ಓಮಿಕ್ರಾನ್ ಎಫೆಕ್ಟ್: ಎರಡು ವಾರ ದೈಹಿಕ ವಿಚಾರಣೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಓಮಿಕ್ರಾನ್ ರೂಪಾಂತರಿ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ತಿಂಗಳ 3 ರಿಂದ ಎರಡು ವಾರಗಳ ಕಾಲ ದೈಹಿಕ ವಿಚಾರಣೆ ರದ್ದುಗೊಳಿಸಿದ್ದು, ಎಲ್ಲ ಪ್ರಕರಣಗಳನ್ನು ವರ್ಚುವಲ್ ಮಾದರಿಯಲ್ಲಿ ವಿಚಾರಣೆ...
Published: 03rd January 2022 11:17 AM | Last Updated: 03rd January 2022 11:17 AM | A+A A-

ಸುಪ್ರೀಂ ಕೋರ್ಟ್
ನವದೆಹಲಿ: ಓಮಿಕ್ರಾನ್ ರೂಪಾಂತರಿ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ತಿಂಗಳ 3 ರಿಂದ ಎರಡು ವಾರಗಳ ಕಾಲ ದೈಹಿಕ ವಿಚಾರಣೆ ರದ್ದುಗೊಳಿಸಿದ್ದು, ಎಲ್ಲ ಪ್ರಕರಣಗಳನ್ನು ವರ್ಚುವಲ್ ಮಾದರಿಯಲ್ಲಿ ವಿಚಾರಣೆ ನಡೆಸಲು ನಿರ್ಧರಿಸಿದೆ.
ಈ ಸಂಬಂಧ ಸುಪ್ರೀಂ ಕೋರ್ಟ್ ಆಡಳಿತ ವಿಭಾಗ ಭಾನುವಾರ ಸಂಜೆ ಸುತ್ತೋಲೆ ಹೊರಡಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಹೈಬ್ರಿಡ್ ಮಾದರಿಯನ್ನು ಕೂಡಾ ಸ್ವಲ್ಪ ಕಾಲದವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.
ಇದನ್ನು ಓದಿ: ಪೆಗಾಸಸ್ ಬೇಹುಗಾರಿಕೆ ಆರೋಪದ ತನಿಖೆಗೆ ಸುಪ್ರೀಂ ಕೋರ್ಟ್ ತಡೆ
ದೇಶದಲ್ಲಿ ಸಾಂಕ್ರಾಮಿಕ ರೋಗ ತೀವ್ರಗೊಂಡಿದ್ದ ಕಾರಣ 2020 ಮಾರ್ಚ್ ನಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದೆ. ಕೊರೋನಾ ಸಾಂಕ್ರಾಮಿಕದ ತೀವ್ರತೆ ಕಡಿಮೆಯಾದ ಕಾರಣ… ಸುದೀರ್ಘ ಸಮಯ ವಾದಗಳನ್ನು ಆಲಿಸುವ ಅಗತ್ಯವಿರುವ ಪ್ರಕರಣಗಳನ್ನು ಬುಧವಾರ ಮತ್ತು ಗುರುವಾರ ದೈಹಿಕ ವಿಚಾರಣೆ ಮೂಲಕ ಆಲಿಸಲಾಗುವುದು ಎಂದು 2021 ಅಕ್ಟೋಬರ್ 7 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಈಗ ಅದನ್ನು ರದ್ದುಗೊಳಿಸಿದೆ.