ಚತ್ತೀಸ್ ಗಢ: ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಟಿಎಫ್ ಯೋಧನ ಹತ್ಯೆ ಮಾಡಿದ ನಕ್ಸಲರು
ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ವಿಶೇಷ ಕಾರ್ಯಪಡೆ (ಎಸ್ ಟಿಎಫ್) ಯೋಧನನ್ನು ನಕ್ಸಲರು ಚತ್ತೀಸ್ ಗಢದಲ್ಲಿ ಹತ್ಯೆ ಮಾಡಿದ್ದಾರೆ.
Published: 25th February 2022 04:01 PM | Last Updated: 25th February 2022 04:42 PM | A+A A-

ಸಾಂಕೇತಿಕ ಚಿತ್ರ
ಬಿಜಾಪುರ್: ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ವಿಶೇಷ ಕಾರ್ಯಪಡೆ (ಎಸ್ ಟಿಎಫ್) ಯೋಧನನ್ನು ನಕ್ಸಲರು ಚತ್ತೀಸ್ ಗಢದಲ್ಲಿ ಹತ್ಯೆ ಮಾಡಿದ್ದಾರೆ.
ಮೃತ ಯೋಧ ಚಿಕಿತ್ಸೆಗಾಗಿ ಒಂದು ತಿಂಗಳ ದೀರ್ಘಾವಧಿ ರಜೆಯಲ್ಲಿದ್ದರು. ಘಟನೆ ರೆಡ್ಡಿ ರಸ್ತೆ ಪ್ರದೇಶದಲ್ಲಿ ನಡೆದಿದ್ದು, ಹತ್ಯೆಗೂ ಮುನ್ನ ಯೋಧನನ್ನು ತೀವ್ರವಾಗಿ ಥಳಿಸಲಾಗಿದೆ ಎಂದು ಪ್ರಾಥಮಿಕ ವರದಿಗಳ ಮೂಲಕ ತಿಳಿದುಬಂದಿದೆ.
ಅರ್ಜುನ್ ಕುದಿಯಮ್ ಮೃತ ಎಸ್ ಟಿಎಫ್ ಯೋಧನಾಗಿದ್ದು, ಗಂಗಲೂರ್ ಪೊಲೀಸ್ ಠಾಣೆಯ ವ್ಯಾಪ್ತಿಯ ಧನೋರಾ ಗ್ರಾಮದ ನಿವಾಸಿಯಾಗಿದ್ದಾರೆ. ಅಲ್ಟ್ರಾಗಳು ಯೋಧನನ್ನು ಹತ್ಯೆ ಮಾಡಿ, ಆತನ ಮೃತ ಶರೀರವನ್ನು ರೆಡ್ಡಿ ರಸ್ತೆಯಲ್ಲಿ ಎಸೆದು ಹೋಗಿದ್ದಾರೆ. ಅಷ್ಟೇ ಅಲ್ಲದೇ, ಸ್ಥಳದಲ್ಲಿ ಗಂಗಲೂರ್ ನ ಮಾವೋವಾದಿ ಸಂಘಟನೆಯ ಸದಸ್ಯರು ಕರಪತ್ರಗಳನ್ನು ಎಸೆದಿದ್ದು, ಘಟನೆಗೆ ಹೊಣೆ ಹೊತ್ತಿದ್ದಾರೆ.
ಯೋಧ ತಾನಾಗಿಯೇ ಘಟನೆ ನಡೆದ ಆ ಪ್ರದೇಶಕ್ಕೆ ತೆರಳಿದ್ದರೋ ಅಥವಾ ನಕ್ಸಲರಿಂದ ಅಪರಹಣಗೊಂಡಿದ್ದರೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.