15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ: CoWIN ಪೋರ್ಟಲ್ ನಲ್ಲಿ 6 ಲಕ್ಷ ನೋಂದಣಿ, ಲಸಿಕೆ ಮಿಶ್ರವಾಗದಂತೆ ಜಾಗ್ರತೆಗೆ ಸರ್ಕಾರ ಎಚ್ಚರಿಕೆ!
15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾಗುತ್ತಿರುವ ಸಂದರ್ಭದಲ್ಲಿ ಸದ್ಯಕ್ಕೆ ಕೊವಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲು ಅನುಮೋದನೆ ನೀಡಲಾಗಿದೆ.
Published: 03rd January 2022 09:53 AM | Last Updated: 03rd January 2022 01:32 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾಗುತ್ತಿರುವ ಸಂದರ್ಭದಲ್ಲಿ ಸದ್ಯಕ್ಕೆ ಕೊವಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲು ಅನುಮೋದನೆ ನೀಡಲಾಗಿದೆ. ಹೀಗಿರುವಾಗ ಲಸಿಕೆ ನೀಡಿಕೆಯಲ್ಲಿ ಎಚ್ಚರಿಕೆ ವಹಿಸುವಂತೆ ಬೇರೆ ಲಸಿಕೆಗಳು ಮಿಶ್ರವಾಗದಂತೆ ನೀಡದಂತೆ ತೀವ್ರ ಎಚ್ಚರ ವಹಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಹೊರಡಿಸಿದ್ದಾರೆ.
ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವಾಗ ಗೊಂದಲ ಉಂಟಾಗದಂತೆ ತಡೆಯಲು ಪ್ರತ್ಯೇಕ ಕೋವಿಡ್ ಲಸಿಕೆ ಕೇಂದ್ರಗಳು, ಪ್ರತ್ಯೇಕ ಸೆಷನ್ ಕೇಂದ್ರಗಳು, ಪ್ರತ್ಯೇಕ ಸರದಿ ಸಾಲು ಮತ್ತು ಪ್ರತ್ಯೇಕ ಲಸಿಕೆ ತಂಡವನ್ನು ರಚಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.
ಕೆಲವು ರಾಜ್ಯಗಳಲ್ಲಿ ಶಾಲೆಗಳಲ್ಲಿಯೇ ಲಸಿಕೆ ಶಿಬಿರಗಳನ್ನು ನಡೆಸಿದರೆ ಆದಷ್ಟು ಶೀಘ್ರವೇ ಲಸಿಕೆ ನೀಡಿಕೆ ಪೂರ್ಣಗೊಳಿಸುವಂತೆ ಹೇಳಲಾಗಿದೆ. ಉದಾಹರಣೆಗೆ ಗೋವಾದಲ್ಲಿ 15ರಿಂದ 18 ವರ್ಷದೊಳಗಿನ 72 ಸಾವಿರ ಮಕ್ಕಳಿಗೆ ಮುಂದಿನ 4 ದಿನಗಳಲ್ಲಿ ಕೊವಾಕ್ಸಿನ್ ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಕೇರಳ ರಾಜ್ಯದಲ್ಲಿ ಜನವರಿ 10ರವರೆಗೆ ಸಾಮಾನ್ಯ, ಜಿಲ್ಲೆ. ತಾಲ್ಲೂಕು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ವಿತರಿಸಲಾಗುತ್ತದೆ.
ಓಮಿಕ್ರಾನ್ ತೀವ್ರ ಹೆಚ್ಚಳ: ಕಳೆದ 10 ದಿನಗಳಿಂದ ಓಮಿಕ್ರಾನ್ ಕೊರೋನಾ ರೂಪಾಂತರಿ ಸೋಂಕು ತೀವ್ರವಾಗಿ ಹೆಚ್ಚಳವಾಗಿ ಹರಡುತ್ತಿದೆ. ಹಲವು ದೇಶಗಳಲ್ಲಿ ಈಗಾಗಲೇ ಮೂರ್ನಾಲ್ಕು ಪಟ್ಟು ಕೋವಿಡ್ ಕೇಸುಗಳು ಹೆಚ್ಚಳವಾಗಿದೆ. ಕಳೆದ ಬಾರಿ ಕೋವಿಡ್ ಎರಡನೇ ಅಲೆಯಂತೆ ಈ ಬಾರಿ ಕೂಡ ಕೋವಿಡ್ ಹೆಚ್ಚಳವಾದರೆ ದೇಶದ ವೈದ್ಯಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೋವಿಡ್-19: ಓಮಿಕ್ರಾನ್, ಕೊರೋನಾ ಆತಂಕ ಮಧ್ಯೆ 15 ವರ್ಷ ಮೇಲ್ಪಟ್ಟ ಹರೆಯದ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭ
ಇತ್ತೀಚೆಗೆ ಓಮಿಕ್ರಾನ್ ಹೆಚ್ಚಳವಾಗುತ್ತಿದ್ದಂತೆ ಸುಪ್ರೀಂ ಕೋರ್ಟ್ ಮತ್ತೆ ಮುಂದಿನ ಎರಡು ವಾರಗಳ ಕಾಲ ಆನ್ ಲೈನ್ ಮೂಲಕ ವಿಚಾರಣೆ ನಡೆಸಲು ನಿರ್ಧರಿಸಿದೆ. ಇನ್ನು ಹೈಕೋರ್ಟ್ ಗಳು ಕೂಡ ವರ್ಚುವಲ್ ವಿಚಾರಣೆ ನಡೆಸುತ್ತಿವೆ. ಒಡಿಶಾ ರಾಜ್ಯದಲ್ಲಿ 37 ಕೇಸುಗಳು ದಾಖಲಾಗಿವೆ.
