ಭಾರೀ ಹಿಮಪಾತದ ನಡುವೆ ಭಾರತೀಯ ಸೇನೆಯಿಂದ ಗರ್ಭೀಣಿಯ ತುರ್ತು ಸ್ಥಳಾಂತರ: ವಿಡಿಯೋ
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಕಡಿದಾದ ಪ್ರದೇಶದಲ್ಲಿ ಭಾರೀ ಹಿಮಪಾತದ ನಡುವೆ ಗರ್ಭಿಣಿ ಮಹಿಳೆಯೊಬ್ಬರನ್ನು ಭಾರತೀಯ ಸೇನೆಯ ವೈದ್ಯಕೀಯ ತಂಡ ತುರ್ತಾಗಿ ಸ್ಥಳಾಂತರಿಸಿದೆ.
Published: 08th January 2022 05:01 PM | Last Updated: 08th January 2022 06:05 PM | A+A A-

ಗರ್ಭಿಣಿಯನ್ನು ಹೊತ್ತು ತರುತ್ತಿರುವ ಸೈನಿಕರು
ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಕಡಿದಾದ ಪ್ರದೇಶದಲ್ಲಿ ಭಾರೀ ಹಿಮಪಾತದ ನಡುವೆ ಗರ್ಭಿಣಿ ಮಹಿಳೆಯೊಬ್ಬರನ್ನು ಭಾರತೀಯ ಸೇನೆಯ ವೈದ್ಯಕೀಯ ತಂಡ ತುರ್ತಾಗಿ ಸ್ಥಳಾಂತರಿಸಿದೆ.
ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿಯ ಘಾಗ್ಗರ್ ಹಳ್ಳಿಯಿಂದ ಗರ್ಭಿಣಿ ಮಹಿಳೆಯನ್ನು ನಾಲ್ಕು ಸೈನಿಕರನ್ನೊಳಗೊಂಡ ತಂಡ ಸ್ಟ್ರೇಚರ್ ಮೂಲಕ ಬರಾಮುಲ್ಲಾದ ಸಲ್ಸಾನವರೆಗೂ ಹೊತ್ತು ತಂದಿದ್ದು, ನಂತರ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
#WATCH | Amid heavy snowfall, Indian Army medical team conducted an emergency evacuation of a pregnant woman from Ghaggar Hill village near LOC and brought her to an ambulance at Salasan in Baramulla, Jammu & Kashmir. pic.twitter.com/jAUsnnawDd
— ANI (@ANI) January 8, 2022
ತುರ್ತು ವೈದ್ಯಕೀಯ ನೆರವಿಗೆ ಸ್ಥಳೀಯರು ಮಾಡಿದ ಮನವಿ ಮೇರೆಗೆ ಸೇನಾ ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿದ್ದು, ಗರ್ಭಿಣಿ ಮಹಿಳೆ ಆಸ್ಪತ್ರೆ ಸೇರಿಸುವಲ್ಲಿ ಸಹಾಯ ಮಾಡಿದೆ.