ಪ್ಯಾಂಗಾಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚೀನಾದಿಂದ ಅತಿಕ್ರಮಣ: ಎಂಇಎ
ಪ್ಯಾಂಗಾಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚೀನಾ ಅತಿಕ್ರಮಣವಾಗಿ ಪ್ರವೇಶಿಸಿದೆ, ಈಶಾನ್ಯ ಲಡಾಖ್ ನ ಪ್ಯಾಂಗಾಂಗ್ ಲೇಕ್ ಬಳಿ ಅದು ಬ್ರಿಡ್ಜ್ ನಿರ್ಮಾಣ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
Published: 06th January 2022 08:43 PM | Last Updated: 07th January 2022 12:56 PM | A+A A-

ಎಂಇಎ ವಕ್ತಾರ ಅರಿಂದಂ ಬಗಚಿ
ನವದೆಹಲಿ: ಪ್ಯಾಂಗಾಂಗ್ ಬ್ರಿಡ್ಜ್ ಪ್ರದೇಶದಲ್ಲಿ ಚೀನಾ ಅತಿಕ್ರಮಣವಾಗಿ ಪ್ರವೇಶಿಸಿದೆ, ಈಶಾನ್ಯ ಲಡಾಖ್ ನ ಪ್ಯಾಂಗಾಂಗ್ ಲೇಕ್ ಬಳಿ ಅದು ಬ್ರಿಡ್ಜ್ ನಿರ್ಮಾಣ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
60 ವರ್ಷಗಳಿಂದ ಚೀನಾ ಈ ಪ್ರದೇಶದಲ್ಲಿ ಈ ರೀತಿಯಾಗಿ ಅತಿಕ್ರಮಣ ಮಾಡಿಕೊಂಡಿದ್ದು ಭಾರತ ಎಂದಿಗೂ ಇದನ್ನು ಒಪ್ಪಿಕೊಂಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಾಚಿ ತಿಳಿಸಿದ್ದಾರೆ.
ಇದೇ ವೇಳೆ ಅರುಣಾಚಲ ಪ್ರದೇಶದಲ್ಲಿ ಕೆಲವು ಭಾಗಗಳಿಗೆ ಮರುನಾಮಕರಣ ಮಾಡುವ ವಿಷಯದಲ್ಲೂ ಚೀನಾದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಗಾಚಿ, ಈಶಾನ್ಯ ಲಡಾಖ್ ನಲ್ಲಿ ತಿಕ್ಕಾಟಗಳಿರುವ ಪ್ರದೇಶಗಳಲ್ಲಿ ವಿವಾದ ಬಗೆಹರಿಸಿಕೊಳ್ಳುವುದಕ್ಕೆ ಚೀನಾ ಭಾರತದೊಂದಿಗೆ ರಚನಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಅಸಮರ್ಥನೀಯ ಪ್ರಾದೇಶಿಕ ಹಕ್ಕುಗಳನ್ನು ಬೆಂಬಲಿಸುವುದು ಹಾಸ್ಯಾಸ್ಪದ ನಡೆ ಎಂದೂ ಅವರು ಹೇಳಿದ್ದು ಭಾರತ ಚೀನಾ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಭಾರತದ ಭದ್ರತಾ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಗಚಿ ಹೇಳಿದ್ದಾರೆ.