ಸಿಬಿಎಸ್ ಸಿ 12ನೇ ತರಗತಿ ಪರೀಕ್ಷೆ: ಟೆಸ್ಟ್ ಅಂಕಗಳನ್ನು ಪರಿಗಣಿಸುವ ಕುರಿತ ಷರತ್ತಿಗೆ 'ಸುಪ್ರೀಂ' ನಕಾರ
ಕಳೆದ ವರ್ಷ ಜೂನ್ನಲ್ಲಿ ಸಿಬಿಎಸ್ ಸಿ 12 ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನ ನೀತಿಯಲ್ಲಿ ನಿರ್ದಿಷ್ಟಪಡಿಸಿದ ಷರತ್ತನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿಹಾಕಿದೆ. ಅದರಲ್ಲಿ ಟೆಸ್ಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಅಂತಿಮವೆಂದು ಪರಿಗಣಿಸಲಾಗುವುದು ಎಂದು ಹೇಳಲಾಗಿತ್ತು.
Published: 07th January 2022 04:31 PM | Last Updated: 07th January 2022 04:36 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕಳೆದ ವರ್ಷ ಜೂನ್ನಲ್ಲಿ ಸಿಬಿಎಸ್ ಸಿ 12 ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನ ನೀತಿಯಲ್ಲಿ ನಿರ್ದಿಷ್ಟಪಡಿಸಿದ ಷರತ್ತನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿಹಾಕಿದೆ. ಅದರಲ್ಲಿ ಟೆಸ್ಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಅಂತಿಮವೆಂದು ಪರಿಗಣಿಸಲಾಗುವುದು ಎಂದು ಹೇಳಲಾಗಿತ್ತು.
ನ್ಯಾಯಮೂರ್ತಿಗಳಾದ ಎ. ಎಮ್. ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ, ತನ್ನ ಕೊನೆಯ ಶೈಕ್ಷಣಿಕ ಫಲಿತಾಂಶಗಳ ಅಂತಿಮ ಘೋಷಣೆಗೆ ವಿಷಯದಲ್ಲಿ ಪಡೆದ ಎರಡು ಅಂಕಗಳಲ್ಲಿ ಉತ್ತಮವಾದ ಅಂಕಗಳನ್ನು ಸ್ವೀಕರಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಅಭ್ಯರ್ಥಿಗೆ ಆಯ್ಕೆಯನ್ನು ಒದಗಿಸುವಂತೆ ಹೇಳಿದೆ.
ಕಳೆದ ವರ್ಷ 12 ನೇ ತರಗತಿಯಲ್ಲಿ ತಮ್ಮ ಅಂಕಗಳನ್ನು ಸುಧಾರಿಸಲು ಸಿಬಿಎಸ್ಇ ಪರೀಕ್ಷೆಗೆ ಹಾಜರಾಗಿದ್ದ ಕೆಲವು ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಜೂನ್ 17, 2021 ರ ನೀತಿಯ ಷರತ್ತು 28 ರಲ್ಲಿನ ನಿಬಂಧನೆಯ ಬಗ್ಗೆ ತಕರಾರು ಮಾಡಲಾಗಿದೆ ಎಂದು ಹೇಳಿದೆ. ಈ ನೀತಿಯ ಪ್ರಕಾರ, ಟೆಸ್ಟ್ ನಲ್ಲಿ ಗಳಿಸಿದ ಅಂಕಗಳನ್ನು ಅಂತಿಮವೆಂದು ಪರಿಗಣಿಸಲಾಗುತಿತ್ತು.
ಕಳೆದ ವರ್ಷ ಕೊರೋನಾ ಸಾಂಕ್ರಾಮಿಕದ ಕಾರಣದಿಂದಾಗಿ ಸಿಬಿಎಸ್ ಇ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಿತ್ತು.