ಗುಜರಾತ್: ಕೊರೋನಾ ನಿಯಮ ಉಲ್ಲಂಘಿಸಿ ನಾಯಿ ಹುಟ್ಟುಹಬ್ಬಕ್ಕೆ 7 ಲಕ್ಷ ರೂ. ಖರ್ಚು ಮಾಡಿದ ವ್ಯಕ್ತಿಯ ಬಂಧನ
ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ನಾಯಿಯ ಹುಟ್ಟುಹಬ್ಬ ಆಚರಿಸಿದ ಆರೋಪದ ಮೇಲೆ ಮೂವರನ್ನು ಗುಜರಾತ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Published: 08th January 2022 07:24 PM | Last Updated: 08th January 2022 07:24 PM | A+A A-

ನಾಯಿ ಹುಟ್ಟುಹಬ್ಬ
ಗಾಂಧಿನಗರ: ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ತನ್ನ ನಾಯಿಯ ಹುಟ್ಟುಹಬ್ಬ ಆಚರಿಸಿದ ಆರೋಪದ ಮೇಲೆ ಮೂವರನ್ನು ಗುಜರಾತ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನಾಯಿಯ ಅದ್ಧೂರಿ ಬರ್ಥ್ ಡೇ ಪಾರ್ಟಿಯ ವೀಡಿಯೊ ವೈರಲ್ ಆದ ನಂತರ ಎಚ್ಚೆತ್ತುಕೊಂಡ ಪೊಲೀಸರು, ನಾಯಿ ಮಾಲೀಕ ನವ ನರೋಡಾ ಅಹಮದಾಬಾದ್ ನಿವಾಸಿ ಚಿರಾಗ್ ಅಲಿಯಾಸ್ ದಾಗೋ ಮಿನೇಶ್ಭಾಯ್ ಪಟೇಲ್ ಹಾಗೂ ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ: ಕೊರೋನಾ ಉಲ್ಬಣ: ವೈಬ್ರೆಂಟ್ ಗುಜರಾತ್ ಸಮಾವೇಶ ಮುಂದೂಡಿದ ಗುಜರಾತ್ ಸರ್ಕಾರ
ಚಿರಾಗ್ ಅವರು ಪಾನ್ ಪಾರ್ಲರ್ ಹೊಂದಿದ್ದು, ಶುಕ್ರವಾರ ರಾತ್ರಿ ತಮ್ಮ ಅಚ್ಚುಮೆಚ್ಚಿನ ನಾಯಿಯ ಹುಟ್ಟುಹಬ್ಬದ ಪಾರ್ಟಿಯನ್ನು ಪಾರ್ಟಿ ಪ್ಲಾಟ್ ನ ನಿಕೋಲ್ನಲ್ಲಿ ಆಯೋಜಿಸಿದ್ದರು ಮತ್ತು ಇದಕ್ಕೆ ತಮ್ಮ ಸಂಬಂಧಿಕರನ್ನು ಆಹ್ವಾನಿಸಿದ್ದರು. ಅಹಮದಾಬಾದ್ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಅತಿ ಹೆಚ್ಚು ಜನ ಮಾಸ್ಕ್ ಧರಿಸದೆ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಖ್ಯಾತ ಜಾನಪದ ಗಾಯಕಿ ಕಾಜಲ್ ಮೆಹ್ರಿಯಾ ಅವರು ಈ ಪಾರ್ಟಿಯಲ್ಲಿ ಹಾಡುಗಳನ್ನು ಹಾಡಿದರು.
ಪಾರ್ಟಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿರಾಗ್ ಅಲಿಯಾಸ್ ಡಾಗೋ ಪಟೇಲ್, ಉರ್ವೀಶ್ ಪಟೇಲ್, ದಿವ್ಯೇಶ್ ಮೆಹ್ರಿಯಾ ಮತ್ತು ಇತರ ಹಲವರು ಮಾಸ್ಕ್ ಧರಿಸದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ವಿಡಿಯೋ ನೋಡಿದ ಪೊಲೀಸರು, ಪಾರ್ಟಿ ನಡೆಸಿದವರ ವಿರುದ್ಧ ಸಾಂಕ್ರಾಮಿಕ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.