ಆಪರೇಷನ್ ಗಂಗಾ: ಉಕ್ರೇನ್ ಗಡಿ ದಾಟಿ ಮುಂಬೈಗೆ ಆಗಮಿಸಿದ 219 ಭಾರತೀಯರು!
ಯುದ್ದ ಭಾದಿತ ಉಕ್ರೇನ್ ನಿಂದ ಮೊದಲ ಬಾರಿಗೆ 219 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಉಕ್ರೇನ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಗಳ ಕಾರ್ಯಾಚರಣೆ ಬಂದ್ ಆಗಿರುವುದರಿಂದ ನೆರೆಯ ರೊಮಾನಿಯಾದಿಂದ ಟೇಕ್ ಆಫ್ ಆದ ವಿಮಾನ, ಮುಂಬೈಗೆ ಬಂದಿಳಿದಿದೆ.
Published: 26th February 2022 08:53 PM | Last Updated: 26th February 2022 08:53 PM | A+A A-

ಮುುಂಬೈಗೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು
ಮುಂಬೈ: ಯುದ್ದ ಭಾದಿತ ಉಕ್ರೇನ್ ನಿಂದ ಮೊದಲ ಬಾರಿಗೆ 219 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಉಕ್ರೇನ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಗಳ ಕಾರ್ಯಾಚರಣೆ ಬಂದ್ ಆಗಿರುವುದರಿಂದ ನೆರೆಯ ರೊಮಾನಿಯಾದಿಂದ ಟೇಕ್ ಆಫ್ ಆದ ವಿಮಾನ, ಮುಂಬೈಗೆ ಬಂದಿಳಿದಿದೆ.
ಉಕ್ರೇನ್ ನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ವಿಮಾನ ಮುಂಬೈಗೆ ಬಂದಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್, ತಾಯ್ನಾಡಿಗೆ ಬರಮಾಡಿಕೊಂಡರು. ನಂತರ ಅವರೊಂದಿಗೆ ಸಂವಾದ ನಡೆಸಿದ ಸಚಿವರು, ಸರ್ಕಾರ ಬೆನ್ನಿಗಿದ್ದು, ಉಕ್ರೇನ್ ನಲ್ಲಿರುವ ತಮ್ಮ ಸ್ನೇಹಿತರಿಗೆ ತಿಳಿಸುವಂತೆ ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ಪಿಯೂಷ್ ಗೋಯೆಲ್, ಉಕ್ರೇನ್ನಿಂದ ಸುರಕ್ಷಿತವಾಗಿ ಸ್ಥಳಾಂತರಗೊಂಡ ಭಾರತೀಯರ ಮುಖದಲ್ಲಿನ ನಗು ನೋಡಿ ಸಂತೋಷವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪ್ರತಿಯೊಬ್ಬ ಭಾರತೀಯರ ಸುರಕ್ಷತೆಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದ್ದಾರೆ.
Welcome back to the motherland!
— Piyush Goyal (@PiyushGoyal) February 26, 2022
Glad to see the smiles on the faces of Indians safely evacuated from Ukraine at the Mumbai airport.
Govt. led by PM @NarendraModi ji is working relentlessly to ensure safety of every Indian. pic.twitter.com/fjuzjtNl9r
वन्दे मातरम
— Piyush Goyal (@PiyushGoyal) February 26, 2022
The mother never leaves her children in peril. The first batch of evacuees return home to safety from Ukraine.#OperationGanga pic.twitter.com/mNLkXw3rMn