ಸಿದ್ಧಾರ್ಥ್ ಕ್ಷಮೆ ಕೋರಿದ್ದು ಸಂತಸ ತಂದಿದೆ: ಸೈನಾ ನೆಹ್ವಾಲ್

ಆಕ್ಷೇಪಾರ್ಹ ಹೇಳಿಕೆ ಕುರಿತು ನಟ ಸಿದ್ಧಾರ್ಥ್ ಕ್ಷಮೆ ಕೋರಿದ್ದು ಸಂತಸ ತಂದಿದೆ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಬಿಜೆಪಿ ನಾಯಕಿಯಾಗಿರುವ ಸೈನಾ ನೆಹ್ವಾಲ್ ಅವರು ಬುಧವಾರ ಹೇಳಿದ್ದಾರೆ. 

Published: 12th January 2022 11:41 AM  |   Last Updated: 12th January 2022 01:42 PM   |  A+A-


file photo

ಸಂಗ್ರಹ ಚಿತ್ರ

Online Desk

ನವದೆಹಲಿ: ಆಕ್ಷೇಪಾರ್ಹ ಹೇಳಿಕೆ ಕುರಿತು ನಟ ಸಿದ್ಧಾರ್ಥ್ ಕ್ಷಮೆ ಕೋರಿದ್ದು ಸಂತಸ ತಂದಿದೆ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಬಿಜೆಪಿ ನಾಯಕಿಯಾಗಿರುವ ಸೈನಾ ನೆಹ್ವಾಲ್ ಅವರು ಬುಧವಾರ ಹೇಳಿದ್ದಾರೆ. 

ಸಿದ್ದಾರ್ಥ್ ಕ್ಷಮೆಯಾಚನೆ ಕುರಿತು ಪ್ರತಿಕ್ರಿಯೆ ನೀಡಿರುವ ಸೈನಾ ನೆಹ್ವಾಲ್ ಅವರು, , ಮೊದಲು ನನ್ನ ಬಗ್ಗೆ ಹೇಳಿದ್ದರು. ಇದೀಗ ಕ್ಷಮೆಯಾಚಿಸಿದ್ದಾರೆ. ಈ ವಿಚಾರ ಯಾವ ಕಾರಣಕ್ಕೆ ಇಷ್ಟೊಂದು ವೈರಲ್ ಆಗಿದೆ ಎಂಬುದು ನನಗೆ ಗೊತ್ತಿಲ್ಲ. ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಸಿದ್ಧಾರ್ಥ್ ಕ್ಷಮೆ ಕೇಳಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. 

ನೀವು ಮಹಿಳೆಯೊಬ್ಬರನ್ನು ಈ ರೀತಿ ಗುರಿಯಾಗಿಸಿಕೊಳ್ಳಬಾರದು. ಆದರೂ ಪರವಾಗಿಲ್ಲ. ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಾನಿರುವ ಸ್ಥಾನದಲ್ಲಿ ನಾನು ಸಂತೋಷವಾಗಿದ್ದೇನೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ. 

ಇದನ್ನೂ ಓದಿ: ನನ್ನ ಜೋಕನ್ನು ಸಮರ್ಥನೆ ಮಾಡಿಕೊಳ್ಳಲು ಆಗುತ್ತಿಲ್ಲ: ಸೈನಾ ನೆಹ್ವಾಲ್ ಕ್ಷಮೆ ಕೋರಿದ ನಟ ಸಿದ್ಧಾರ್ಥ್

ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿರುವ ಸಿದ್ಧಾರ್ಥ್ ಅವರು, ಪ್ರೀತಿಯ ಸೈನಾ ನೆಹ್ವಾಲ್, ನಿಮ್ಮ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ನಾನು ಬರೆದ ಅಸಭ್ಯ ಹಾಸ್ಯಕ್ಕಾಗಿ ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಅನೇಕ ವಿಷಯಗಳಲ್ಲಿ ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರಬಹುದು. ನಿಮ್ಮ ಟ್ವೀಟ್‌ಅನ್ನು ನಾನು ಓದಿದಾಗ ನನಗಾದ ನಿರಾಶೆ ಅಥವಾ ಕೋಪವನ್ನು ನನ್ನ ಧ್ವನಿ ಮತ್ತು ಮಾತುಗಳಲ್ಲಿ ಸಮರ್ಥಿಸಲು ಸಾಧ್ಯವಿಲ್ಲ. ಜೋಕ್‌ಗೆ ಸಂಬಂಧಿಸಿದಂತೆ ಅದು ಉತ್ತಮ ಜೋಕ್ ಆಗಿರಲಿಲ್ಲ. ಕ್ಷಮಿಸಿ. 

