ಬಿಹಾರ: ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಸಿಆರ್ಪಿಎಫ್ ಅಧಿಕಾರಿ, ಯೋಧನಿಗೆ ಗಾಯ!
ಬಿಹಾರದ ಗಯಾ ಜಿಲ್ಲೆಯ ಕಾಡಿನಲ್ಲಿ ನಕ್ಸಲರು ಐಇಡಿ ಸ್ಫೋಟ ನಡೆಸಿದ್ದು ಇದರಲ್ಲಿ ಕೋಬ್ರಾ ಕಮಾಂಡೋ ಘಟಕಕ್ಕೆ ಸೇರಿದ ಸಿಆರ್ಪಿಎಫ್ ಅಧಿಕಾರಿ ಹಾಗೂ ಯೋಧನೋರ್ವ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 26th February 2022 01:20 AM | Last Updated: 26th February 2022 01:20 AM | A+A A-

ಸಾಂದರ್ಭಿಕ ಚಿತ್ರ
ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಕಾಡಿನಲ್ಲಿ ನಕ್ಸಲರು ಐಇಡಿ ಸ್ಫೋಟ ನಡೆಸಿದ್ದು ಇದರಲ್ಲಿ ಕೋಬ್ರಾ ಕಮಾಂಡೋ ಘಟಕಕ್ಕೆ ಸೇರಿದ ಸಿಆರ್ಪಿಎಫ್ ಅಧಿಕಾರಿ ಹಾಗೂ ಯೋಧನೋರ್ವ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಂದ 100 ಕಿ.ಮೀ ದೂರದಲ್ಲಿರುವ ಚಕ್ರಬಂಧ ಅರಣ್ಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಹಾಯಕ ಕಮಾಂಡೆಂಟ್ ವಿಭೋರ್ ಕುಮಾರ್ ಸಿಂಗ್ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟದಲ್ಲಿ ಹೆಡ್ ಕಾನ್ಸ್ಟೆಬಲ್ ಸುರೇಂದ್ರ ಸಿಂಗ್ ಕೂಡ ಗಾಯಗೊಂಡಿದ್ದಾರೆ.
ಮಾವೋವಾದಿಗಳು 205ನೇ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಗಸ್ತು ತಂಡದ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಕತ್ತಲೆಯಾಗಿದ್ದರಿಂದ ಹೆಲಿಕಾಪ್ಟರ್ ಮೂಲಕ ರಕ್ಷಣೆ ಕಾರ್ಯಾಚರಣೆಗೆ ತೊಡಕಾಗಿದ್ದು ಭದ್ರತಾ ಸಿಬ್ಬಂದಿ ಗಾಯಾಳುಗಳನ್ನು ರಸ್ತೆ ಮೂಲಕ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾರೆ.