ಭಾರತದಲ್ಲಿ ಓಮಿಕ್ರಾನ್ ಗೆ ಮೊದಲ ಬಲಿ, ರಾಜಸ್ಥಾನದಲ್ಲಿ 73 ವರ್ಷದ ವ್ಯಕ್ತಿ ಸಾವು
ಕಳೆದ ವಾರ ರಾಜಸ್ಥಾನದ ಉದಯ್ಪುರದಲ್ಲಿ ವ್ಯಕ್ತಿಯೊಬ್ಬರು ಓಮಿಕ್ರಾನ್ ಸೋಂಕಿನಿಂದ ಸಾವನ್ನಪ್ಪಿದ್ದು, ಭಾರತದಲ್ಲಿ ಓಮಿಕ್ರಾನ್ನಿಂದ ದಾಖಲಾದ ಮೊದಲ ಸಾವು ಇದಾಗಿದೆ ಎಂದು ಬುಧವಾರ ಕೇಂದ್ರ ಆರೋಗ್ಯ ಸಚಿವಾಲಯದ...
Published: 05th January 2022 08:24 PM | Last Updated: 05th January 2022 08:24 PM | A+A A-

ಸಾಂದರ್ಭಿಕ ಚಿತ್ರ
ಉದಯ್ಪುರ: ಕಳೆದ ವಾರ ರಾಜಸ್ಥಾನದ ಉದಯ್ಪುರದಲ್ಲಿ ವ್ಯಕ್ತಿಯೊಬ್ಬರು ಓಮಿಕ್ರಾನ್ ಸೋಂಕಿನಿಂದ ಸಾವನ್ನಪ್ಪಿದ್ದು, ಭಾರತದಲ್ಲಿ ಓಮಿಕ್ರಾನ್ನಿಂದ ದಾಖಲಾದ ಮೊದಲ ಸಾವು ಇದಾಗಿದೆ ಎಂದು ಬುಧವಾರ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಈ ಬಗ್ಗೆ ದೃಢೀಕರಿಸಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, “ತಾಂತ್ರಿಕವಾಗಿ ಇದು ಓಮಿಕ್ರಾನ್ ಸಂಬಂಧಿತ ಸಾವು. ಅವರಿಗೆ ವಯಸ್ಸಾಗಿತ್ತು, ಮಧುಮೇಹದಂತಹ ಕೊಮೊರ್ಬಿಡಿಟಿಗಳು ಸಹ ಇದ್ದವು ಎಂದು ಹೇಳಿದ್ದಾರೆ.
ಇದನ್ನು ಓದಿ: ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 2,135ಕ್ಕೆ ಏರಿಕೆ; ಮಹಾರಾಷ್ಟ್ರದಲ್ಲೇ ಗರಿಷ್ಠ
ಜಿನೋಮ್ ಸೀಕ್ವೆನ್ಸಿಂಗ್ನಲ್ಲಿ ಓಮಿಕ್ರಾನ್ ಸೋಂಕಿಗೆ ಒಳಗಾದ 73 ವರ್ಷದ ವ್ಯಕ್ತಿಯು ಎರಡು ಬಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಡಿಸೆಂಬರ್ 31ರಂದು ಉದಯಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಡಿಸೆಂಬರ್ 21 ಮತ್ತು 25 ರಂದು ಈ ವ್ಯಕ್ತಿಗೆ ಎರಡು ಬಾರಿ ಕೊರೋನಾ ನೆಗೆಟಿವ್ ಬಂದಿತ್ತು. ಆದರೆ ಅವರು ಕೋವಿಡ್ ನಂತರ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ಉದಯಪುರ CMHO ಡಾ ದಿನೇಶ್ ಖರಾಡಿ ಅವರು ಹೇಳಿದ್ದಾರೆ.
ಈ ವ್ಯಕ್ತಿಗೆ ಡಿಸೆಂಬರ್ 15ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು ಮತ್ತು ಜ್ವರ, ಕೆಮ್ಮು ಇದ್ದ ಕಾರಣ ಉದಯ್ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಡಿಸೆಂಬರ್ 25 ರಂದು ಪಡೆದ ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶದಲ್ಲಿ ಓಮಿಕ್ರಾನ್ ಸೋಂಕಿಗೆ ಒಳಗಾಗಿರುವುದು ತಿಳಿದು ಬಂದಿತು ಎಂದು ಡಾ. ದಿನೇಶ್ ಖರಾಡಿ ತಿಳಿಸಿದ್ದಾರೆ.