ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆ: 21 ಪಾಲಿಕೆಗಳಲ್ಲಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ ಜಯಭೇರಿ!

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ್ದು, ಎಲ್ಲಾ 21 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಿದೆ.

Published: 23rd February 2022 12:48 AM  |   Last Updated: 23rd February 2022 01:03 PM   |  A+A-


ಎಂಕೆ ಸ್ಟಾಲಿನ್

The New Indian Express

ಚೆನ್ನೈ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ್ದು, ಎಲ್ಲಾ 21 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಿದೆ. ಮೈತ್ರಿಕೂಟವು 130 ಪುರಸಭೆಗಳು ಮತ್ತು 350 ಪಟ್ಟಣ ಪಂಚಾಯಿತಿಗಳಲ್ಲಿ 50ರಷ್ಟು ವಾರ್ಡ್ ಸದಸ್ಯ ಸ್ಥಾನಗಳ ಸರಳ ಬಹುಮತದ ಗಡಿಯನ್ನು ದಾಟಿದೆ.

138 ಪುರಸಭೆಗಳು, 489 ಪಟ್ಟಣ ಪಂಚಾಯಿತಿಗಳು, 21 ಪಾಲಿಕೆಗಳಿಗೆ ಫೆಬ್ರವರಿ 19 ರಂದು ಚುನಾವಣೆ ನಡೆದಿತ್ತು. 2011ರಲ್ಲಿ ನಡೆದ ನಗರ ನಾಗರಿಕ ಚುನಾವಣೆಯಲ್ಲಿ ಆಗಿನ ಆಡಳಿತಾರೂಢ ಎಐಎಡಿಎಂಕೆ ಎಲ್ಲಾ 10 ನಿಗಮಗಳಲ್ಲಿ ಜಯಗಳಿಸಿತ್ತು.

21 ಪಾಲಿಕೆಗಳ 1,373 ವಾರ್ಡ್‌ಗಳ ಪೈಕಿ ಡಿಎಂಐ ಮೈತ್ರಿಕೂಟ 1,100 ವಾರ್ಡ್‌ಗಳಲ್ಲಿ ಜಯಗಳಿಸಿದರೆ, ಎಐಎಡಿಎಂಕೆ 164 ರಲ್ಲಿ ಗೆದ್ದಿದೆ. 138 ಪುರಸಭೆಗಳಾದ್ಯಂತ 3824 ವಾರ್ಡ್‌ಗಳಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು 2,666 ಅಥವಾ ಶೇಕಡಾ 70ರಷ್ಟು ವಾರ್ಡ್‌ಗಳನ್ನು ಪಡೆದುಕೊಂಡಿದೆ. 110 ರಿಂದ 120 ಅಧ್ಯಕ್ಷ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

7,621 ವಾರ್ಡ್‌ ಸದಸ್ಯರ ಪೈಕಿ 5,009 ಶೇಕಡ 65ರಷ್ಟು ವಾರ್ಡ್‌ ಸದಸ್ಯ ಸ್ಥಾನಗಳನ್ನು ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ. ಎಐಎಡಿಎಂಕೆ 368 ಮತ್ತು 1,206 ವಾರ್ಡ್‌ಗಳಲ್ಲಿ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿದೆ.

16 ಪಾಲಿಕೆ ವಾರ್ಡ್‌ಗಳು, 56 ಪುರಸಭೆ ವಾರ್ಡ್‌ಗಳು ಮತ್ತು 230 ಪಟ್ಟಣ ಪಂಚಾಯಿತಿ ವಾರ್ಡ್‌ಗಳಲ್ಲಿ ಸ್ವಂತ ಬಲದಿಂದ ಸ್ಪರ್ಧಿಸಿದ್ದ ಬಿಜೆಪಿ ಗೆಲುವು ಸಾಧಿಸಿದೆ. ಅದೇ ರೀತಿ ನಗರಸಭೆಯಲ್ಲಿ 12 ಹಾಗೂ ಪಟ್ಟಣ ಪಂಚಾಯಿತಿಯಲ್ಲಿ 23 ವಾರ್ಡ್‌ ಸದಸ್ಯ ಸ್ಥಾನಗಳನ್ನು ಡಿಎಂಡಿಕೆ ಗೆದ್ದುಕೊಂಡಿದೆ. ಎನ್‌ಟಿಕೆ 6 ಪಟ್ಟಣ ಪಂಚಾಯಿತಿ ವಾರ್ಡ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಟ ಕಮಲ್ ಹಾಸನ್ ಅವರ ಎಂಎನ್‌ಎಂ ಯಾವುದೇ ವಾರ್ಡ್‌ನಲ್ಲಿ ಗೆಲ್ಲಲು ವಿಫಲವಾಗಿದೆ.


Stay up to date on all the latest ರಾಷ್ಟ್ರೀಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp