ಚೆನ್ನೈ: ಕಾರು ನಿಲ್ಲಿಸಿ, ಜನರಿಗೆ ಮಾಸ್ಕ್ ವಿತರಿಸಿದ ಮುಖ್ಯಮಂತ್ರಿ ಸ್ಟಾಲಿನ್- ವಿಡಿಯೋ
ತಮಿಳುನಾಡಿನಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇಂದು ಚೆನ್ನೈನ ಬೀದಿಗಳಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದ್ದಾರೆ.
Published: 04th January 2022 04:59 PM | Last Updated: 04th January 2022 04:59 PM | A+A A-

ಮಾಸ್ಕ್ ವಿತರಿಸಿದ ಮುಖ್ಯಮಂತ್ರಿ ಸ್ಟಾಲಿನ್
ಚೆನ್ನೈ: ತಮಿಳುನಾಡಿನಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇಂದು ಚೆನ್ನೈನ ಬೀದಿಗಳಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದ್ದಾರೆ.
ಟ್ವೀಟರ್ ನಲ್ಲಿ ಈ ವಿಡಿಯೋವನ್ನು ಮುಖ್ಯಮಂತ್ರಿ ಹಂಚಿಕೊಂಡಿದ್ದಾರೆ. ಇದರಲ್ಲಿ ಸ್ಟಾಲಿನ್ ತಮ್ಮ ಕಾರನ್ನು ನಿಲ್ಲಿಸಿದ ನಂತರ ಜನರಿಗೆ ಮಾಸ್ಕ್ ವಿತರಿಸುತ್ತಿರುವುದು ಇದೆ. ಕೆಲವರು ಮಾಸ್ಕ್ ಧರಿಸಿದೆ ಓಡಾಡುತ್ತಿದುದ್ದನ್ನು ನೋಡಿದ್ದಾಗಿ ಅವರು ಹೇಳಿದ್ದಾರೆ.
ಕೇಂದ್ರ ಕಚೇರಿಯಿಂದ ಕ್ಯಾಂಪ್ ಕಚೇರಿಗೆ ಹಿಂದಿರುಗುತ್ತಿದ್ದಾಗ ಕೆಲವು ಜನರು ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಓಡಾಡುತ್ತಿದ್ದಾಗಿ ತಮಿಳಿನಲ್ಲಿ ಅವರು ಬರೆದುಕೊಂಡಿದ್ದು, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮಾಸ್ಕ್ ಧರಿಸದವರಿಗೆ ನಗು ಮುಖದೊಂದಿಗೆ ಸ್ಟಾಲಿನ್ ಮಾಸ್ಕ್ ವಿತರಿಸುತ್ತಿರುವುದು ವಿಡಿಯೋದಲ್ಲಿದೆ.
தலைமைச் செயலகத்திலிருந்து முகாம் அலுவலகம் திரும்புகையில், சிலர் பொது இடங்களில் முகக்கவசம் அணியாமல் இருப்பதை கவனித்தேன். அவர்களுக்கு முகக்கவசம் வழங்கினேன்.
— M.K.Stalin (@mkstalin) January 4, 2022
அனைவரும் தயவுசெய்து முகக்கவசம் அணியுங்கள்!
தடுப்பூசி- முகக்கவசம்- கிருமிநாசினி- தனிமனித இடைவெளி ஆகியவற்றை கடைப்பிடிப்பீர்! pic.twitter.com/Xex4Nk9jh5