ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಲಗೇಜ್ ಕಳೆದು ಹೋದರೆ ಹೀಗೆ ಮಾಡಿ...
ಇನ್ನು ಮುಂದೆ ರೈಲಿನಲ್ಲಿ ಲಗೇಜ್ ಕಳೆದು ಹೋದರೆ ಚಿಂತಿಸಬೇಕಿಲ್ಲ. ಏಕೆಂದರೆ ಭಾರತೀಯ ರೈಲ್ವೆ ಕಳೆದುಹೋಗಿರುವ ಲಗೇಜ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದಾದ ನೂತನ ಸೇವೆಯೊಂದನ್ನು ಜಾರಿಗೆ ತಂದಿದೆ.
Published: 11th January 2022 09:01 PM | Last Updated: 12th January 2022 01:29 PM | A+A A-

ಭಾರತೀಯ ರೈಲ್ವೆ
ಮುಂಬೈ: ಇನ್ನು ಮುಂದೆ ರೈಲಿನಲ್ಲಿ ಲಗೇಜ್ ಕಳೆದು ಹೋದರೆ ಚಿಂತಿಸಬೇಕಿಲ್ಲ. ಏಕೆಂದರೆ ಭಾರತೀಯ ರೈಲ್ವೆ ಕಳೆದುಹೋಗಿರುವ ಲಗೇಜ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದಾದ ನೂತನ ಸೇವೆಯೊಂದನ್ನು ಜಾರಿಗೆ ತಂದಿದೆ.
ಪಶ್ಚಿಮ ರೈಲ್ವೆಯು ಆರ್‌ಪಿಎಫ್ ಪಡೆಯೊಂದಿಗೆ ‘ಮಿಷನ್ ಅಮಾನತ್’ ಸೇವೆಯನ್ನು ಪ್ರಯಾಣಿಕರಿಗಾಗಿ ಜಾರಿಗೆ ತಂದಿದೆ. ಈ ಹೊಸ ಉಪಕ್ರಮದ ಅಡಿಯಲ್ಲಿ, ಪ್ರಯಾಣಿಕರು ತಮ್ಮ ಕಳೆದುಹೋದ ಲಗೇಜ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದು ಹಾಗೂ ಮರಳಿ ಪಡೆಯಬಹುದಾಗಿದೆ. ಇನ್ಮುಂದೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ಹಾಗೂ ಅವರ ಲಗೇಜ್ ಬಗ್ಗೆ ಕಣ್ಣಿಡಲಿದೆ.
ಇದನ್ನೂ ಓದಿ: 2020-21ಕ್ಕೆ ಸಾಂಕ್ರಾಮಿಕ ಕೋವಿಡ್ ಹೊಡೆತ: ತತ್ಕಾಲ್ ಟಿಕೆಟ್‌ಗಳಿಂದ ಐಆರ್‌ಸಿಟಿಸಿಗೆ 511 ಕೋಟಿ ರೂ. ಲಾಭ!
ಮಿಷನ್ ಅಮಾನತ್ ಅಡಿಯಲ್ಲಿ ಕಳೆದು ಹೋದ ಸರಂಜಾಮುಗಳ ವಿವರಗಳನ್ನು ಛಾಯಾಚಿತ್ರಗಳೊಂದಿಗೆ ಪಶ್ಚಿಮ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಪ್ರಯಾಣಿಕರು ಮಿಷನ್ ಅಮಾನತ್-ಆರ್‌ಪಿಎಫ್ ವೆಬ್‌ಸೈಟ್ ನ (http://wr.indianrailways.gov.in) ಗೆ ಪ್ರಯಾಣಿಕರು ಭೇಟಿ ನೀಡಿ, ಅಲ್ಲಿ ಪೋಸ್ಟ್ ಮಾಡಲಾದ ಲಗೇಜ್ ಫೋಟೋಗಳ ಜೊತೆಗೆ ಪರಿಶೀಲನೆ ಮಾಡಿ, ಹಿಂಪಡೆಯಬಹುದಾಗಿದೆ.
A novel initiative " Mission Amanat" has been taken by RPF / WR to make it easier for the passengers to get back their lost luggage.
— Western Railway (@WesternRly) January 10, 2022
Passengers can check details of lost luggage with pics posted under link "Mission Amanat - RPF on website https://t.co/glw3GnNyQL@RailMinIndia pic.twitter.com/xhXKeO4Qqq
2.58 ಕೋಟಿ ಮೌಲ್ಯದ ಸರಕು ಪ್ರಯಾಣಿಕರಿಗೆ ವಾಪಸ್
ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, 2021 ರ ಜನವರಿಯಿಂದ ಡಿಸೆಂಬರ್ ವರೆಗೆ ಪಶ್ಚಿಮ ರೈಲ್ವೆ ವಲಯ ಒಟ್ಟು 1,317 ರೈಲ್ವೆ ಪ್ರಯಾಣಿಕರಿಗೆ ಸೇರಿದ್ದ 2.58 ಕೋಟಿ ರೂಪಾಯಿ ಮೌಲ್ಯದ ಕಳೆದು ಹೋದ ಲಗೇಜ್ ಗಳನ್ನು ಹಿಂದಿರುಗಿಸಿದೆ. ರೈಲ್ವೆ ಅಧಿಕಾರಿಗಳು ಲಗೇಜ್ ಗಳನ್ನು ಕಳೆದುಕೊಂಡ ಮಾಲೀಕರಿಂದ ಸರಿಯಾದ ಮಾಹಿತಿ ಪಡೆದ ಕೊಂಡ ಬಳಿಕವಷ್ಟೇ ಬ್ಯಾಗುಗಳನ್ನು ವಾಪಸ್ ನೀಡುತ್ತಾರೆ.