’ನನ್ನ ಹಾಸ್ಯವು ಯಾವುದೇ ದುರುದ್ದೇಶಪೂರಿತ ಉದ್ದೇಶವನ್ನು ಹೊಂದಿರಲಿಲ್ಲ. ನಾನು ನಿಷ್ಠಾವಂತ ಸ್ತ್ರೀವಾದಿ ಮಿತ್ರ ಮತ್ತು ನನ್ನ ಟ್ವೀಟ್‌ನಲ್ಲಿ ಯಾವುದೇ ಲಿಂಗವನ್ನು ಸೂಚಿಸಿಲ್ಲ ಮತ್ತು ಮಹಿಳೆಯಾಗಿ ನಿಮ್ಮ ಮೇಲೆ ಆಕ್ರಮಣ ಮಾಡುವ ಉದ್ದೇಶವಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದನ್ನು ಇಲ್ಲಿಗೆ ಬಿಟ್ಟು ನೀವು ನನ್ನ ಪತ್ರವನ್ನು ಸ್ವೀಕರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ ಎಂದು ಹೇಳಿ ಕ್ಷಣೆಯಾಚಿಸಿದ್ದರು. ಅಲ್ಲದೆ, ವಿವಾದಾತ್ಮಕ ಟ್ವೀಟ್'ನ್ನೂ ಸಿದ್ಧಾರ್ಥ್ ಡಿಲೀಟ್ ಮಾಡಿದ್ದರು.

ಕೆಲವೇ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಗೆ ಪಂಜಾಬ್‌ನಲ್ಲಿ ಭದ್ರತಾ ಲೋಪ ಉಂಟಾಗಿತ್ತು. ಈ ವಿಚಾರ ಕುರಿತು ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಸೈನಾ ನೆಹ್ವಾಲ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನಟ ಸಿದ್ದಾರ್ಥ್ ಬ್ಲಾಕ್ ಮಾಡುವಂತೆ ಟ್ವೀಟರ್ ಗೆ ಮಹಿಳಾ ಆಯೋಗ ಸೂಚನೆ

‘’ತನ್ನ ದೇಶದ ಪ್ರಧಾನಿಯ ಭದ್ರತೆಯಲ್ಲಿ ಯಾವುದೇ ದೇಶ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಧಾನಿ ಮೋದಿ ಅವರಿಗೆ ಪಂಜಾಬ್‌ನಲ್ಲಿ ಉಂಟಾದ ಭದ್ರತಾ ಲೋಪವನ್ನು ನಾನು ಕಟು ಪದಗಳಿಂದ ಟೀಕಿಸುತ್ತೇನೆ’’ ಎಂದು ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. ಸೈನಾ ನೆಹ್ವಾಲ್ ಅವರ ಈ ಟ್ವೀಟ್‌ಗೆ ನಟ ಸಿದ್ದಾರ್ಥ್ ಪ್ರತಿಕ್ರಿಯೆ ಕೊಟ್ಟಿದ್ದರು.

‘’Subtle cock champion of the world.. ಭಾರತವು ರಕ್ಷಕರನ್ನು ಹೊಂದಿರುವುದಕ್ಕೆ ದೇವರಿಗೆ ಧನ್ಯವಾದಗಳು. ಶೇಮ್ ಆನ್ ಯೂ ರಿಹಾನ್ನಾ’’ ಎಂದು ಸೈನಾ ನೆಹ್ವಾಲ್ ಟ್ವೀಟ್‌ಗೆ ನಟ ಸಿದ್ದಾರ್ಥ್ ರಿಪ್ಲೈ ಮಾಡಿದ್ದರು. ಸಿದ್ದಾರ್ಥ್‌ ಅವರ ಈ ಟ್ವೀಟ್‌ಗೆ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. 


Stay up to date on all the latest ದೇಶ news
Poll
Kharge-tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp