ಮಣಿಪುರ ಚುನಾವಣೆ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದು ಸಿಬ್ಬಂದಿ ಬಲಿ
ನಾವಣಾ ಕರ್ತವ್ಯದಲ್ಲಿದ್ದ ಮಣಿಪುರ ಚುನಾವಣಾ ಸಿಬ್ಬಂದಿ ಆಕಸ್ಮಿಕ ಗುಂಡಿನ ದಾಳಿಗೆ ಬಲಿಯಾಗಿರುವ ಘಟನೆ ಚುರಚಂದಪುರ ಜಿಲ್ಲೆಯ ತಿಪೈಮುಖ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.
Published: 28th February 2022 10:11 PM | Last Updated: 01st March 2022 01:27 PM | A+A A-

ಮಣಿಪುರ
ಇಂಫಾಲ: ನಾವಣಾ ಕರ್ತವ್ಯದಲ್ಲಿದ್ದ ಮಣಿಪುರ ಚುನಾವಣಾ ಸಿಬ್ಬಂದಿ ಆಕಸ್ಮಿಕವಾಗಿ ಗುಂಡು ಸಿಡಿದು ಬಲಿಯಾಗಿರುವ ಘಟನೆ ಚುರಚಂದಪುರ ಜಿಲ್ಲೆಯ ತಿಪೈಮುಖ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.
ಮೃತ ಚುನಾವಣಾ ಸಿಬ್ಬಂದಿ ಸಿಬ್ಬಂದಿಯನ್ನು ಕಾಕ್ಚಿಂಗ್ ಜಿಲ್ಲೆಯ ನಿವಾಸಿ ನೌರೆಮ್ ಇಬೋಚೌಬಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮಣಿಪುರ ಚುನಾವಣೆ: ಮೊದಲ ಹಂತದಲ್ಲಿ ಶೇ.78.3 ರಷ್ಟು ಮತದಾನ
ಈ ಬಗ್ಗೆ ಮಾಹಿತಿ ನೀಡಿದ ಮುಖ್ಯ ಚುನಾವಣಾ ಕಚೇರಿ (ಸಿಇಒ) ರಾಜೇಶ್ ಅಗರ್ವಾಲ್ ಸಿಬ್ಬಂದಿಯ ಸಾವಿಗೆ ಸಂತಾಪ ಸೂಚಿಸಿದ್ದು, ಮೊದಲ ಹಂತದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಸರ್ವೀಸ್ ರೈಫಲ್ನಿಂದ ಆಕಸ್ಮಿಕವಾಗಿ ಗುಂಡು ಹಾರಿಸಿದ ವೇಳೆ ದುರ್ಘಟನೆ ನಡೆದಿದೆ. ದೇಹವನ್ನು ಇಂಫಾಲ್ಗೆ ವಿಮಾನದಲ್ಲಿ ರವಾನಿಸಲಾಗಿದೆ ಮತ್ತು ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಿದರು.