ಉಕ್ರೇನ್ ಬಿಕ್ಕಟ್ಟು: ಬ್ರಿಟನ್ ನಲ್ಲಿ ಬಹುಪಕ್ಷೀಯ ಸಮರಾಭ್ಯಾಸಕ್ಕೆ ವಿಮಾನ ಕಳುಹಿಸದಿರಲು ಐಎಎಫ್ ನಿರ್ಧಾರ
ಉಕ್ರೇನ್ ಬಿಕ್ಕಟ್ಟಿನಿಂದ ಉಂಟಾಗುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಿಂಗಳು ಬ್ರಿಟನ್ ನಲ್ಲಿ ನಡೆಯುವ ಬಹುಪಕ್ಷೀಯ ಸಮರಾಭ್ಯಾಸಕ್ಕೆ ತನ್ನ ವಿಮಾನವನ್ನು ನಿಯೋಜಿಸದಿರಲು ಭಾರತೀಯ ವಾಯುಪಡೆ ನಿರ್ಧರಿಸಿದೆ.
Published: 26th February 2022 11:45 AM | Last Updated: 26th February 2022 11:45 AM | A+A A-

ಭಾರತೀಯ ವಾಯುಪಡೆ ವಿಮಾನ
ನವದೆಹಲಿ: ಉಕ್ರೇನ್ ಬಿಕ್ಕಟ್ಟಿನಿಂದ ಉಂಟಾಗುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಿಂಗಳು ಬ್ರಿಟನ್ ನಲ್ಲಿ ನಡೆಯುವ ಬಹುಪಕ್ಷೀಯ ಸಮರಾಭ್ಯಾಸಕ್ಕೆ ತನ್ನ ವಿಮಾನವನ್ನು ನಿಯೋಜಿಸದಿರಲು ಭಾರತೀಯ ವಾಯುಪಡೆ ನಿರ್ಧರಿಸಿದೆ.
ಮಾರ್ಚ್ 6ರಿಂದ 27 ರವರೆಗೆ ಯುನೈಟೆಡ್ ಕಿಂಗ್ಡಮ್ನ ವಾಡಿಂಗ್ಟನ್ನಲ್ಲಿ 'ಕೋಬ್ರಾ ವಾರಿಯರ್' ಸಮರಾಭ್ಯಾಸ ಆಯೋಜಿಸಲಾಗಿದೆ.
ಇದನ್ನು ಓದಿ: ರಷ್ಯಾ-ಉಕ್ರೇನ್ ಯುದ್ಧ: ಉಕ್ರೇನ್ ತೊರೆದು ರೊಮೇನಿಯಾ ಪ್ರವೇಶಿಸಿದ 470 ಭಾರತೀಯ ವಿದ್ಯಾರ್ಥಿಗಳು!
"ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಯುಕೆಯಲ್ಲಿ ನಡೆಯುವ ಸಮರಾಭ್ಯಾಸ ಕೋಬ್ರಾ ವಾರಿಯರ್ 2022 ಗಾಗಿ ತನ್ನ ವಿಮಾನವನ್ನು ನಿಯೋಜಿಸದಿರಲು ನಿರ್ಧರಿಸಲಾಗಿದೆ" ಎಂದು ಐಎಎಫ್ ಟ್ವೀಟ್ ಮಾಡಿದೆ.
ಐದು ಯುದ್ಧ ವಿಮಾನಗಳನ್ನು ಸಮರಾಭ್ಯಾಸಕ್ಕೆ ಕಳುಹಿಸುವುದಾಗಿ ಐಎಎಫ್ ಹೇಳಿದ ಕೆಲವು ದಿನಗಳ ನಂತರ ಈ ಪ್ರಕಟಣೆ ಹೊರಬಿದ್ದಿದೆ.
ಐಎಎಫ್ ಹಿಂದೆ ಸರಿಯಲು ಕಾರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ರಷ್ಯಾ ಉಕ್ರೇನ್ ಮೇಲೆ ಮಿಲಿಟರಿ ದಾಳಿಯ ನಂತರ ಉಂಟಾಗಿರುವ ಬಿಕ್ಕಟ್ಟು ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ತಿಳಿದುಬಂದಿದೆ.