ಒಟ್ಟಾರೆಯಾಗಿ, ನಿನ್ನೆ ಭಾನುವಾರ ಬೆಳಗ್ಗೆ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,525 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. 460 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ 351, ಗುಜರಾತ್ 136, ತಮಿಳುನಾಡು 117 ಮತ್ತು ಕೇರಳ 109 ನಂತರದ ಸ್ಥಾನದಲ್ಲಿವೆ. ದೆಹಲಿಯಲ್ಲಿ, ಕೇಸ್ ಪಾಸಿಟಿವಿಟಿ ದರವು 4.59% ಕ್ಕೆ ಏರಿದೆ.
ಆದರೆ ಹೆಚ್ಚಿನ ರೋಗಿಗಳು ರೋಗಲಕ್ಷಣಗಳಿಲ್ಲದ ಅಥವಾ ತುಂಬಾ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರುವುದರಿಂದ ಮತ್ತು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲದ ಕಾರಣ ಜನರು ಭಯಪಡಬೇಡಿ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿನ್ನೆ ಸಲಹೆ ನೀಡಿದ್ದರು.
CoWIN ಪ್ಲಾಟ್ಫಾರ್ಮ್ ನಲ್ಲಿ ನಿನ್ನೆ ಸಂಜೆಯವರೆಗೆ 15 ರಿಂದ 18 ವರ್ಷ ವಯಸ್ಸಿನ ಆರು ಲಕ್ಷಕ್ಕೂ ಹೆಚ್ಚು ನೋಂದಣಿಗಳನ್ನು ದಾಖಲಾಗಿದೆ. ಇಂದು ದೇಶಾದ್ಯಂತ ಅಭಿಯಾನ ಆರಂಭವಾಗಿದೆ.
ಲಸಿಕೆಗಳು ಮಿಶ್ರಣವಾಗದಂತೆ ನೋಡಿಕೊಳ್ಳಲು 15-18 ವರ್ಷ ವಯಸ್ಸಿನವರಿಗೆ ಪ್ರತ್ಯೇಕ ಲಸಿಕೆ ಕೇಂದ್ರಗಳು, ಸೆಷನ್ ಸೈಟ್ಗಳು, ಕ್ಯೂ ಮತ್ತು ವಿವಿಧ ಲಸಿಕೆ ತಂಡಗಳನ್ನು ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಒಂದೇ ದಿನ 175 ಹೊಸ ಓಮಿಕ್ರಾನ್ ಸೋಂಕು ಪ್ರಕರಣ ಪತ್ತೆ; ಒಟ್ಟಾರೆ ಸಂಖ್ಯೆ 1,700ಕ್ಕೆ ಏರಿಕೆ
ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಅವರು ಡಿಸೆಂಬರ್ 24 ರಂದು ಕೆಲವು ಷರತ್ತುಗಳೊಂದಿಗೆ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಭಾರತ್ ಬಯೋಟೆಕ್ನ ಕೋವಾಕ್ಸಿನ್ಗೆ ತುರ್ತು ಬಳಕೆಯ ಅಧಿಕಾರವನ್ನು ನೀಡಿದರು.
ರಾಜ್ಯಗಳ ಆರೋಗ್ಯ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಿನ್ನೆ ವೀಡಿಯೊ ಲಿಂಕ್ ಮೂಲಕ ಸಂವಾದ ನಡೆಸಿದ ಮಾಂಡವಿಯಾ, ಹೊಸ ಲಸಿಕೆ ಮಾರ್ಗಸೂಚಿಗಳ ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ ಅಭಿಯಾನದ ಮಾರ್ಗಸೂಚಿಗಳ ಪ್ರಕಾರ, CoWIN ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯ ಮೂಲಕ ಆನ್ಲೈನ್ನಲ್ಲಿ ಸ್ವಯಂ-ನೋಂದಣಿ ಮಾಡಿಕೊಳ್ಳಬಹುದು ಅಥವಾ ಇತರ ಎಲ್ಲಾ ವರ್ಗದ ಫಲಾನುಭವಿಗಳಂತೆಯೇ ಮೊಬೈಲ್ ಸಂಖ್ಯೆಯ ಮೂಲಕ ನೋಂದಾಯಿಸಿಕೊಳ್ಳಬಹುದು.
ನಿನ್ನೆ ಸಂಜೆ 7.50 ರವರೆಗೆ, 15 ರಿಂದ 18 ವರ್ಷದೊಳಗಿನ 6.35 ಲಕ್ಷಕ್ಕೂ ಹೆಚ್ಚು ಮಕ್ಕಳು ದೇಶದಲ್ಲಿ COWIN ಪ್ಲಾಟ್ಫಾರ್ಮ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ.