿಗಳ ಜೊತೆ ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡುವ ಒಪ್ಪಂದ ಮಾಡಿಕೊಂಡಿದ್ದರು, ಫೆಬ್ರವರಿ 20ರಂದು ದುಬೈಯಿಂದ ಹೈದರಾಬಾದ್ಗೆ ಬಂದಿದ್ದರು.
ಮಾಜಿ ಸಂಸದ ಮೇಕಪತಿ ರಾಜಮೋಹನ್ ರೆಡ್ಡಿ ಅವರ ಪುತ್ರರಾದ ಗೌತಮ್ ರೆಡ್ಡಿ ನೆಲ್ಲೂರು ಜಿಲ್ಲೆಯ ಆತ್ಮಾಕೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಗೌತಮ್ ರೆಡ್ಡಿ ಅವರಿಗೆ ಇಂದು ಬೆಳಗ್ಗೆ ಅಸ್ವಸ್ಥರಾಗಿದ್ದಾರೆ. ಈ ವೇಳೆ ಜೂಬ್ಲಿ ಹಿಲ್ಸ್ನ ಅಪೋಲೋ ಆಸ್ಪತ್ರೆಗೆ ರವಾನೆ ಮಾಡುತ್ತಿರುವಗಲೇ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಆಂಧ್ರ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ರಾಜ್ಯದ ಕೈಗಾರಿಕೆ ಮತ್ತು ಐಟಿ ಸಚಿವ ಮೇಕಪತಿ ಗೌತಮ್ ರೆಡ್ಡಿ ಅವರ ಅಕಾಲಿಕ ನಿಧನಕ್ಕೆ ತೀವ್ರ ಆಘಾತ ವ್ಯಕ್ತ ಪಡಿಸಿದ್ದಾರೆ.