ಕೋವಿಡ್ ನಿಂದ ಭಾರತದಲ್ಲಿ ತಂದೆ ತಾಯಿ ಕಳೆದುಕೊಂಡ ಮಕ್ಕಳ ಸಂಖ್ಯೆ ಎಷ್ಟು ಗೊತ್ತಾ?
ಲ್ಯಾನ್ಸೆಟ್ ಹೆಲ್ತ್ ಜರ್ನಲ್ ಪ್ರಕಾರ ಕೋವಿಡ್-19 ಸಾಂಕ್ರಾಮಿಕದಿಂದ ಭಾರತದಲ್ಲಿ 1.9 ಮಿಲಿಯನ್ ಗೂ ಅಧಿಕ ಮಕ್ಕಳು ತಮ್ಮ ತಂದೆ ತಾಯಿ ಅಥವಾ ಪೋಷಕರನ್ನು ಕಳೆದುಕೊಂಡಿದ್ದಾರೆ.
Published: 25th February 2022 01:43 PM | Last Updated: 25th February 2022 01:53 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಲ್ಯಾನ್ಸೆಟ್ ಹೆಲ್ತ್ ಜರ್ನಲ್ ಪ್ರಕಾರ ಕೋವಿಡ್-19 ಸಾಂಕ್ರಾಮಿಕದಿಂದ ಭಾರತದಲ್ಲಿ 1.9 ಮಿಲಿಯನ್ ಗೂ ಅಧಿಕ ಮಕ್ಕಳು ತಮ್ಮ ತಂದೆ ತಾಯಿ ಅಥವಾ ಪೋಷಕರನ್ನು ಕಳೆದುಕೊಂಡಿದ್ದಾರೆ.
ವಿಶ್ವದಾದ್ಯಂತ ಕೋವಿಡ್-19 ಸಾಂಕ್ರಾಮಿಕದಿಂದ ತಂದೆ- ತಂದೆ ಅಥವಾ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ 5.2 ಮಿಲಿಯನ್ ಗೂ ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಸಾಂಕ್ರಾಮಿಕದ ಮೊದಲ 14 ತಿಂಗಳ ನಂತರ ಮೇ1, 2021 ರಿಂದ ಅಕ್ಟೋಬರ್ 31, 2021ರ ಆರು ತಿಂಗಳ ಅವಧಿಯಲ್ಲಿ ಕೋವಿಡ್-19 ನಿಂದ ಅನಾಥರಾದ ಮಕ್ಕಳ ಸಂಖ್ಯೆಯಲ್ಲಿ ದುಪ್ಪಟು ಹೆಚ್ಚಳವಾಗಿರುವುದಾಗಿ ಅಂದಾಜಿಸಲಾಗಿದೆ. ವಿಶ್ವದಲ್ಲಿ 10 ರಿಂದ 17 ವರ್ಷದೊಳಗಿನ ಮೂವರು ಮಕ್ಕಳಲ್ಲಿ ಇಬ್ಬರು ಕೋವಿಡ್ ನಿಂದ ತಮ್ಮ ಪೋಷಕರನ್ನು ಕಳೆದುಕೊಂಡಿರುವುದಾಗಿ ಹೊಸ ಅಧ್ಯಯನ ಸಲಹೆ ಮಾಡಿದೆ.
ಕೋವಿಡ್ -19 ಸಾವಿನ ಕುರಿತು ಹೆಚ್ಚಿನ ಜಾಗತಿಕ ಮಾಹಿತಿ ಲಭ್ಯವಾಗುತ್ತಿದ್ದಂತೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಈ ಅಧ್ಯಯನದ ಪ್ರಮುಖ ಲೇಖಕ ಲಂಡನ್ ನ ಇಂಪೀರಿಯಲ್ ಕಾಲೇಜಿನ ಜೂಲಿಯೆಟ್ ಅನ್ವಿನ್ ಹೇಳಿದ್ದಾರೆ.
ಜನವರಿ 2022ರವರೆಗೂ ಸುಮಾರು 6.7 ಮಿಲಿಯನ್ ಮಕ್ಕಳು ಅನಾಥರಾಗಿರುವ ಬಗ್ಗೆ ಹೊಸ ಮಾಹಿತಿದಿಂದ ತಿಳಿದುಬಂದಿದೆ. ಅಕ್ಟೋಬರ್ 2021ರವರೆಗೂ ನಾವು ಅಂದಾಜಿಸಿದ್ದೇವೆ, ಇನ್ನೂ ಸಾಂಕ್ರಾಮಿಕ ಅಂತ್ಯವಾಗಿಲ್ಲ. ಆದ್ದರಿಂದ ಕೋವಿಡ್ ನಿಂದ ಅನಾಥರಾದ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ ಎಂದು ಅನ್ವಿನ್ ತಿಳಿಸಿದ್ದಾರೆ.