ಹಳದಿ ಸೀರೆಯಿಂದ ಕಪ್ಪು ಟೀ ಶರ್ಟ್ ವರೆಗೆ...: ನೋಟ, ಉಡುಪಿನಿಂದ ಸೆನ್ಸೇಷನ್ ಹುಟ್ಟಿಸಿರುವ ಉತ್ತರ ಪ್ರದೇಶದ ಚುನಾವಣಾಧಿಕಾರಿ!

ರೀನಾ ದ್ವಿವೇದಿ,(Reena Dwivedi) ಬಹುಶಃ ಈ ಹೆಸರು ಹಲವರಿಗೆ ನೆನಪಿರಬಹುದು, 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ, ನಂತರ 2019ರ ಲೋಕಸಭೆ ಚುನಾವಣೆ ವೇಳೆ ಭಾರೀ ಸುದ್ದಿಯಾಗಿದ್ದರು.

Published: 23rd February 2022 11:55 AM  |   Last Updated: 23rd February 2022 12:42 PM   |  A+A-


Reena Dwivedi in 2019 and 2022

2019ರಲ್ಲಿ ಮತ್ತು 2022ರಲ್ಲಿ ರೀನಾ ದ್ವಿವೇದಿ

Online Desk

ರೀನಾ ದ್ವಿವೇದಿ,(Reena Dwivedi) ಬಹುಶಃ ಈ ಹೆಸರು ಹಲವರಿಗೆ ನೆನಪಿರಬಹುದು, 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ, ನಂತರ 2019ರ ಲೋಕಸಭೆ ಚುನಾವಣೆ ವೇಳೆ ಭಾರೀ ಸುದ್ದಿಯಾಗಿದ್ದರು.

ಉತ್ತರ ಪ್ರದೇಶದ ಮಹಿಳಾ ಚುನಾವಣಾ ಮತಗಟ್ಟೆ ಅಧಿಕಾರಿ ಈ ರೀನಾ ದ್ವಿವೇದಿ, 2019ರ ಲೋಕಸಭೆ ಚುನಾವಣೆ ವೇಳೆ ಸ್ವೀವ್ ಲೆಸ್ ಬ್ಲೌಸ್ ತೊಟ್ಟು, ಹಳದಿ ಬಣ್ಣದ ಸೀರೆ(Yellow saree) ತೊಟ್ಟು ಕೂದಲನ್ನು ಇಳಿಬಿಟ್ಟು, ಕೂಲಿಂಗ್ ಗ್ಲಾಸ್ ಧರಿಸಿ ಮತಪೆಟ್ಟಿಗೆಯೊಂದಿಗೆ ಸ್ಟೈಲ್ ಆಗಿ ಮುಗುಳು ನಗುತ್ತಾ ಮತಗಟ್ಟೆಗೆ ಬಂದು ಕ್ಯಾಮರಾ ಕಣ್ಣಿಗೆ ಸೆರೆಯಾಗಿ ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದ್ದರು. 

ಇಂದು ಉತ್ತರ ಪ್ರದೇಶ ವಿಧಾನಸಭೆ(Uttara Pradesh assembly poll 2022) ಚುನಾವಣೆಗೆ 4ನೇ ಹಂತದ ಮತದಾನ ನಡೆಯುತ್ತಿದೆ. ಇದಕ್ಕೂ ಮುನ್ನ ನಿನ್ನೆ ಮತಪೆಟ್ಟಿಗೆಯನ್ನು ಮತಗಟ್ಟೆಗೆ ಹೊತ್ತು ತಂದಿದ್ದ ರೀನಾ ದ್ವಿವೇದಿ ಈ ಬಾರಿ ಕೂಡ ತಮ್ಮ ನೋಟದಿಂದ ಮತ್ತೊಮ್ಮೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ, ನೋಡುಗರ ಮನಸೂರೆಗೊಂಡಿದ್ದಾರೆ. 

100%

ಈ ಬಾರಿ ಅವರು ತೊಟ್ಟಿದ್ದು ತೋಳಿಲ್ಲದ ಕಪ್ಪು ಟಾಪ್(Black tee shirt) ಮತ್ತು ಬೀಜ್ ಪ್ಯಾಂಟ್. ಅವರ ಮೈಮಾಟಕ್ಕೆ ಸುತ್ತಮುತ್ತಲಿದ್ದವರು ಮನಸೋತಿದ್ದಾರೆ. ನಿನ್ನೆ ಸಾಯಂಕಾಲ ಆಶಿಯಾನ ಮತಕೇಂದ್ರದ ಸ್ಮೃತಿ ಉಪವನಕ್ಕೆ ಬಂದ ಕೂಡಲೇ ಅಲ್ಲಿದ್ದ ಹಲವು ಪೊಲೀಸರು ಮತ್ತು ಪಾರಾ ಮಿಲಿಟರಿ ಪಡೆ ಸಿಬ್ಬಂದಿ ರೀನಾ ದ್ವಿವೇದಿಯವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ಸೀರೆಯಿಂದ ಈ ಬಾರಿ ಪ್ಯಾಂಟ್-ಶರ್ಟ್ ಗೆ ದಿರಿಸು ಬದಲಾದ ಬಗ್ಗೆ ಕೇಳಿದಾಗ 2019ರಲ್ಲಿ ಸೀರೆ ತೊಟ್ಟಿದ್ದೆ, ಇದು 2022 ಅಲ್ಲವೇ, ಹಾಗಾಗಿ ಈ ಬದಲಾವಣೆ ಎಂದಿದ್ದಾರೆ. ತಮ್ಮ ಧಿರಿಸು, ನೋಟದಿಂದ ಸಾರ್ವಜನಿಕರ ಮನಸೂರೆಗೊಂಡಿರುವ ರೀನಾ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಟ್ರೆಂಡ್ ಆಗಿರುವ ರೀಲ್ಸ್ ವಿಡಿಯೊ ಮಾಡಿ ಹಾಕುತ್ತಾರೆ, ಇನ್ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ.

ರೀನಾ ದ್ವಿವೇದಿಯವರು ಲಕ್ನೊದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಹಿರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇಂದು ನಡೆಯುತ್ತಿರುವ 4ನೇ ಹಂತದ ಮತದಾನದಲ್ಲಿ ಮೊಹನ್ಲಾಲ್ ಗಂಜ್ ಮತಗಟ್ಟೆ ಕೇಂದ್ರದ ಬಸ್ತಿಯಾನ್ ಗೊಸೈಗಂಜ್ 114 ಎಂಬಲ್ಲಿ ಮತಗಟ್ಟೆ ಅಧಿಕಾರಿಯಾಗಿ ಡ್ಯೂಟಿ ಮಾಡುತ್ತಿದ್ದಾರೆ.

ಪ್ರತಿಯೊಬ್ಬರೂ ಮತ ಚಲಾಯಿಸಿ, ಪ್ರಜಾಪ್ರಭುತ್ವದಲ್ಲಿ ನೀವು ಹಾಕುವ ಒಂದೊಂದು ಮತವೂ ದೇಶದ ಭವಿಷ್ಯವನ್ನು ಬದಲಾಯಿಸುವಲ್ಲಿ ಸಹಾಯ ಮಾಡುತ್ತದೆ. ದೇಶವನ್ನು ಸದೃಢಗೊಳಿಸಿ ಎಂದು ರೀನಾ ದ್ವಿವೇದಿ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ. 


Stay up to date on all the latest ದೇಶ news
Poll
Ashok Gehlot-Shashi Tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಅಶೋಕ್ ಗೆಹ್ಲೋಟ್
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp