ಉತ್ತರ ಪ್ರದೇಶ ಚುನಾವಣೆ: ಸಮಾಜವಾದಿ ಪಕ್ಷಕ್ಕೆ ರಾಷ್ಟ್ರೀಯ ಕಿಸಾನ್ ಮಂಚ್ ಬೆಂಬಲ
ಉತ್ತರ ಪ್ರದೇಶ ವಿಧಾನಸಭೆಗೆ ಬುಧವಾರ ನಾಲ್ಕನೆ ಹಂತದ ಮತದಾನ ನಡೆಯುತ್ತಿದ್ದು, ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ(ಎಸ್ಪಿ) ಬೆಂಬಲ ನೀಡುವುದಾಗಿ ರೈತ ಸಂಘಟನೆ ರಾಷ್ಟ್ರೀಯ ಕಿಸಾನ್ ಮಂಚ್ ಪ್ರಕಟಿಸಿದೆ.
Published: 23rd February 2022 02:53 PM | Last Updated: 23rd February 2022 02:53 PM | A+A A-

ಅಖಿಲೇಶ್ ಯಾದವ್
ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಬುಧವಾರ ನಾಲ್ಕನೆ ಹಂತದ ಮತದಾನ ನಡೆಯುತ್ತಿದ್ದು, ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ(ಎಸ್ಪಿ) ಬೆಂಬಲ ನೀಡುವುದಾಗಿ ರೈತ ಸಂಘಟನೆ ರಾಷ್ಟ್ರೀಯ ಕಿಸಾನ್ ಮಂಚ್ ಪ್ರಕಟಿಸಿದೆ.
ಈ ಸಂಬಂಧ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಇಂದು ಪತ್ರ ಬರೆದಿರುವ ರಾಷ್ಟ್ರೀಯ ಕಿಸಾನ್ ಮಂಚ್ನ ರಾಷ್ಟ್ರೀಯ ಅಧ್ಯಕ್ಷ ಶೇಖರ್ ದೀಕ್ಷಿತ್ ಅವರು, ಸಮಾಜವಾದಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಲು ತಮ್ಮ ಸಂಘಟನೆ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಉತ್ತರ ಪ್ರದೇಶ 4ನೇ ಹಂತದ ಚುನಾವಣೆ: ಈವರೆಗೆ ಶೇ.22.62ರಷ್ಟು ಮತದಾನ
ಆಡಳಿತಾರೂಢ ಬಿಜೆಪಿ ರೈತರ ಕಲ್ಯಾಣಕ್ಕಾಗಿ ಏನನ್ನೂ ಮಾಡದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಮಾತನಾಡುತ್ತಿರುವುದು ದುರದೃಷ್ಟಕರ ಎಂದು ದೀಕ್ಷಿತ್ ಪತ್ರದಲ್ಲಿ ತಿಳಿಸಿದ್ದಾರೆ.
ಬಿಜೆಪಿಯವರು ಜನರಲ್ಲಿ ಧಾರ್ಮಿಕ ಉನ್ಮಾದ ಮೂಡಿಸಿ ಮತ್ತೆ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದು, ಆಡಳಿತ ಪಕ್ಷ ಈಸ್ಟ್ ಇಂಡಿಯಾ ಕಂಪನಿಯಂತೆ ವರ್ತಿಸುತ್ತಿದ್ದು, ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ರೈತ ಮುಖಂಡ ಆರೋಪಿಸಿದ್ದಾರೆ.
ರಾಷ್ಟ್ರೀಯ ಕಿಸಾನ್ ಮಂಚ್ನ ತುರ್ತು ಸಭೆಯಲ್ಲಿ ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಿದ ನಂತರ ಎಸ್ಪಿಗೆ ಬೆಂಬಲ ನೀಡುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.